ರಾಜ್ಯ

ಮುಂಬೈದಿಂದ ಹುಬ್ಬಳ್ಳಿಗೆ ಬಂದ ಕೋವಿಡ್ ಪಾಸಿಟಿವ್ ವ್ಯಕ್ತಿ ಕಿಮ್ಸ್ ಗೆ ದಾಖಲು

ಧಾರವಾಡ prajakiran.com : ಮೇ 28 ಗುರುವಾರದಂದು ಕೋವಿಡ್ 19 ದೃಢಪಟ್ಟಿರುವ ಧಾರವಾಡ ಜಿಲ್ಲೆಯ  ಪಿ – 2710 ಸೋಂಕಿತ ವ್ಯಕ್ತಿಯ ಪ್ರಯಾಣ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.

ಪಿ-2710 ನೇ ಸೋಂಕಿತ 65 ವರ್ಷದ ಪುರುಷ ಹುಬ್ಬಳ್ಳಿ ನಗರದ ಬೆಂಗೇರಿ ನಿವಾಸಿಯಾಗಿದ್ದಾರೆ. ಇವರು ಫೆಬ್ರುವರಿ 2020 ರ ತಿಂಗಳಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಮುಂಬೈಗೆ ಹೋಗಿದ್ದರು. 

ಮೇ 25 ರಂದು ಸೋಮವಾರ ಅನಾರೋಗ್ಯದ ನಿಮಿತ್ಯ ಚಿಕಿತ್ಸೆಗಾಗಿ ಮುಂಬೈನ ರಾಜವಾಡಿ ಆಸ್ಪತ್ರೆಗೆ ದಾಖಲಾಗಿದ್ದರು. 

ಮೇ 26 ರಂದು ಮುಂಬೈ ರಾಜವಾಡಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮಧ್ಯಾಹ್ನ 1:30  ಕ್ಕೆ ಖಾಸಗಿ ಅಂಬ್ಯೂಲೆನ್ಸ್ (  ಎಂ.ಹೆಚ್. – 04 – ಎಫ್ ಕೆ  – 1480 ) ಮೂಲಕ ಕುಟುಂಬದ 6 ಸದಸ್ಯರು ಹಾಗೂ ಇಬ್ಬರು ವಾಹನ ಚಾಲಕರೊಂದಿಗೆ ಮುಂಬೈಯಿಂದ ಹೊರಟು ನಿಪ್ಪಾಣಿ ಚೆಕ್ ಪೋಸ್ಟ್‌ ನಲ್ಲಿ ತಪಾಸಣೆ ( ಥರ್ಮಲ್ ಸ್ಕ್ರೀನಿಂಗ್ ) ಮಾಡಿಸಿಕೊಂಡು ಮೇ 27  ರಂದು  ಬೆಳಿಗ್ಗೆ 7:30 ಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಅಂದೇ ಇವರ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿರುತ್ತದೆ. ಇಬ್ಬರು ವಾಹನ ಚಾಲಕರು ವಾಪಸ್ ಮುಂಬಯಿಗೆ ಹಿಂದಿರುಗಿರುತ್ತಾರೆ .  ಮೇ 28  ರಂದು ಪಿ- 2710 ಇವರು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿರುತ್ತದೆ .

ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ವ್ಯಕ್ತಿಯನ್ನು  ಸಂಪರ್ಕಿಸಿದ ಸಾರ್ವಜನಿಕರಿಗೆ ಕರೊನಾ ಸೊಂಕು ತಗಲುವ ಸಾಧ್ಯತೆ ಇರುತ್ತದೆ.

ಆ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು  ಎಂದು  ಪ್ರಕಟಣೆ ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *