ರಾಜ್ಯ

ಎರಡು ತಿಂಗಳ ನಂತರ ದಿನಸಿ ಕಿಟ್ ವಿತರಿಸಲು ಮುಂದಾದ ಸಚಿವ ರಮೇಶ ಜಾರಕಿಹೊಳಿ

ಬೆಳಗಾವಿ prajakiran.com  : ಕುಂದಾನಗರಿ ಬೆಳಗಾವಿಗೆ ಕೋರೊನಾ ಬಂದು ಎರಡು ತಿಂಗಳ ನಂತರ ರಾಜ್ಯ ಜಲ ಸಂಪನ್ಮೂಲ ಸಚಿವ ಹಾಗೂ ಗೋಕಾಕ ಶಾಸಕರಾಗಿರುವ ರಮೇಶ ಜಾರಕಿಹೊಳಿ ಎಚ್ಚೆತ್ತಿದ್ದಾರೆ. ರಮೇಶ ಜಾರಕಿಹೊಳಿ ಗೋಕಾಕ್ ಕ್ಷೇತ್ರದ ಜನರಿಗೆ ಈಗ ದಿನಸಿ ಕಿಟ್ ವಿತರಿಸಲು ಮುಂದಾಗಿದ್ದಾರೆ. ಗೋಕಾಕ ಸಾವುಕಾರ ರಮೇಶ ಜಾರಕಿಹೊಳಿ ನಡೆಗೆ ಜನತೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಜನಕ್ಕೆ ತುತ್ತು ಅನ್ನ ಸಿಗದಿದ್ದಾಗ ಸಚಿವರು ಎಲ್ಲಿ ಹೋಗಿದ್ದರು ಎಂದು ಜನರುರಮೇಶ ಜಾರಕಿಹೊಳಿಯವರನ್ನು ಪ್ರಶ್ನಿಸುತ್ತಿದ್ದಾರೆ.   ಸದ್ಯ ಲಾಕ್ ಡೌನ್ ಸಡಿಲಿಕೆಯಾಗಿ ಅಂಗಡಿ […]

ರಾಜ್ಯ

ಏಳು ತಿಂಗಳ ಮಗುವಿನಲ್ಲಿ ಕಾಣಿಸಿಕೊಂಡ ಕರೋನಾ : ಬೆಳಗಾವಿ ಜಿಲ್ಲೆಯ ಕಲ್ಲೂರ ಗ್ರಾಮ ಸೀಲ್ ಡೌನ್

ಬೆಳಗಾವಿ prajakiran.com : ಏಳು ತಿಂಗಳ ಹೆಣ್ಣು ಮಗುವಿನಲ್ಲಿ ಮಹಾಮಾರಿ  ಕರೋನಾ ಸೋಂಕು ವಕ್ಕರಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿರುವ ಕಲ್ಲೂರ ಗ್ರಾಮವನ್ನು ಕರೋನಾ ಸೋಂಕಿನ ಪ್ರಕರಣ ಕಂಡು ಬಂದ ಬೆನ್ನಲೇ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಮರನಾಥ ರೆಡ್ಡಿ ಪರಿಶೀಲನೆ ನಡೆಸಿದರು. ಗ್ರಾಮಕ್ಕೆ ಪ್ರವೇಶಿಸುವ ಪ್ರಮುಖ ದ್ವಾರ ಬಾಗಿಲು ಬಂದ ಮಾಡಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಅಲ್ಲದೆ, ಈಗಾಗಲೇ ಸೋಂಕಿತ ಮಗುವಿನ […]

ರಾಜ್ಯ

ಕಾಡು ಪ್ರಾಣಿಗಳ ಬೇಟೆಯಾಡಿ ಟಿಕ್ ಟಾಕ್ ಮಾಡಿ ಅಂದರ್ ಆದ ಯುವಕರು

ಕಲಬರುಗಿ prajakiran.com : ಇತ್ತೀಚೆಗೆ ಕೆಲವು ಯುವಕರು ಕಾಡು ಪ್ರಾಣಿಗಳು / ಸಾಕು ಪ್ರಾಣಿಗಳ ಬೇಟೆ ಆಡಿ ಸಾಮಾಜಿಕ ಜಾಲ ತಾಣಗಳಾದ ಟಿಕ್ ಟಾಕ್, ವಾಟ್ಸ್ ಅಪ್, ಫೇಸಬುಕ್ ಗಳಲ್ಲಿ ಹರಿ ಬಿಟ್ಟು   ಸಾಲು ಸಾಲಾಗಿ ಜೈಲ್ ಸೇರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.  ಕಲಬರುಗಿಯಲ್ಲಿ ಮತ್ತೇ ಇಂತಹ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಕಲಬುರ್ಗಿ ಪ್ರ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ವಾನತಿ ಎಂ.ಎಂ.   ಹಾಗೂ   ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬುರಾವ್ ಪಾಟೀಲ ಅವರ ಮಾರ್ಗದರ್ಶನದಲ್ಲಿ  […]

ರಾಜ್ಯ

ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಅಭಿಯಾನ ಆರಂಭ

ರಾಯಚೂರು prajakiran.com : ಕರೊನಾ ಲಾಕ್ ಡೌನ್ ನಡುವೆಯೇ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ವಾಲ್ಮೀಕಿ ನಾಯಕ ಸಮಾಜದ ಜನರು ಅಭಿಯಾನ ಶುರು ಮಾಡಿದ್ದು, ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮೀಸಲಾತಿ ಹೆಚ್ಚಳ ಅಭಿಯಾನಕ್ಕೆ ಫೇಸ್ಬುಕ್, ವಾಟ್ಸಾಪ್, ಟ್ವಿಟರ್ಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಅಭಿಯಾನಕ್ಕೆ ಬ್ರಹ್ಮಾನಂದ ಸ್ವಾಮೀಜಿ ಸಾಥ್ ನೀಡಿದ್ದಾರೆ. ಅಭಿಯಾನದೊಂದಿಗೆ ನಾನು ಕೂಡ ಎಂದ ಬ್ರಹ್ಮಾನಂದ ಸ್ವಾಮೀಜಿ ಹೇಳಿದ್ದಾರೆ. ಬ್ರಹ್ಮಾನಂದ ಸ್ವಾಮೀಜಿ, ಚಿಕ್ಕಬಳ್ಳಾಪುರದ ವಾಲ್ಮೀಕಿ ಗುರುಕುಲ […]

ರಾಜ್ಯ

ಮಾಲ್ಡೀವ್ಸ್ ನಿಂದ ಬೆಂಗಳೂರಿಗೆ ಬಂದಿಳಿದ 152 ಪ್ರಯಾಣಿಕರು : ಇಬ್ಬರಲ್ಲಿ ಕರೋನಾ ಸೋಂಕಿನ ಲಕ್ಷಣ

ಬೆಂಗಳೂರು prajakiran.com : ಕೋವಿಡ್-19 ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮಾಲ್ಡೀವ್ಸ್ ನ ಮಾಲೆಯಿಂದ  ಕರುನಾಡಿನ  152 ಅನಿವಾಸಿ ಭಾರತೀಯರು ರಾಜ್ಯಕ್ಕೆ ಆಗಮಿಸಿದ್ದಾರೆ.  ಮೇ 22 ಸಂಜೆ 6.50ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಂಭತ್ತನೇ ಏರ್ ಇಂಡಿಯಾ ವಿಮಾನದಲ್ಲಿ ಗರ್ಭಿಣಿಯರು, ಮಕ್ಕಳು ಸೇರಿದಂತೆ ಒಟ್ಟು 152 ಮಂದಿ ಅನಿವಾಸಿ ಭಾರತೀಯರು ಇದ್ದಾರೆ.  ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಟ್ಟು 152 ಮಂದಿ ಪ್ರಯಾಣಿಕರಲ್ಲಿ ಇಬ್ಬರು ಗರ್ಭಿಣಿಯರು, […]

ರಾಜ್ಯ

ಹಿರಿಯ ಮಹಿಳಾ ಸಾಹಿತಿ ಶಾಂತಾದೇವಿ ಕಣವಿ ಇನ್ನಿಲ್ಲ

ಬೆಳಗಾವಿ/ ಧಾರವಾಡ prajakiran.com : ಹಿರಿಯ ಸಾಹಿತಿ ನಾಡೋಜ ಚನ್ನವೀರ ಕಣವಿ ಅವರ ಧರ್ಮಪತ್ನಿಯಾಗಿದ್ದ ಹಿರಿಯ ಮಹಿಳಾ ಸಾಹಿತಿ ಶಾಂತಾದೇವಿ ಕಣವಿ ಅವರು ಶುಕ್ರವಾರ ಸಂಜೆ ಬೆಳಗಾವಿಯ ಕೆಎಲ್ ಇ ಆಸ್ಪತ್ರೆಯಲ್ಲಿ ವಿಧಿವಶರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ಕಳೆದ ಹದಿನೈದು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಇಹಲೋಕ ತ್ಯಜಿಸಿದರು.  ಶನಿವಾರ ಬೆಳಗ್ಗೆ ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ಚೆಂಬೆಳಕಿನ ನಿವಾಸಕ್ಕೆ […]

ರಾಜ್ಯ

ಧಾರವಾಡದಲ್ಲಿ ಭಾರೀ ಬಿರುಗಾಳಿ ಸಮೇತ ಧಾರಾಕಾರ ಮಳೆ : ಧರೆಗುರುಳಿದ ಗಿಡ,ಮರ, ಹಾರಿಹೋದ ಶೆಡ್ಡುಗಳು

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಶುಕ್ರವಾರ ಸಂಜೆ ಸುರಿದ ಭಾರೀ ಬಿರುಗಾಳಿ ಸಮೇತ ಧಾರಾಕಾರ ಮಳೆಗೆ ನಗರದ  ಜನತೆ ಕೆಲ ಕಾಲ ಹೌಹಾರಿದ್ದರು.   ಇದರಿಂದಾಗಿ ಅನೇಕ ಗಿಡ,ಮರಗಳು ಧರೆಗುರುಳಿದರೆ, ಮನೆ ಮೇಲಿನ ಛಾವಣಿ, ತಗಡದ ಶೆಡ್ಡುಗಳು ಗಾಳಿಗೆ  ಹಾರಿಹೋದವು. ಅಕ್ಷರಶಃ ಕೆಲ ಕಾಲ ಜನ ಭಯಭೀತರಾಗಿ, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದರು. ಧಾರವಾಡದ ಜರ್ಮನ್ ಆಸ್ಪತ್ರೆ ಸರ್ಕಲ್ ನಿಂದ ಕೆಲಗೇರಿಯವರೆಗೆ 50ಕ್ಕೂ ಹೆಚ್ಚು ಗಿಡಮರಗಳು ನೆಲಕ್ಕೆ ಉರುಳಿದ್ದ ದೃಶ್ಯ ಪ್ರಜಾಕಿರಣ.ಕಾಮ್ ಗೆ ಕಂಡು ಬಂದವು. […]

ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಮೇ 24ರಂದು ೧೪೪ ನೇ ಕಲಂ ಅಡಿ ನಿಷೇಧಾಜ್ಞೆ

ಧಾರವಾಡ prajakiran.com  : ಕರೊನಾ  ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ರವಿವಾರ ಮೇ.೨೪ ರಂದು ಧಾರವಾಡ ಜಿಲ್ಲೆಯಾದ್ಯಂತ ಸಿ ಆರ್ ಪಿ ಸಿ ೧೯೭೩ ರ ಕಲಂ ೧೪೪ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶವು  ಮೇ.೨೩ ರ ಸಾಯಂಕಾಲ  ೭  ಗಂಟೆಯಿಂದ  ಮೇ.೨೫ ರ ಬೆಳಿಗ್ಗೆ ೭  ಗಂಟೆಯವರೆಗೆ  ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧವಾಗಿರುತ್ತದೆ. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿರಬೇಕು. ಅಗತ್ಯ […]

ರಾಜ್ಯ

50 ಸಾವಿರ ಬಡವರಿಗೆ ಆಹಾರ ಧಾನ್ಯದ ಕಿಟ್ ತಲುಪಿಸುವ ಗುರಿ : ದೀಪಕ ಚಿಂಚೋರೆ

25 ಸಾವಿರ ಬಡವರಿಗೆ ಈಗಾಗಲೇ ವಿತರಣೆ  : ಕಳೆದ ಹಲವು ದಿನಗಳಿಂದ ಸದ್ದಿಲ್ಲದೆ ನಡೆಯುತ್ತಿದೆ ಕಾರ್ಯ ಧಾರವಾಡ prajakiran.com : ಧಾರವಾಡದ ಸೈದಾಪುರ, ಕೊಪ್ಪದಕೇರಿ, ಗೊಲ್ಲರ ಕಾಲನಿ, ಮೆಹಬೂಬ ನಗರ, ಮಾಳಾಪುರ, ಬಾರಾ ಇಮಾಮ್ ಗಲ್ಲಿ,ಚುರಮುರಿ ಬಟ್ಟಿ, ಮದಿಹಾಳ, ಮಣಕಿಲ್ಲಾ, ರೋಣದಪುರ ಮಸೀದ ಬಡಾವಣೆ, ತೇಜಸ್ವಿನಗರ ಸೇರಿದಂತೆ ಧಾರವಾಡದ ವಿವಿಧ ಬಡಾವಣೆಗಳ ಸುಮಾರು 25 ಸಾವಿರಕ್ಕೂ ಅಧಿಕ ಬಡಜನರಿಗೆ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರು ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯವನ್ನು ಯಾವುದೇ ಸದ್ದಿಲ್ಲದೆ ಮಾಡುತ್ತಿದ್ದಾರೆ. […]

ರಾಜ್ಯ

ಸಚಿವ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ವಿರುದ್ದ ದೀಪಕ ಚಿಂಚೋರೆ ವಾಗ್ದಾಳಿ

ಧಾರವಾಡ prajakiran.com : ಕರೋನಾ ಲಾಕ್ ಡೌನ್ ನಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಜನತೆ ಕಂಗೆಟ್ಟಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರಕಾರವೇ ತೆರಿಗೆ ಕಡಿಮೆ ಮಾಡಿದೆ. ಆದರೆ ನಮ್ಮ ಮಹಾನಗರ ಪಾಲಿಕೆ ದುಪ್ಪಟ್ಟು ಆಸ್ತಿ ಕರ ಏಕಾಏಕಿ ಹೆಚ್ಚಳ ಮಾಡಿರುವುದು ನೋಡಿದರೆ ನಮ್ಮ ಜಿಲ್ಲೆಯ ಬಿಜೆಪಿ ನಾಯಕರು ಏನೂ ಮಾಡುತ್ತಿದ್ದಾರೆ ಎಂಬ ಸಂಶಯ ಮೂಡಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಕಿಡಿಕಾರಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಚಿವ ಜಗದೀಶ ಶೆಟ್ಟರ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷರು […]