ರಾಜ್ಯ

ವಿದ್ಯಾನಗರಿ ಧಾರವಾಡದ 2.5 ವರ್ಷದ ಮಗು ಸೇರಿ ಮತ್ತೆ ಮೂವರಿಗೆ ವಕ್ಕರಿಸಿದ ಸೋಂಕು

ಧಾರವಾಡ prajakiran.com: ವಿದ್ಯಾನಗರಿ ಧಾರವಾಡ ಜಿಲ್ಲೆಗೆ ಕಳೆದ ಮೂರು ದಿನಗಳಿಂದ ಮಹಾಮಾರಿ ಕರೋನಾ ವೈರಸ್ ಬೆಂಬಿಡದೆ ಕಾಡುತ್ತಿದೆ.

ಸೋಮವಾರ ಬೆಳಕಿಗೆ ಬಂದ ಮೂರು ಪ್ರಕರಣಗಳಲ್ಲಿ ಒಂದು  2.5 ವರ್ಷದ ಮಗು ಸೇರಿ ಮೂವರಿಗೆ ಕರೋನಾ ಸೋಂಕು ವಕ್ಕರಿಸಿರುವುದು ದೃಢಪಟ್ಟಿದೆ.

ಸೋಂಕಿತರನ್ನು ಪಿ 2156 33 ವರ್ಷದ ಮಹಿಳೆ ಎಂದು ಗುರುತಿಸಲಾಗಿದ್ದು, ಇವರಿಗೆ ಪಿ-1942, ಪಿ-1943 ಹಾಗೂ ಪಿ-1944 ಹಾಗೂ ಪಿ 1945 ಅವರಿಂದ ಹರಡಿದೆ. ಅವರಿಗೆ ಧಾರವಾಡದ ನಿಯೋಜಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ .

ಅದೇ ರೀತಿ ಪಿ-2157 17 ವರ್ಷದ ಗಂಡು ಮಗುವಿಗೆ ಸೋಂಕು ತಗುಲಿದೆ. ಇವನಿಗೆ ಕೂಡ ಪಿ-1942, ಪಿ-1943 ಹಾಗೂ ಪಿ-1944 ಹಾಗೂ ಪಿ 1945 ಅವರಿಂದ ಹರಡಿದೆ. ಇದೀಗ ಅವನಿಗೆ ಕೂಡ ಧಾರವಾಡದ ನಿಯೋಜಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಪಿ-2158 ಎರಡೂವರೆ ವರ್ಷದ ಗಂಡು ಮಗು ಎಂದು ಗುರುತಿಸಲಾಗಿದ್ದು, ಆತನಿಗೆ ಕೂಡ ಪಿ-1942, ಪಿ-1943 ಹಾಗೂ ಪಿ-1944 ಹಾಗೂ ಪಿ 1945 ಅವರಿಂದ ಹರಡಿದೆ. ಅವನಿಗೆ ಕೂಡ ಧಾರವಾಡದ ನಿಯೋಜಿತ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ತಿಳಿಸಿದೆ.

ಧಾರವಾಡ ಜಿಲ್ಲೆಗೆ ಈ ಕರೋನಾ ಕಂಟಕ ಮತ್ತೇ ಮಹಾರಾಷ್ಟ್ರದಿಂದ ಬಂದಿದ್ದ ಕುಟುಂಬದ ಜೊತೆಗೆ ಸಂಪರ್ಕ ಹೊಂದಿದ್ದವರಿಗೆ ಹರಡಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.

ಈ ಹಿಂದೆ ಮಹಾರಾಷ್ಟ್ರದಿಂದ ಬಂದ  ನಾಲ್ವರಿಗೆ ಸೋಂಕು ವಕ್ಕರಿಸಿತ್ತು. ಇವರ ಸಂಪರ್ಕಕ್ಕೆ ಬಂದ ಮೂವರಿಗೆ ಕರೋನಾ ಕಂಟಕ ಎದುರಾಗಿದೆ ಎಂದು ಹೆಲ್ತ್ ಬುಲೇಟಿನ್ ನಲ್ಲಿ ವಿವರಿಸಲಾಗಿದೆ.

ಎರಡುವರೆ ವರ್ಷದ ಮಗು ಸೇರಿ ಮೂವರಿಗೆ ಮತ್ತೆ ಕರೋನಾ ಸೋಂಕು ವಕ್ಕರಿಸಿರುವುದು ಧಾರವಾಡ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *