ಅಪರಾಧ

ಧಾರವಾಡದಲ್ಲಿ ಬ್ಯಾಟ್ ಖರೀದಿಸಿ ಹಣ ಕೊಡದೆ ಆತನನ್ನೇ ತಳ್ಳಿ ಕೊಂದ ಖದೀಮರು ಅಂದರ್…!  

ಧಾರವಾಡ prajakiran.com : ಖರೀದಿಸಿದ ಬ್ಯಾಟ್ ಗೆ ಹಣ ಕೊಡದೆ ಖದೀಮರು ಆತನ ಪ್ರಾಣಪಕ್ಷಿಯನ್ನೇ ಕಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾನಗರಿ ಧಾರವಾಡದ ಗಾಂಧಿ ನಗರದ ಪುಟ್ ಪಾತ್ ಮೇಲೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಮಹಾರಾಷ್ಟ್ರದಿಂದ ಬಂದಿದ್ದ ಬ್ಯಾಟ ತಯಾರಿಸಿ ಮಾರುವ ಕುಟುಂಬದ ಯುವಕನೊಬ್ಬ ಈ ಖದೀಮರ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಮೃತನನ್ನು  ಮಹಾರಾಷ್ಟ್ರ ದ ಮಂಗಲ ನತ್ತು ಮೋರೆ  (21) ಎಂದು ಗುರುತಿಸಲಾಗಿದೆ. ಇತನ ಬಳಿ ಬ್ಯಾಟ್ ಖರೀದಿಸಿದ ತಡಸಿನಕೊಪ್ಪ ಗ್ರಾಮದ […]

ರಾಜ್ಯ

ಜೂನ್ 5ರಿಂದ ಬಿಆರ್ ಟಿ ಎಸ್ ಸಂಚಾರ ಆರಂಭ

ಹುಬ್ಬಳ್ಳಿ-ಧಾರವಾಡ prajakiran.com :  ಕಳೆದ ಹಲವು ತಿಂಗಳಿಂದ ಕರೋನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಿ ಆರ್ ಟಿ ಎಸ್ ನ ಚಿಗರಿ ಬಸ್ ಸಂಚಾರ ಪುನರ್ ಆರಂಭಗೊಳ್ಳಲು ಕೊನೆಗೂ ಮುಹೂರ್ತ ನಿಗದಿಯಾಗಿದೆ. ರಾಜ್ಯ ಸರಕಾರದ ಆದೇಶದಂತೆ ಹವಾನಿಯಂತ್ರಿತ ಚಿಗರಿ ವಾಹನಗಳು ಕೋವಿಡ್ 19 ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ರಸ್ತೆಗೆ ಇಳಿಯಲಿವೆ. ಪ್ರಾರಂಭದಲ್ಲಿ ಜೂನ್ 5ರಿಂದ ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ ಅವಳಿ ನಗರದ ಮಧ್ಯೆ ಈ ಹಿಂದಿನಂತೆ ಬಸ್ ಸಂಚಾರ್ ಆರಂಭವಾಗಲಿವೆ. ಹುಬ್ಬಳ್ಳಿಯ ಕೇಂದ್ರಿಯ […]

ರಾಜ್ಯ

ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದ ಬಿಹಾರ ನಿವಾಸಿ ಚಿಟಗುಪ್ಪಿ ಆಸ್ಪತ್ರೆಗೆ ಹೋಗಿ ಬಂದಿದ್ದ…!

ಧಾರವಾಡ prajakiran.com : ಇವರು ಬಿಹಾರ ರಾಜ್ಯದ ನಿವಾಸಿಯಾಗಿರುತ್ತಾರೆ. ಇವರು ಲಾಕ್‌ಡೌನ್ ಪೂರ್ವದ ಮೂರು ತಿಂಗಳು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿನ ಖಾಸಗಿ ಗಾರ್ಮೆಂಟ್ಸ ನಲ್ಲಿ ಕಾರ್ಯನಿರ್ವಹಿಸಿ, ಅಲ್ಲಿಯೇ ವಾಸವಿರುತ್ತಾರೆ. ಮೇ.೨೩ ರಂದು ಕಾಮಾಕ್ಷಿ ಪಾಳ್ಯದಿಂದ ಹೊರಟು ಬಸ್ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣ ತಲುಪಿ ನಂತರ ಸಂಜೆ ೫ ಗಂಟೆಗೆ ರಾಜಹಂಸ ಬಸ್ (ಬಸ್ ನಂ ಕೆಎ-೨೫-ಎಫ್-೬೮೬೦) ಮೂಲಕ ಹೊರಟು ಮೇ.೨೪,೨೦೨೦ ರ ನಸುಕಿನ ಜಾವ ೧.೩೦  ಗಂಟೆಗೆ ಹುಬ್ಬಳ್ಳಿಯ ಗಬ್ಬೂರ  ಬೈಪಾಸ್ ತಲುಪಿ ಅಲ್ಲಿಂದ ಆಟೋ ಮೂಲಕ […]

ರಾಜ್ಯ

ಹುಬ್ಬಳ್ಳಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಏಳೆಂಟು ಬಾರಿ ಹೋಗಿ ಬಂದಿದ್ದ ಸೋಂಕಿತ

ಧಾರವಾಡ prajakiran.com :  ಕೋವಿಡ್ -19 ಸೊಂಕಿತರಾಗಿರುವ ಪಿ – 3397 ಹಾಗೂ ಪಿ- 3398 ಇವರ ಪ್ರಯಾಣ ವಿವರಗಳನ್ನು ಜಿಲ್ಲಾಡಳಿತವು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ. ಪಿ-3397 ಪ್ರಯಾಣ ವಿವರ : ಪಿ- 3397 ನೇ ಸೋಂಕಿತ  47 ವರ್ಷದ ಪುರುಷ ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದ ನಿವಾಸಿಯಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಬಾಡಿಗೆ ಬೊಲೆರೋ ವಾಹನದ ಮೂಲಕ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯ ತರಕಾರಿ ಮಾರುಕಟ್ಟೆಗೆ ಏಳೆಂಟು ಬಾರಿ ಹೋಗಿ ಬಂದಿದ್ದಾರೆ. ಮೇ 18 ರಂದು ಬಿ. ಗುಡಿಹಾಳದಿಂದ ಅದೇ […]

ರಾಜ್ಯ

ಹುಬ್ಬಳ್ಳಿ ಕಿಮ್ಸ್ ವೈದ್ಯರ ಅಮೋಘ ಸಾಧನೆ :‌ ಕರೊನಾ ಪೀಡಿತರಿಗೆ ಪ್ಲಾಸ್ಮಾ ಥೆರಪಿ ಯಶಸ್ಸು

ಹುಬ್ಬಳ್ಳಿ  prajakiran.com : ಕರೊನಾ ಪೀಡಿತರಿಗೆ ನೀಡಲಾದ ಪ್ಲಾಸ್ಮಾ ಥೆರಪಿ ಯಶಸ್ಸುಕಂಡಿದ್ದು,   ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಈ ಅಮೋಘ ಸಾಧನೆ ಮಾಡಿದ್ದಾರೆ. ಕರೊನಾ ಸೋಂಕಿತನಿಗೆ ನೀಡಿದ ಪ್ಲಾಸ್ಮಾ ಥೆರಪಿ  ಚಿಕಿತ್ಸೆ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ೬೪ ವರ್ಷದ ಸೋಂಕಿತ  ವ್ಯಕ್ತಿ ಗುಣಮುಖನಾಗಿದ್ದು, ಇದು ರಾಜ್ಯದಲೇ ಮೊದಲ ಯಶಸ್ವಿ  ಪ್ಲಾಸ್ಮಾ ಥೆರಪಿಯಾಗಿದೆ. ೬೪ ವರ್ಷದ ಕರೊನಾ ಸೋಂಕಿತ ವ್ಯಕ್ತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.‌ ಈತನಿಗೆ ಪ್ಲಾಸ್ಮಾ ಥೆರಪಿ ಮಾಡಲು ನಿರ್ಧರಿಸಿದ್ದ ಹುಬ್ಬಳ್ಳಿಯ ಕಿಮ್ಸ್ ವೈದ್ಯರ ತಂಡ, […]

ರಾಜ್ಯ

ಹಿರಿಯ ಪೊಲೀಸ್ ಅಧಿಕಾರಿ ಜಿನೇಂದ್ರ ಖಣಗಾವಿ ವಿಚಾರಣೆ ನಡೆಸಿದ ಸಿಬಿಐ

ಬೆಂಗಳೂರು prajakiran.com :  ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರವೂ ಹಿರಿಯ ಪೊಲೀಸ್ ಅಧಿಕಾರಿಯ ವಿಚಾರಣೆ ನಡೆಸಿದರು. ಅಂದು ಹುಬ್ಬಳ್ಳಿ ಧಾರವಾಡ ಡಿಸಿಪಿಯಾಗಿದ್ದ ಹಾಗೂ ಸದ್ಯ ರಾಮನಗರ ಪೊಲೀಸ್ ತರಬೇತಿ ಶಾಲೆ ಮುಖ್ಯಸ್ಥರಾಗಿರುವ ಜಿನೇಂದ್ರ ಖಣಗಾವಿಅವರನ್ನು ವಿಚಾರಣೆ ನಡೆಸಿದರು. ಅವರು ಯೋಗೀಶಗೌಡ ಗೌಡರ ಕೊಲೆಯಾದ ದಿನದಂದು 2016ರ ಜೂನ್ 15ರಂದು   ಹುಬ್ಬಳ್ಳಿ ಧಾರವಾಡ ಡಿಸಿಪಿಯಾಗಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಬೆಳಗ್ಗೆಯಿಂದ ತೀವ್ರ ವಿಚಾರಣೆ ನಡೆಸಿದರು ಎಂದು ಗೊತ್ತಾಗಿದೆ. […]

ರಾಜ್ಯ

ನಿವೃತ್ತ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ವಿಚಾರಣೆ ನಡೆಸಿದ ಸಿಬಿಐ

 ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆಯವರನ್ನು ಸಿಬಿಐ ಅಧಿಕಾರಿಗಳು ಸೋಮವಾರ ವಿಚಾರಣೆ ನಡೆಸಿದರು. ಅಲ್ಲದೆ, ಈ ಹಿಂದೆ ಕನ್ನಡ ಪರ ಸಂಘಟನೆ ಜೊತೆಗೆ ಗುರುತಿಸಿಕೊಂಡಿದ್ದ ಸದ್ಯ ಮಾಜಿ ಸಚಿವರ ಆಪ್ತನಾಗಿರುವ ಕಾಂಗ್ರೆಸ್ ಮುಖಂಡ ಆನಂದ ಕಲಾಲ್ ನನ್ನು ಕೂಡ ಸಿಬಿಐ ಅಧಿಕಾರಿಗಳು ಡ್ರಿಲಿಂಗ್ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೀಶ ಗೌಡ […]

ರಾಜ್ಯ

ಕುಂದಗೋಳ ಕಾಂಗ್ರೆಸ್ ನಲ್ಲಿ ಕಾರ್ಯಕರ್ತರ ಕಡೆಗಣನೆಗೆ ಬುಗಿಲೆದ್ದ ಆಕ್ರೋಶ

ಹುಬ್ಬಳ್ಳಿ prajakiran.com : ಮಾಜಿ ಸಚಿವ ಸಿ.ಎಸ್ ಶಿವಳ್ಳಿ ಅವರ ನಿಧನದ ನಂತರ ಕುಂದಗೋಳ ಕಾಂಗ್ರೆಸ್ ನಲ್ಲಿ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶ  ಬುಗಿಲೆದಿದೆ. ಈ ಬಗ್ಗೆ ಅನೇಕ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಅವರ ಕೆಲವು ಅಭಿಪ್ರಾಯಗಳು ಈ ರೀತಿ ಇವೆ. ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸನಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ.  ಲೂಟಿಕೋರರಿಗೆ ಮಾತ್ರ ಜಾಗ. ಶಿವಳ್ಳಿ ನಂತರ ಅನಾಥವಾದ ಕುಂದಗೋಳ ತಾಲೂಕಿನ ಪ್ರಾಮಾಣಿಕ ಕಾಂಗ್ರೇಸ್ ಕಾರ್ಯಕರ್ತರು. ಶಿವಳ್ಳಿಯವರು ಯಾವ ಅನ್ಯಾಯವನ್ನು ವಿರೋದಿಸುತ್ತಿದ್ದರೋ ಅದು […]

ರಾಜ್ಯ

ಮುಂಬೈದಿಂದ ಹುಬ್ಬಳ್ಳಿಗೆ ಬಂದ ಕೋವಿಡ್ ಪಾಸಿಟಿವ್ ವ್ಯಕ್ತಿ ಕಿಮ್ಸ್ ಗೆ ದಾಖಲು

ಧಾರವಾಡ prajakiran.com : ಮೇ 28 ಗುರುವಾರದಂದು ಕೋವಿಡ್ 19 ದೃಢಪಟ್ಟಿರುವ ಧಾರವಾಡ ಜಿಲ್ಲೆಯ  ಪಿ – 2710 ಸೋಂಕಿತ ವ್ಯಕ್ತಿಯ ಪ್ರಯಾಣ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ. ಪಿ-2710 ನೇ ಸೋಂಕಿತ 65 ವರ್ಷದ ಪುರುಷ ಹುಬ್ಬಳ್ಳಿ ನಗರದ ಬೆಂಗೇರಿ ನಿವಾಸಿಯಾಗಿದ್ದಾರೆ. ಇವರು ಫೆಬ್ರುವರಿ 2020 ರ ತಿಂಗಳಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಮುಂಬೈಗೆ ಹೋಗಿದ್ದರು.  ಮೇ 25 ರಂದು ಸೋಮವಾರ ಅನಾರೋಗ್ಯದ ನಿಮಿತ್ಯ ಚಿಕಿತ್ಸೆಗಾಗಿ ಮುಂಬೈನ ರಾಜವಾಡಿ ಆಸ್ಪತ್ರೆಗೆ ದಾಖಲಾಗಿದ್ದರು.  ಮೇ 26 ರಂದು […]

ಅಪರಾಧ

ಪಿಎಸ್ ಐಗೆ ಅವಾಜ್ ಹಾಕಿದ್ದ ಇಬ್ಬರು ಯುವಕರ ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ prajakiran.com : ತಾನು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಅಧ್ಯಕ್ಷನೆಂದು ಪಿಎಸ್ ಐಗೆ ಅವಾಜ್ ಹಾಕಿದ್ದ ಇಬ್ಬರು ಯುವಕರ ಬಂಧಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಂಧಿತರನ್ನು ಹುಬ್ಬಳ್ಳಿಯ ಸುಳ್ಳ ರಸ್ತೆಯ ಬಸವೇಶ್ವರ ಪಾರ್ಕ್ ನ ಸುನೀಲ ಚಂದ್ರಶೇಖರ ಶಲವಡಿ ಹಾಗೂ ಪುನೀತಕುಮಾರ ಚಂದ್ರಶೇಖರ ಶಲವಡಿ ಎಂದು ಗುರುತಿಸಲಾಗಿದೆ. ಇವರು ಮೇ 23ರಂದು ಹುಬ್ಬಳ್ಳಿ ಪೂರ್ವ ಸಂಚಾರ ಪೊಲೀಸ್ ಠಾಣೆ ಪಿಎಸ್ ಐ ಎಸ್ ಎಸ್ ದೇಸಾಯಿಅವರಿಗೆ ವಾಹನ ತಪಾಸಣೆ ವೇಳೆ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿರುವುದನ್ನು ಸುನೀಲ […]