ಧಾರವಾಡ prajakiran.com : ಧಾರವಾಡದಲ್ಲಿ ವ್ಯಾಕ್ಸಿನ್ ಪಡೆಯಲು ನೂಕು ನುಗ್ಗಲು ನಡೆದಿದೆ.
ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಈ ನೂಕಾಟ ತಳ್ಳಾಟ ನಡೆದಿದೆ.
ಜನದಟ್ಟಣೆ ಹಿನ್ನೆಲೆಯಲ್ಲಿ ಸಿಬ್ಬಂದಿ
ಲಸಿಕೆ ಕೇಂದ್ರದ ಬಾಗಿಲು ಹಾಕಿದರು.
ಕೇವಲ 50 ಡೋಸ್ ಮಾತ್ರ ಇದೆ.
50 ಜನರಿಗೆ ಎರಡನೇ ಡೋಜ್ ಮಾತ್ರ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದರು.
ಆದರೆ, ವ್ಯಾಕ್ಸಿನ್ಗಾಗಿ ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮಲ್ಲಿ ಐವತ್ತು ಡೋಸ್ ಮಾತ್ರ ಇವೆ ಎಂದು ಬಾಗಿಲು ಹಾಕಿದ ಸಿಬ್ಬಂದಿ ನಡೆಗೆ ವ್ಯಾಪಕ ಕಿಡಿಕಾರಿದ್ದಾರೆ.
ಅಲ್ಲದೆ, ಜನರನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶ ಮಾಡಿದರು.
ಲಸಿಕಾ ಕೇಂದ್ರದ ಬಾಗಿಲು ಹಾಕಿ ಐವತ್ತು ಜನರಿಗೆ ಕಾತ್ರ ಕೂಪನ್ ವಿತರಣೆ ಮಾಡಲಾಯಿತು.
ಬಾಗಿಲು ಹಾಕಿದ ಹಿನ್ನೆಲೆಯಲ್ಲಿ ಜನ
ನಿರಾಸೆಯಿಂದ ಮರಳಿ ಹೋದರು.