ರಾಜ್ಯ

ಮುಂಬೈ ಕರ್ನಾಟಕದ ಜೆ.ಡಿ.ಎಸ್. ಮುಖಂಡರ ಜೊತೆ ದೊಡ್ಡಗೌಡರ ವೀಡಿಯೋ ಸಂವಾದ

ಹುಬ್ಬಳ್ಳಿ prajakiran.com : ಮುಂಬೈ ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ, ಬಾಗಲಕೋಟ, ವಿಜಾಪುರ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಜೆ.ಡಿ.ಎಸ್. ಜಿಲ್ಲಾಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರೊಡನೆ ಮಾಜಿ ಪ್ರಧಾನಿ ಹಾಗೂ ಜೆ.ಡಿ.ಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು, ಜೆ.ಡಿ.ಎಸ್. ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವೀಡಿಯೋ ಸಂವಾದ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗಾಗಿ ಜೀವನದ ಕೊನೆ ಕ್ಷಣದವರೆಗೆ ಹೋರಾಟ ಮಾಡುತ್ತೇನೆ ಎಂದು ಅಭಯ ನೀಡಿದರು.

ಅಲ್ಲದೆ, ಅತೀ ಹೆಚ್ಚು ಮಳೆಯಾಗಿ ಹಾನಿಯಾದ ಮುಂಬೈ ಕರ್ನಾಟಕ ಪ್ರದೇಶಗಳಿಗೆ ಅವಶ್ಯವಿದ್ದಲ್ಲಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ, ೧೪ ರಿಂದ ಪಾರ್ಲಿಮೆಂಟ್ ಅಧಿವೇಶನ ಪ್ರಾರಂಭವಾಗುವುದರಿಂದ ಈ ಭಾಗದ ಸಮಸ್ಯೆ ಕುರಿತು ಸವಿಸ್ಥಾರವಾಗಿ ಚರ್ಚಿಸುತ್ತೇನೆ ಎಂದರು.

ಕಳೆದ ಬಾರಿ ಅತೀವೃಷ್ಟಿ, ನಂತರ ಈಗ ಕರೋನಾ ಹಾಗೂ ಪ್ರವಾಹ ಪರಿಸ್ಥಿತಿ ಜೊತೆಗೆ ಈ ಭಾಗದಲ್ಲಿ ಮಹಾರಾಷ್ಟ್ರದ ಕೋಯಿನಾ ಡ್ಯಾಂನಿಂದ ಹೆಚ್ಚು ನೀರು ಬಿಡುಗಡೆ ಮಾಡಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವರದಾ, ಧರ್ಮಾ ನದಿ ಹಾಗೂ ಬೆಣ್ಣಿಹಳ್ಳ, ತುಪ್ಪರಿಹಳ್ಳ, ಹಂದಿಗನಹಳ್ಳ, ಸವಳಹಳ್ಳ, ರಾಡಿಹಳ್ಳ, ಡೋಗಿನಾಲಾ ಮುಂತಾದ ನಾಲೆಗಳಿಗೆ ನೀರುನುಗ್ಗಿ ಬೆಳೆ ಹಾನಿಯಾದ ಬಗ್ಗೆ ಮಾಹಿತಿ ಪಡೆದರು.

 ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ತಿಪ್ಪೆಸ್ವಾಮಿ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

ಈ ಭಾಗದ ಸಮಸ್ಯೆಗಳ ಕುರಿತು ಮಾಜಿ ಶಾಸಕ ಎನ್ ಹೆಚ್. ಕೋನರಡ್ಡಿ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷರುಗಳಾದ ಕಲ್ಲಪ್ಪ ಮಘೇಣ್ಣವರ ಚಿಕ್ಕೋಡಿ, ಶಂಕರ ಮಾಡಲಗಿ ಬೆಳಗಾವಿ, ಬಿ.ಬಿ. ಗಂಗಾಧರಮಠ ಧಾರವಾಡ, ಬಿ.ಆರ್. ನಾಯಕ ಉತ್ತರ ಕನ್ನಡ, ಮಲ್ಲಿಕಾರ್ಜುನ ಯೆಂಡಿಗೇರಿ ವಿಜಯಪುರ, ಅಂದಾನಯ್ಯ ಕುರ್ತಕೋಟಿಮಠ ಗದಗ, ಫಹೀಮ ಮುಜಾಹಿದ್ ಕಾಂಟ್ರ್ಯಾಕ್ಟರ್, ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸೀಮರದ, ಶಿವಶಂಕರ ಕಲ್ಲೂರ, ಶ್ರೀಮತಿ ಮಂಗಾಳಾದೇವಿ ಬಿರಾದರ, ಪ್ರದೀಪ ನಾಯಕರ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ, ಭೀಮಪ್ಪ ಗಡಾದ, ಅಶೋಕ ಪೂಜಾರಿ, ರಾಜುಗೌಡ ಪಾಟೀಲ, ಕೃಷ್ಣಾ ಜೊಯಿಡಾ, ಹನಮಂತಪ್ಪ ಬೆಂಕಿಹಳ್ಳಿ, ಉಮೆಶ ತಳವಾರ, ಮಲ್ಲಿಕಾರ್ಜುನ ಹಲಗೇರಿ, ಶಂಕರ ಬಾಳಿಕಾಯಿ, ಸಾಧೀಕ ಹಕೀಮ ಗಮನ ಸೆಳೆದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *