ರಾಜ್ಯ

ಗುಜರಾತ್‌ನಿಂದ ಬೆಳಗಾವಿಗೆ ಬಂದ 19 ಪ್ರಯಾಣಿಕರು

ಬೆಳಗಾವಿ prajakiran.com : ಗುಜರಾತ್‌ನ ಅಹ್ಮದಾಬಾದ್‌ನಿಂದ ಬೆಳಗಾವಿ ಏರ್‌ಪೋರ್ಟ್‌ಗೆ  ಸೋಮವಾರ ಸ್ಟಾರ್ ಏರ್‌ಲೈನ್ಸ್ ವಿಮಾನ ಆಗಮಿಸಿದೆ.

ಅಹ್ಮದಾಬಾದ್‌ನಿಂದ ಬೆಳಗಾವಿ ಏರ್‌ಪೋರ್ಟ್‌ಗೆ ಒಟ್ಟು 19 ಪ್ರಯಾಣಿಕರ ಆಗಮನವಾಗಿದ್ದು, 19 ಜನರ ಪೈಕಿ 8 ಪ್ರಯಾಣಿಕರು ಬೆಳಗಾವಿ ಜಿಲ್ಲೆಯವರಾಗಿದ್ದಾರೆ.

ಉಳಿದವರು ಹುಬ್ಬಳ್ಳಿ ಧಾರವಾಡದ 7 ಪ್ರಯಾಣಿಕರು ಹಾಗೂ ದಾವಣಗೆರೆಯ ನಾಲ್ವರನ್ನು  ಅವರವರ ಜಿಲ್ಲೆಗಳಿಗೆ ರವಾನೆ ಮಾಡಲಾಗಿದೆ.

ಬೆಳಗಾವಿ ಜಿಲ್ಲಾಡಳಿತ ಆಯಾ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮಾಹಿತಿ ರವಾನಿಸಿದೆ. ಗುಜರಾತ್‌ನ ಅಹ್ಮದಾಬಾದ್‌ನಿಂದ ಬಂದ ಎಲ್ಲರಿಗೂ 14 ದಿನಗಳ ಕ್ವಾರಂಟೈನ್ ಮಾಡಲಾಗಿದೆ.

7 ದಿನ ಹೋಟೆಲ್ ಕ್ವಾರಂಟೈನ್ ಬಳಿಕ 7 ದಿನಗಳ ಹೋಮ್ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕ್ಲಿಯರೆನ್ಸ್ ಪಾಸ್ ಜೊತೆಗೆ ಪ್ರತಿಯೊಬ್ಬರ ಪ್ರಯಾಣಿಕರ ಮುಂಗೈ ಮೇಲೆ ಸೀಲ್ ಹಾಕಿದ್ದು, ಬೆಳಗಾವಿಗೆ ಆಗಮಿಸಿದ ಪ್ರಯಾಣಿಕರಿಗೆ ಹೋಟೆಲ್‌ಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿತ್ತು.

ಬೆಳಗಾವಿಯ ಏರ್‌ಪೋರ್ಟ್‌‌ನಿಂದ ಸಿಪಿಎಡ್ ಮೈದಾನಕ್ಕೆ ತೆರಳಿ ಮತ್ತೊಮ್ಮೆ ದಾಖಲಾತಿ ಪರಿಶೀಲಿಸಿ ಆರೋಗ್ಯ ತಪಾಸಣೆ ಮಾಡಲಾಯಿತು.

ಬಳಿಕ ಅಲ್ಲಿಂದ  ಕ್ವಾರಂಟೈನ್‌ನಲ್ಲಿರುವ ಹೋಟೆಲ್‌‌ಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ.

ಇನ್ನೂಳಿದಂತೆ ಆಯಾ ಜಿಲ್ಲೆಯವರಿಗೆ ಅಲ್ಲಿಯ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *