ರಾಜ್ಯ

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರ್ ಇನ್ನಿಲ್ಲ

ಬಳ್ಳಾರಿ prajakiran.com  : ಹಿರಿಯ ರಂಗಭೂಮಿ ಕಲಾವಿದೆ ನಾಡೋಜ, ಸರ್ವಋತು ಕೋಗಿಲೆ, ವೃತ್ತಿ ಮತ್ತು ಹವ್ಯಾಸಿ ರಂಗ ಭೂಮಿಯ ಅನುಪಮ ಅಭಿನೇತ್ರಿ ನಾಡೋಜ ಸುಭದ್ರಮ್ಮ ಮನ್ಸೂರು  ಇನ್ನು ನೆನಪು ಮಾತ್ರ.

81 ವರ್ಷ ವಯಸ್ಸಿನ ಅವರು ಗುರುವಾರ ವಿಧಿವಶರಾಗಿದ್ದಾರೆ. ಏಕೀಕರಣಕ್ಕೆ ಮುಂಚಿನ ಹಳೇ ಬಳ್ಳಾರಿಯಿಂದ ಏಕೀಕರಣ ನಂತರ ಹೊಸ ಕರ್ನಾಟಕದವರೆಗೆ ಶ್ರೀಮತಿ ಸುಭದ್ರಮ್ಮ (೧೯೩೯-೨೦೨೦) ಮನ್ಸೂರು ಎಂದರೆ ಸರ್ವಋತು ಕೋಗಿಲೆ ಎಂದು ಅರ್ಥ.

ಇವರ “ಬೆಟ್ಟದ ಮೇಲೊಂದು ಮನೆಯ ಮಾಡಿ” ಎಂಬ ಹಾಡು ಇಂದಿಗೂ ಸುಪ್ರಸಿದ್ಧವಾಗಿದೆ. ಕಂದಗಲ್ಲು ಹನುಮಂತರಾಯರ ರಕ್ತರಾತ್ರಿ ನಾಟಕದ ಪಾಂಚಾಲಿ ಪಾತ್ರದಿಂದ ಕರ್ನಾಟಕ ಆಂಧ್ರದ ಹಳ್ಳಿಗಳ್ಳಿಗಳಲ್ಲಿ ಮನೆಮಾತಾಗಿದ್ದರು.

ಆಂಧ್ರದ ಹಳ್ಳಿಗಳಲ್ಲಿ ಮಳೆಬಾರದಿದ್ದರೆ ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ಆಡಿಸುತ್ತಿದ್ದರು. ಮಳೆಯು ಬರುತ್ತಿತ್ತು. ಸುಭದ್ರಮ್ಮನವರು ಅಭಿನಯಿಸಿದ್ದ ಮಲ್ಲಮ್ಮನ ಈ ಪಾತ್ರ ಅದೆಷ್ಟೂ ಪ್ರಖ್ಯಾತವಾಗಿತ್ತೆಂದರೆ ಈಗಲೂ ಹಳ್ಳಿಗಳಲ್ಲಿ ಮಲ್ಲಮ್ಮನ ಪಾತ್ರದ ಸುಭದ್ರಮ್ಮನವರ ಫೋಟೊವನ್ನು ಮನೆಯಲ್ಲಿಟ್ಟು ಪೂಜಿಸುವವರಿದ್ದಾರೆ.

ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಗುಬ್ಬಿ ವೀರಣ್ಣ ಪ್ರಶಸ್ತಿ ಮುಂತಾದ ಹತ್ತಾರು ಪ್ರಶಸ್ತಿ ಗಳಿಸಿದ್ದ ಸುಭದ್ರಮ್ಮನವರ ನಿಧನ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ.

ಅವರ ನಿಧನಕ್ಕೆ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ @BSYBJP  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಅವರ ಕುಟುಂಬದವರಿಗೆ ಅವರ ನಿಧನದ ದು:ಖವನ್ನು ಭರಿಸುವ ಶಕ್ತಿ ಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರ್  ಬಾಲ ಕಲಾವಿದೆಯಾಗಿ ರಂಗಭೂಮಿ ಪ್ರವೇಶಿಸಿ  ಬದುಕಿನ ಏಳುಬೀಳುಗಳ ನಡುವೆಯೂ ವೃತ್ತಿ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದವರು.

ರಕ್ತರಾತ್ರಿ ನಾಟಕದಲ್ಲಿನ ದ್ರೌಪದಿಯ ಪಾತ್ರ, ಕುರುಕ್ಷೇತ್ರ ನಾಟಕದ ಗಾಂಧಾರಿಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಮನೆ ಮಾತಾಗಿದ್ದವರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

ಇವರ ನಿಧನದಿಂದ ರಂಗಭೂಮಿಯು ಅನರ್ಘ್ಯ ರತ್ನವೊಂದನ್ನು ಕಳೆದುಕೊಂಡಂತಾಗಿದೆ.ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಅದೇ ರೀತಿ ಮಾಜಿ ಸಚಿವ ಎಸ್ .ಆರ್. ಪಾಟೀಲ, ಕೆ.ಸಿ. ಕೊಂಡಯ್ಯ  ಕಂಬನಿ ಮಿಡಿದಿದ್ದು, ಹಿರಿಯ ರಂಗಭೂಮಿ ಕಲಾವಿದೆ ಶ್ರೀಮತಿ ಸುಭದ್ರಮ್ಮ ಮನ್ಸೂರ್‌ ನಿಧನರಾದ ಸುದ್ದಿ ಅತೀವ ದುಃಖ ತಂದಿದೆ.

ಸುಮಾರು 5 ದಶಕಗಳ ಕಾಲ ರಂಗಭೂಮಿಯಲ್ಲಿ ಕಲಾವಿದರಾಗಿ ಮತ್ತು ಸಂಗೀತಗಾರರಾಗಿ ಅವರ ಸಾಧನೆ ಅನುಪಮವಾದದ್ದು. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ, ಕುಟುಂಬದವರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಕನ್ನಡ ನಾಡಿನ ಹಿರಿಯ ರಂಗಭೂಮಿ ನಟಿ. ಅಭಿನಯ ಶಾರದೆ “ಡಾ.ಸುಭದ್ರಮ್ಮ ಮನ್ಸೂರ್” ನಿಧನರಾಗಿದ್ದಾರೆ. ರಂಗಭೂಮಿಯಲ್ಲಿ ತಮ್ಮದೇ ಆದ ಛಾಪುನ್ನು ಮೂಡಿಸಿದ್ದ ನಾಡೋಜ ಕಲಾ ಅಭಿನೇತ್ರಿ ಡಾ.ಸುಭದ್ರಮ್ಮ ಮನ್ಸೂರ್ ರಂಗಭೂಮಿಯ ದಂತಕತೆಯಾಗಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *