ಜಿಲ್ಲೆ

ಧಾರವಾಡದ ಶಿವ ದೇವಸ್ಥಾನ ಧ್ವಂಸ ವಿರುದ್ಧ ಶ್ರೀರಾಮ ಸೇನಾ ಪ್ರತಿಭಟನೆ

ಧಾರವಾಡ prajakiran.com : ಮನ್ಸೂಚನೆ ನೀಡದೇ ಶಿವನ ದೇವಸ್ಥಾನ ಧ್ವಂಸಗೊಳಿಸಿದ ಜಿಲ್ಲಾಡಳಿತದ ವಿರುದ್ಧ ಶ್ರೀರಾಮ ಸೇನಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಗ್ರಾಮದ ಸ.ನಂ.೨೮೭ ರಲ್ಲಿನ ಶಿವ ದೇವಸ್ಥಾನವನ್ನು ಜಿಲ್ಲಾಡಳಿತ ನಿನ್ನೆ ರಾತ್ರಿ ಧ್ವಂಸಗೊಳಿಸಿದೆ. ಜಿಲ್ಲಾಡಳಿತದ ಈ ಕ್ರಮ ಅಕ್ಷಮ್ಯವಾಗಿದೆ.ಅಲ್ಲದೇ ಬಹಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವುದಾಗಿದೆ ಎಂದು ಕಿಡಿಕಾರಿದರು.

ಸಂಬಂಧಿಸಿದವರಿಗೆ ಸೂಚನೆ ನೀಡಿ ಸ್ಥಳಾಂತರಕ್ಕೆ ಸಮಯ ಕೂಡ ಕೊಡದೇ ದೇವಸ್ಥಾನ ಧ್ವಂಸಗೊಳಿಸಿದ್ದು ಅಘಾತಕಾರಿ ಸಂಗತಿಯಾಗಿದೆ.

ಸರಕಾರಿ ಜಾಗೆ ಒತ್ತುವರಿ ಮಾಡಿಕೊಂಡು ಪ್ರಾರ್ಥನಾ ಮಂದಿರಗಳನ್ನು ಕಟ್ಟಲಾಗಿದೆ. ರಸ್ತೆಯಲ್ಲಿಯೇ ಪ್ರಾರ್ಥನಾ ಮಂದಿರಗಳಿದ್ದರೂ ನಿರ್ಲಕ್ಷ್ಯವಹಿಸಿರುವ ಜಿಲ್ಲಾಡಳಿತ ಹಿಂದೂಗಳ ದೇವಸ್ಥಾನ ಧ್ವಂಸ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ನಂತರ ಘಟನೆ ಖಂಡಿಸಿ ಶ್ರೀರಾಮ ಸೇನಾ ಮುಖಂಡ ಪ್ರಮೋದ ಮುತಾಲಿಕ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಗಂಗಾಧರ ಕುಲಕರ್ಣಿ, ಪ್ರಕಾಶ ಕ್ಯಾರಕೊಪ್ಪ, ಪರಸುರಾಮ, ಮಹಾಲಿಂಗ ಐಗಳಿ, ದೀಪಕ, ವಿನೋದ ಕದಂ, ಭರತ ಸಾವಂತ  ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *