ಅಪರಾಧ

ಪಿಎಸ್ ಐಗೆ ಅವಾಜ್ ಹಾಕಿದ್ದ ಇಬ್ಬರು ಯುವಕರ ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ prajakiran.com : ತಾನು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಅಧ್ಯಕ್ಷನೆಂದು ಪಿಎಸ್ ಐಗೆ ಅವಾಜ್ ಹಾಕಿದ್ದ ಇಬ್ಬರು ಯುವಕರ ಬಂಧಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಬಂಧಿತರನ್ನು ಹುಬ್ಬಳ್ಳಿಯ ಸುಳ್ಳ ರಸ್ತೆಯ ಬಸವೇಶ್ವರ ಪಾರ್ಕ್ ನ ಸುನೀಲ ಚಂದ್ರಶೇಖರ ಶಲವಡಿ ಹಾಗೂ ಪುನೀತಕುಮಾರ ಚಂದ್ರಶೇಖರ ಶಲವಡಿ ಎಂದು ಗುರುತಿಸಲಾಗಿದೆ.

ಇವರು ಮೇ 23ರಂದು ಹುಬ್ಬಳ್ಳಿ ಪೂರ್ವ ಸಂಚಾರ ಪೊಲೀಸ್ ಠಾಣೆ ಪಿಎಸ್ ಐ ಎಸ್ ಎಸ್ ದೇಸಾಯಿಅವರಿಗೆ ವಾಹನ ತಪಾಸಣೆ ವೇಳೆ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿರುವುದನ್ನು ಸುನೀಲ  ಗೆ ಪ್ರಶ್ನಿಸಿದಾಗ ಪುನೀತ ಬಂದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು.

ತನ್ನಅಣ್ಣನ ದ್ವಿಚಕ್ರವಾಹನವನ್ನು ದಂಡ ವಿಧಿಸದೆ ಬಿಡಬೇಕು. ನಾನು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಅಧ್ಯಕ್ಷನೆಂದು ಹುಬ್ಬಳ್ಳಿ ಪಿಎಸ್ ಐ ಗೆ ನಿಂದಿಸಿದ್ದಲ್ಲದೆ, ಅವರ ಬಳಿಯಿದ್ದ ದಂಡ ವಿಧಿಸುವ ಬ್ಲಾಕಬೇರಿ ಮಶೀನ್ ಕಿತ್ತುಕೊಂಡ ಆರೋಪದ ಮೇಲೆ ಹುಬ್ಬಳ್ಳಿಯ ಕೇಶ್ವಾಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಹೆಸರು ಹೇಳಿ ಜನರಿಗೆ ಬೆದರಿಸಿ, ಮೋಸ ಮಾಡುವ ಪ್ರವೃತ್ತಿಯವರು ಎಂದುತಿಳಿದುಬಂದಿದ್ದು, ಇವರಿಂದ ಯಾರಾದರೂ ಮೋಸ ಹೋದವರಿದ್ದರೆ ಕೂಡಲೇ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ಇಲ್ಲವೇ ಪೊಲೀಸ್ ಆಯುಕ್ತರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ್ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *