ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಕರೋನಾಗೆ ಮೊದಲ ಪೊಲೀಸ್ ಅಧಿಕಾರಿ ಬಲಿ….!

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕರೋನಾಕ್ಕೆ 39 ಜನರನ್ನು ಬಲಿ ಪಡೆದಿರುವ ಮಹಾಮಾರಿಯ ಸಾವಿನ ರಣಕೇಕೆ ಮತ್ತೇ ಮುಂದುವರೆದಿದೆ. ಈ ಬಾರಿ ಕರೋನಾ ಸೇನಾನಿಯನ್ನೇ ಬಲಿ ಪಡೆದಿರುವ ಕ್ರೂರಿ ಕಿಲ್ಲರ್ ಕರೋನಾ ಧಾರವಾಡ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರನ್ನು ಬಲಿ ಪಡೆದಿರುವುದು ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದೆ. 58 ವರ್ಷದ ಎ ಎಸ್ ಐ ಒಬ್ಬರು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಕ್ರೂರಿ ಕರೋನಾ ಸಂಕಷ್ಟಕ್ಕೆ ಸಿಲುಕಿ ಜುಲೈ 7ರಂದು ಹುಬ್ಬಳ್ಳಿಯ ಕಿಮ್ಸ್ […]

ರಾಜ್ಯ

ಧಾರವಾಡದಲ್ಲಿ ಸ್ವತ: ಗಸ್ತಿಗೀಳಿದ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತ…!

ಧಾರವಾಡ prajakiran.com  : ಜಿಲ್ಲೆಯಲ್ಲಿ  ಸಂಡೆ ಲಾಕ್ ಡೌನ್ ಹಾಗೂ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಸ್ವತ: ಅವಳಿನಗರದಲ್ಲಿ ಗಸ್ತು  ಸಂಚಾರ ಮಾಡಿ, ಭಾನುವಾರ ಪರಿಶೀಲಿಸಿದರು. ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಹೊರಟ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಕೋರ್ಟ ಸರ್ಕಲ್, ಲೈನ್ ಬಜಾರ, ಬೂಸಪ್ಪ ಚೌಕ್, ಕಾಮನಕಟ್ಟಿ, ಹೊಸ ಯಲ್ಲಾಪುರ, ಗಾಂಧಿಚೌಕ, ಹೆಬ್ಬಳ್ಳಿ ಅಗಸಿ, ಶಿವಾಜಿ ಸರ್ಕಲ್, ಓಲ್ಡ್ ಎಸ್‌ಪಿ ಸರ್ಕಲ್, ಜರ್ಮನ್ […]

ರಾಜ್ಯ

ಧಾರವಾಡದ ೪೬ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳ ಸುತ್ತ ೧೪೪ ಕಲಂ ನಿಷೇಧಾಜ್ಞೆ ಜಾರಿ

ಹುಬ್ಬಳ್ಳಿ-ಧಾರವಾಡ praajakiran.com :   ಜೂನ್ ೨೫  ರಿಂದ  ಜುಲೈ ೪ ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯ ಅವಧಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ಹಾಗೂ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಗಟ್ಟಲು ಹುಬ್ಬಳ್ಳಿ-ಧಾರವಾಡ ನಗರದ ೪೬ ಪರೀಕ್ಷಾ ಕೇಂದ್ರಗಳ ಸುತ್ತ ಸೆಕ್ಷನ್ ೧೪೪ ಕಲಂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.  ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಮತ್ತು ಪರೀಕ್ಷೆಗಳನ್ನು ಶಾಂತಿಯುತ ಮತ್ತು ಸುಗಮವಾಗಿ ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸಿಆರ್‌ಪಿಸಿ ಕಲಂ ೧೪೪ ಹಾಗೂ ೨೦ ರ ಪ್ರಕಾರ ಹೆಚ್ಚುವರಿ […]

ಅಪರಾಧ

ಧಾರವಾಡದಲ್ಲಿ ಬ್ಯಾಟ್ ಖರೀದಿಸಿ ಹಣ ಕೊಡದೆ ಆತನನ್ನೇ ತಳ್ಳಿ ಕೊಂದ ಖದೀಮರು ಅಂದರ್…!  

ಧಾರವಾಡ prajakiran.com : ಖರೀದಿಸಿದ ಬ್ಯಾಟ್ ಗೆ ಹಣ ಕೊಡದೆ ಖದೀಮರು ಆತನ ಪ್ರಾಣಪಕ್ಷಿಯನ್ನೇ ಕಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾನಗರಿ ಧಾರವಾಡದ ಗಾಂಧಿ ನಗರದ ಪುಟ್ ಪಾತ್ ಮೇಲೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಮಹಾರಾಷ್ಟ್ರದಿಂದ ಬಂದಿದ್ದ ಬ್ಯಾಟ ತಯಾರಿಸಿ ಮಾರುವ ಕುಟುಂಬದ ಯುವಕನೊಬ್ಬ ಈ ಖದೀಮರ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಮೃತನನ್ನು  ಮಹಾರಾಷ್ಟ್ರ ದ ಮಂಗಲ ನತ್ತು ಮೋರೆ  (21) ಎಂದು ಗುರುತಿಸಲಾಗಿದೆ. ಇತನ ಬಳಿ ಬ್ಯಾಟ್ ಖರೀದಿಸಿದ ತಡಸಿನಕೊಪ್ಪ ಗ್ರಾಮದ […]

ಅಪರಾಧ

ಪಿಎಸ್ ಐಗೆ ಅವಾಜ್ ಹಾಕಿದ್ದ ಇಬ್ಬರು ಯುವಕರ ಬಂಧಿಸಿದ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ prajakiran.com : ತಾನು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಅಧ್ಯಕ್ಷನೆಂದು ಪಿಎಸ್ ಐಗೆ ಅವಾಜ್ ಹಾಕಿದ್ದ ಇಬ್ಬರು ಯುವಕರ ಬಂಧಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಂಧಿತರನ್ನು ಹುಬ್ಬಳ್ಳಿಯ ಸುಳ್ಳ ರಸ್ತೆಯ ಬಸವೇಶ್ವರ ಪಾರ್ಕ್ ನ ಸುನೀಲ ಚಂದ್ರಶೇಖರ ಶಲವಡಿ ಹಾಗೂ ಪುನೀತಕುಮಾರ ಚಂದ್ರಶೇಖರ ಶಲವಡಿ ಎಂದು ಗುರುತಿಸಲಾಗಿದೆ. ಇವರು ಮೇ 23ರಂದು ಹುಬ್ಬಳ್ಳಿ ಪೂರ್ವ ಸಂಚಾರ ಪೊಲೀಸ್ ಠಾಣೆ ಪಿಎಸ್ ಐ ಎಸ್ ಎಸ್ ದೇಸಾಯಿಅವರಿಗೆ ವಾಹನ ತಪಾಸಣೆ ವೇಳೆ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿರುವುದನ್ನು ಸುನೀಲ […]