ರಾಜ್ಯ

ಧಾರವಾಡ ಟೌನ್ ಪೊಲೀಸ್ ಠಾಣೆಯ ಮಹಿಳಾ ಪಿ ಎಸ್ ಐ ಗೆ ಕರೋನಾ ….!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಕರೋನಾ ಸೇನಾನಿಗಳನ್ನು ಬೆಂಬಿಡದೆ ಕಾಡುತ್ತಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಹುಬ್ಬಳ್ಳಿ-ಧಾರವಾಡಅವಳಿ ನಗರದ 50ಕ್ಕೂಹೆಚ್ಚು ಕರೋನಾ ಸೇನಾನಿಗಳನ್ನು ಬಳಲಿ ಬೆಂಡಾಗುವಂತೆ ಮಾಡಿದ್ದ ಕರೋನಾ ಇದೀಗ ಧಾರವಾಡ ಟೌನ್ ಮಹಿಳಾ ಪಿ ಎಸ್ ಐ ಗೆ ತಗುಲಿದೆ. ಇದರಿಂದಾಗಿ ಧಾರವಾಡ ಟೌನ್ ಪೊಲೀಸ್ ಠಾಣೆಯ ಹಲವು ಸಿಬ್ಬಂದಿ ಮತ್ತೇ ಆತಂಕಗೊಂಡಿದ್ದು, ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ತಪಾಸಣೆಗೆ ಮುಂದಾಗಿದ್ದಾರೆ. […]

ರಾಜ್ಯ

ಧಾರವಾಡ ಜಿಲ್ಲೆಯ ಗರಗ, ಬ್ಯಾಹಟ್ಟಿ, ಇಂಗಳಹಳ್ಳಿ ಸೇರಿ ಹಲವು ಹಳ್ಳಿಗಳಿಗೆ ವ್ಯಾಪಿಸಿದ ಕರೋನಾ

3553 ಕ್ಕೇರಿದ ಕೋವಿಡ್ ಪ್ರಕರಣಗಳು : 1991  ಪ್ರಕರಣಗಳು ಸಕ್ರಿಯ 1453 ಜನ ಗುಣಮುಖ ಬಿಡುಗಡೆ ಈವರೆಗೆ ಒಟ್ಟು 109ಜನ ಸಾವು ಧಾರವಾಡ  :  ಜಿಲ್ಲೆಯಲ್ಲಿ ಮಂಗಳವಾರ 173 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3553 ಕ್ಕೆ ಏರಿದೆ. ಇದುವರೆಗೆ 1453 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. 1991  ಪ್ರಕರಣಗಳು ಸಕ್ರಿಯವಾಗಿವೆ. 34  ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 109ಜನ ಮೃತಪಟ್ಟಿದ್ದಾರೆ . ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. […]

ರಾಜ್ಯ

ರಾಜ್ಯದಲ್ಲಿ ಭಾನುವಾರ ಕರೋನಾಕ್ಕೆ 91 ಸಾವು, 4120 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 91 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 4120 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 63772 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 1290 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  23065 ಜನ ಗುಣಮುಖರಾಗಿದ್ದು, 39370 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 579 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ […]

ರಾಜ್ಯ

ಕೋಲಾರ ಜಿಲ್ಲೆಯ ನರಸಾಪುರ ಗ್ರಾಮಕ್ಕೂ ವಕ್ಕರಿಸಿದ ಕರೋನಾ

ಕೋಲಾರ prajakiran.com : ಜಿಲ್ಲೆಯಲ್ಲಿ  ನಿಲ್ಲದ ಕೊರೋನಾ ಮಾಹಾಮಾರಿ ಅಟ್ಟಹಾಸ ಇತ್ತೀಚೆಗೆ ನರಸಾಪುರ ಹೋಬಳಿಯ ಚಾಕರಸನಹಳ್ಳಿ, ಉದ್ದಪನಹಳ್ಳಿಗೆ  ಬಂದಿತ್ತು. ಇದೀಗ ಕೊರೋನಾ ಮಾಹಾಮಾರಿ  ನರಸಾಪುರ ಗ್ರಾಮಕ್ಕೂ ಕಾಲಿಟ್ಟಿದೆ.  ನರಸಾಪುರ ಗ್ರಾಮದ ಎ ಬ್ಲಾಕ್ ನಲ್ಲಿ  ಇಬ್ಬರಿಗೆ ಕೊರೋನಾ ಸೋಂಕು ಪಾಸಿಟಿವ್ ಎಂದು  ದೃಢಪಟ್ಟಿದೆ. ಈ ವ್ಯಕ್ತಿಗಳು ಇತ್ತೀಚಿಗೆ ರಾಜ್ಯದ ರಾಜಧಾನಿ ಬೆಂಗಳೂರಿಗೆ ಹೋಗಿ ಬಂದಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ನರಸಾಪುರಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ  ಸ್ಯಾನಿಟೈಶನ್ ಮಾಡಿದರು. ಜೊತೆಗೆ  ಸದರಿ ಪ್ರದೇಶವನ್ನು […]

ರಾಜ್ಯ

ಕೋವಿಡ್ ಬಗ್ಗೆ ಅನಗತ್ಯ ಭಯ ಬೇಡ : ಆಪ್ತಮಿತ್ರ ಸಹಾವಾಣಿಗೆ ಕರೆ ಮಾಡಿ

ಧಾರವಾಡ prajakiran.com : ಲಕ್ಷಣ ರಹಿತ ಕೋವಿಡ್ ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯಲು ಅವಕಾಶವಿದೆ. ಇಂತಹ ವ್ಯಕ್ತಿಯ ಕುಟುಂಬ ಸದಸ್ಯರುಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಲಹೆಗಳನ್ನು ಸಲಹೆ ನೀಡಿದೆ. ಕೋವಿಡ್ ಬಗ್ಗೆ ಅನಗತ್ಯವಾಗಿ ಯಾರೊಬ್ಬರು ಭಯಪಡಬಾರದು ಹಾಗೂ ಪ್ರತ್ಯೇಕಿತ ವ್ಯಕ್ತಿಯನ್ನು ಕಳಂಕಿತರಂತೆ  ಕಾಣಬಾರದು. ಪ್ರತ್ಯೇಕ್ಷವಾಗಿರುವ ವ್ಯಕ್ತಿಯು ಹರ್ಷಚಿತ್ತದಿಂದ ಸಂತೋಷವಾಗಿರುವಂತೆ ನೋಡಿಕೊಳ್ಳಿ ಹಾಗೂ ಅವರ  ಸ್ಥೈರ್ಯವನ್ನು ಹೆಚ್ಚಿಸಿ,  ವ್ಯಕ್ತಿಯು ಮನೆಯಲ್ಲಿ ಪ್ರತ್ಯೇಕವಾಗಿರುವುದನ್ನು ಖಚಿತ ಪಡಿಸಿಕೊಳ್ಳಿ. ಯಾವಾಗಲೂ 2 ಮೀಟರ್ ಅಂದರೆ 6 ಅಡಿ ಅಂತರವನ್ನು […]

ರಾಜ್ಯ

ರಾಜ್ಯದಲ್ಲಿ ಶುಕ್ರವಾರ ಕರೋನಾಕ್ಕೆ 115 ಸಾವು, 3693 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಶುಕ್ರವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 115 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 3693 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ          55115 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 1028 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  20757 ಜನ ಗುಣಮುಖರಾಗಿದ್ದು,   33205 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 568 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ […]

ರಾಜ್ಯ

ಬೆಂಗಳೂರು ಖಾಕಿಗೆ ಕರೋನಾ ಕಂಟಕ : ಈವರೆಗೆ 668 ಜನರಿಗೆ ಪಾಸಿಟಿವ್, 1000 ಪೊಲೀಸ್ ಕ್ವಾರಂಟಿನ್

ಬೆಂಗಳೂರು prajakiran.com : ರಾಜ್ಯದ ರಾಜಧಾನಿಯನ್ನು ಬೆಚ್ಚಿಬೀಳುವಂತೆ ಮಾಡಿರುವ ಕಿಲ್ಲರ್ ಕರೋನಾ ಕರೋನಾ ಸೇನಾನಿಯಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಬೆಂಗಳೂರು ನಗರವೊಂದರಲ್ಲಿಯೇ ಈವರೆಗೆ 668 ಜನ ಪೊಲೀಸರಿಗೆ ಪಾಸಿಟಿವ್ ಬಂದಿದ್ದು, 1000 ಜನ ಪೊಲೀಸರು ಹೋಂ ಕ್ವಾರಂಟಿನ್  ನಲ್ಲಿ ಇದ್ದಾರೆ. ಈವರೆಗೆ 8 ಪೊಲೀಸರು ಸಾವನ್ನಪ್ಪಿದ್ದು, ಪೊಲೀಸರ ಸಂಕಷ್ಟ ಹೇಳತೀರದಂತಾಗುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥೀತಿ ಬಿಗಡಾಯಿಸುತ್ತಿದ್ದು,  ಇಂದು ಗುರುವಾರ ಮತ್ತೇ ಮೂರು ಪೊಲೀಸ್ ಠಾಣೆ ಸೀಲ್ ಡೌನ್ ಆಗಿವೆ. ಬೆಂಗಳೂರಿನ ಶಿವಾಜಿನಗರ, ಮಾಗಡಿ ರೋಡ್ ಹಾಗೂ ಯಶವಂತಪುರ […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 5 ಸಾವು : ಕರೋನಾಕ್ಕೆ ಬಲಿಯಾದವರ ಸಂಖ್ಯೆ 44ಕ್ಕೆ ಏರಿಕೆ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಜಿಲ್ಲೆಯ ಜನತೆಗೆ ಆತಂಕ ಮೂಡಿಸಿದೆ. ಅದರಲ್ಲೂ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ ಎ ಎಸ್ ಐ ಒಬ್ಬರು ಸೇರಿದಂತೆ ಬುಧವಾರ  ಒಂದೇ ದಿನ 5 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಕಿಲ್ಲರ್ ಕರೋನಾಕ್ಕೆ ಬಲಿಯಾದವರ ಸಂಖ್ಯೆ 44ಕ್ಕೆ ಏರಿಕೆಯಾದಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ ಬುಧವಾರ ಮತ್ತೇ ಹೊಸದಾಗಿ 138 […]

ರಾಜ್ಯ

ಕಿಲ್ಲರ್ ಕರೋನಾಕ್ಕೆ ಹಾಸನದಲ್ಲಿ ಭಾನುವಾರ ಇಬ್ಬರು ಸಾವು

ಹಾಸನ prajakiran.com : ಜಿಲ್ಲೆಯಲ್ಲಿ ಭಾನುವಾರ ಸಹ ಕೋವಿಡ್ 19 ಗೆ ಇಬ್ಬರು ಮೃತಪಟ್ಟಿದ್ದಾರೆ. ಆ ಮೂಲಕ ಹಾಸನ ಜಿಲ್ಲೆಯಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಹಾಸನ ನಗರದ 57 ವರುಷದ ಪುರುಷ ಹಾಗೂ ಆಲೂರು ತಾಲ್ಲೂಕಿನ 45 ವರ್ಷದ ಮಹಿಳೆ ಸೋಂಕಿನಿಂದ ಕೊವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಾಸನ‌ ನಗರದ 57 ವರ್ಷದ ಸೋಂಕಿತ ವ್ಯಕ್ತಿ ಜು 5ರಂದು ನಗರದ ಕೊವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಜು 10 ರಂದು ಐ.ಸಿ.ಯು ನಲ್ಲಿ ಇರಿಸಿ ವೆಂಟಿಲೇಟರ್ ಸೌಲಭ್ಯ […]

ಅಂತಾರಾಷ್ಟ್ರೀಯ

ನಟಿ ಐಶ್ವರ್ಯ ರೈ, ಪುತ್ರಿ ಆರಾಧ್ಯಗೂ ಕರೋನಾ ಕಂಟಕ

ಮುಂಬೈ prajakiran.com : ಹಿಂದಿ ಚಿತ್ರರಂಗದ ಸುಪರ್ ಸ್ಟಾರ್ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಕರೋನಾ ಪಾಸಿಟಿವ್ ದೃಢಪಟ್ಟ ಬೆನ್ನಲ್ಲೇ ಇದೀಗ ಅವರ ಸೋಸೆ ಐಶ್ವರ್ಯ ರೈ ಹಾಗೂ ಮೊಮ್ಮಗಳಾದ ಆರಾಧ್ಯ ಗೂ ಮಹಾಮಾರಿ ವಕ್ಕರಿಸಿದೆ. ನಿನ್ನೇಯಷ್ಟೇ ಇಬ್ಬರು ಮುಂಬೈನ ಪ್ರತಿಷ್ಠಿತ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಕೋವಿಡ್ 19 ಚಿಕಿತ್ಸೆ ಪಡೆಯುತ್ತಿದ್ದರು. ಇಬ್ಬರಿಗೂ ಸೋಂಕಿನ ಲಕ್ಷಣಗಳಿಲ್ಲ. ಚಿಕಿತ್ಸೆಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಬಚ್ಚನ್ […]