ಹುಬ್ಬಳ್ಳಿ prajakiran.com : ಜೀರೋ ಟ್ರಾಫಿಕ್ ನಲ್ಲಿ ಜೀವಂತ ಲಿವರ್ ಅನ್ನು ಹುಬ್ಬಳ್ಳಿ ವೈದ್ಯರು ಸಾಗಿಸಿದ್ದಾರೆ.
ಹುಬ್ಬಳ್ಳಿಯ ಎಸ್.ಡಿಎಂ ಆಸ್ಪತ್ರೆಯಿಂದ ಬೆಂಗಳೂರಿನ ಆರ್.ವಿ ಆಸ್ಪತ್ರೆಗೆ ಲಿವರ್ ಸಾಗಿಸಲಾಗಿದೆ.
ಎಸ್.ಡಿಎಮ್ ನಲ್ಲಿ ಬ್ರೇನ್ ಡೆಡ್ ಆಗಿದ್ದ ವ್ಯಕ್ತಿಯ ಲಿವರ್, ಕಣ್ಣು ಸೇರಿ ಅಂಗಾಂಗ ದಾನ ಮಾಡಿದ್ದರು.
ಹೀಗಾಗಿ ಹುಬ್ಬಳ್ಳಿಯ ಎಸ್.ಡಿಎಮ್ ಆಸ್ಪತ್ರೆಯಿಂದ ಏರ್ಪೋರ್ಟ್ ವರೆಗೆ ೧೨ ಕಿಲೋಮೀಟರ್ ಕಾರಿಡಾರ್.
ಬಿಗಿ ಪೊಲೀಸ್ ಭದ್ರತೆಯಲ್ಲಿ ಜೀರೊ ಟ್ರಾಫಿಕ್ ವ್ಯವಸ್ಥೆ ಮಾಡಿದ ಪೊಲೀಸರು.
ಮೂರು ಗಂಟೆಯೋಳಗೆ ಲಿವರ್ ಬೆಂಗಳೂರು ತಲುಪಿಸಬೇಕಿತ್ತು.
ಹುಬ್ಬಳ್ಳಿಯಿಂದ ಇಂಡಿಗೋ ಪ್ಲೈಟ್ ಮೂಲಕ ಲಿವರ್ ಸಾಗಿಸಿದ ಎಸ್.ಡಿಎಮ್ ವೈದ್ಯರು.
ಆ ಮೂಲಕ ಹಲವರ ಬಾಳಿಗೆ ಬೆಳಕು ನೀಡಿದ ಸಮಾಧಾನ ವೈದ್ಯರಿಗಿದೆ.