ರಾಜ್ಯ

ಬೆಂಗಳೂರು ಖಾಕಿಗೆ ಕರೋನಾ ಕಂಟಕ : ಈವರೆಗೆ 668 ಜನರಿಗೆ ಪಾಸಿಟಿವ್, 1000 ಪೊಲೀಸ್ ಕ್ವಾರಂಟಿನ್

ಬೆಂಗಳೂರು prajakiran.com : ರಾಜ್ಯದ ರಾಜಧಾನಿಯನ್ನು ಬೆಚ್ಚಿಬೀಳುವಂತೆ ಮಾಡಿರುವ ಕಿಲ್ಲರ್ ಕರೋನಾ ಕರೋನಾ ಸೇನಾನಿಯಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.

ಬೆಂಗಳೂರು ನಗರವೊಂದರಲ್ಲಿಯೇ ಈವರೆಗೆ 668 ಜನ ಪೊಲೀಸರಿಗೆ ಪಾಸಿಟಿವ್ ಬಂದಿದ್ದು, 1000 ಜನ ಪೊಲೀಸರು ಹೋಂ ಕ್ವಾರಂಟಿನ್  ನಲ್ಲಿ ಇದ್ದಾರೆ.

ಈವರೆಗೆ 8 ಪೊಲೀಸರು ಸಾವನ್ನಪ್ಪಿದ್ದು, ಪೊಲೀಸರ ಸಂಕಷ್ಟ ಹೇಳತೀರದಂತಾಗುತ್ತಿದೆ. ದಿನದಿಂದ ದಿನಕ್ಕೆ ಪರಿಸ್ಥೀತಿ ಬಿಗಡಾಯಿಸುತ್ತಿದ್ದು,  ಇಂದು ಗುರುವಾರ ಮತ್ತೇ ಮೂರು ಪೊಲೀಸ್ ಠಾಣೆ ಸೀಲ್ ಡೌನ್ ಆಗಿವೆ.

ಬೆಂಗಳೂರಿನ ಶಿವಾಜಿನಗರ, ಮಾಗಡಿ ರೋಡ್ ಹಾಗೂ ಯಶವಂತಪುರ ಪೊಲೀಸ್ ಠಾಣೇ ಸೀಲ್ ಡೌನ್ ಆಗಿವೆ.

ಈವರೆಗೆ ಬೆಂಗಳೂರು ನಗರವೊಂದರಲ್ಲಿಯೇ ಸುಮಾರು 35ಕ್ಕೂ ಅಧಿಕ ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗಿರುವುದು ಬೆಂಗಳೂರು ಲಾಕ್ ಡೌನ್ ಪರಿಣಾಮಕಾರಿ ಅನುಷ್ಟಾನಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿವೆ.

ಅಲ್ಲದೆ, ಪೊಲೀಸರಿಗೆ ಅಗತ್ಯ ಸಲಕರಣೆ, ಪಿಪಿಇ ಕಿಟ್ ನೀಡುತ್ತಿಲ್ಲ. ಅವರನ್ನು ಜನರನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *