ರಾಜ್ಯ

ಮುಂಬೈನಿಂದ ಬೆಳಗಾವಿಗೆ ಬಂದ ಬಾಲಕನಿಗೆ ಕರೋನಾ ಸೋಂಕು

ಬೆಳಗಾವಿ prajakiran.com : ಸೋಮವಾರ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಅದರಲ್ಲೂ ಮುಂಬೈನಿಂದ ಬಂದಿರುವ ಬಾಲಕನಿಗೆ ತಗುಲಿರುವ ಸೊಂಕು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಬೆಳಗಾವಿ ಜಿಲ್ಲೆಯ ಗಡಿ ಭಾಗದ ಹಂದಿಗನೂರು ಗ್ರಾಮದ ಹತ್ತು ವರ್ಷದ ಬಾಲಕನಿಗೆ ಸೊಂಕು ಧೃಡಪಟ್ಟಿದೆ.

ಸೊಂಕು ಧೃಡವಾದ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿ ‌ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆ ಮೂಲಕ ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ 128ಕ್ಕೆ ಏರಿಕೆಯಾಗಿದೆ.

ಆ 10 ವರ್ಷದ ಬಾಲಕನನ್ನು P-2101 ಎಂದು ಗುರುತಿಸಲಾಗಿದೆ.  ಆ ಬಾಲಕ ತನ್ನ ತಂದೆ, ತಾಯಿ, ಸಹೋದರನ ಜೊತೆ ಮುಂಬೈನಿಂದ ಬೆಳಗಾವಿಗೆ ಆಗಮಿಸಿದ್ದ.

ಮೇ 13ರಂದು ಮುಂಬೈನಿಂದ ಬೆಳಗಾವಿಗೆ ಬಂದಿದ್ದ ಕುಟುಂಬವನ್ನು ಹಂದಿಗನೂರು ಕ್ವಾರಂಟೈನ್ ಕೇಂದ್ರದಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು.

ಒಟ್ಟಾರೆ 15 ಜನರನ್ನು ಬೆಳಗಾವಿ ಜಿಲ್ಲಾಡಳಿತ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲಾಗಿತ್ತು.

ಈ 15 ಜನರ ಪೈಕಿ 10 ವರ್ಷದ ಒಬ್ಬ ಬಾಲಕನಿಗೆ ಕರೋನಾ ಸೋಂಕು ದೃಢವಾಗಿರುವುದು ಉಳಿದವರಿಗೆ ಆತಂಕ ಸೃಷ್ಟಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *