ರಾಜ್ಯ

ಪೊಲೀಸ್ ಪೇದೆ ಬದಲಾಗಿ ಕಾನ್ಸ್ ಟೇಬಲ್ ಪದ ಬಳಸುವಂತೆ ಆದೇಶ : ವೈರಲ್ ಆದ ಹಳೆಯ ಸುದ್ದಿ

ಬೆಂಗಳೂರು prajakiran.com : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ಈವರೆಗೆ ಎಲ್ಲರೂ ಪೊಲೀಸ್ ಪೇದೆ ಎಂದು ಕರೆಯುತ್ತಿದ್ದರು.

ಆದರೆ ಇದೀಗ ಆ ಪದ ಸೂಕ್ತವಲ್ಲ ಎಂದು ನಿರ್ಧರಿಸಿರುವ ಪೊಲೀಸ್ ಇಲಾಖೆ ಇದೀಗ ಪೊಲೀಸ್   ಪೇದೆ ಎಂಬ ಪದದ ಬದಲಾಗಿ ಕಾನ್ಸ್ ಟೇಬಲ್ ಪದವನ್ನು ಬಳಸುವಂತೆ ಕರ್ನಾಟಕ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಾದಂತ ಅಜಯ ಕುಮಾರ ಸಿಂಗ್ ಅವರು 2009ರಲ್ಲಿಯೇ ಆದೇಶ ಹೊರಡಿಸಿದ್ದರು.

ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಪೊಲೀಸ್ ಇಲಾಖೆಗೆ ಅಚ್ಚರಿ ಮೂಡಿಸಿದೆ.

 ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಕಾನ್ಸ್ ಟೇಬಲ್, ಹೆಡ್ ಕಾನ್ಸ್ ಟೇಬಲ್ ಗಳನ್ನು ಸಾಮಾನ್ಯವಾಗಿ ಪೊಲೀಸ್ ಪೇದೆ, ಮುಖ್ಯ ಪೇದೆಗಳೆಂದು ಕರೆಯಲಾಗುತ್ತಿದೆ. ಆದ್ರೇ ಪೇದೆ ಎಂಬ ಪದದ ಉಪಯೋಗವು ಅಷ್ಟು ಸಮಂಜಸವಾಗಿರುವುದಿಲ್ಲ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದ್ದರಿಂದ ಇನ್ಮುಂದೆ ಬರವಣಿಗೆಯಲ್ಲಾಗಲೇ, ಮಾತಿನಲ್ಲಾಗಲೀ, ಪೊಲೀಸ್ ಪೇದೆ, ಮುಖ್ಯ ಪೇದೆ ಎಂಬ ಪದಗಳನ್ನು ಬಳಸದೇ, ಪೊಲೀಸ್ ಕಾನ್ಸ್ ಟೇಬಲ್, ಹೆಡ್ ಕಾನ್ಸ್ ಟೇಬಲ್ ಎಂಬ ಪದಗಳನ್ನೇ ಬಳಸುವಂತೆ ಆದೇಶಿಸಲಾಗಿದೆ.

ಪದ ಬಳಕೆ ಹತ್ತು ವರ್ಷಗಳ ನಂತರವೂ ಅದನ್ನೇ ಬಳಸುತ್ತಿರುವುದು ಇಲ್ಲಿ ಸ್ಮರಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *