ಅಂತಾರಾಷ್ಟ್ರೀಯ

ರಾಜ್ಯದಲ್ಲಿ ಒಂದೇ ದಿನ 3 ಸಾವು : ದೇಶದಲ್ಲಿ 170 ಜನರ ಬಲಿ

 ನವದೆಹಲಿ prajakiran.com : ರಾಜ್ಯದಲ್ಲಿ ಕರೋನಾ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಅವಧಿಯಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ.

ಆ ಮೂಲಕ ರಾಜ್ಯದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ರಾಯಚೂರಿನ 69 ವರ್ಷದ ಮಹಿಳೆ ಕರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.

ಅದೇ ರೀತಿ ಬೀದರನ 49 ವರ್ಷದ ಪುರುಷ ಕೂಡ ಸಾವನ್ನಪ್ಪಿದ್ದಾರೆ. ಇನ್ನು ಗುಮ್ಮಟನಗರಿ ವಿಜಯಪುರದಲ್ಲಿ ಸಾವು ಸಂಭವಿಸಿದ್ದು, ಅಲ್ಲಿ 82 ವರ್ಷದ ವೃದ್ದ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾನೆ.

ದೇಶದಲ್ಲಿ ಕೂಡ ಕರೋನಾದಿಂದ ಬಳಲಿ ಬೆಂಡಾಗಿ ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಸಾಗಿದೆ. ಈವರೆಗೆ 4407 ಜನ ಸಾವನ್ನಪ್ಪಿದ್ದು, ನಿನ್ನೇ ಒಂದೇ ದಿನ 170 ಜನ ಕೊನೆಉಸಿರು ಎಳೆದಿದ್ದಾರೆ.

ಸೋಂಕಿತರ ಸಂಖ್ಯೆ ಕೂಡ 1.50 ಲಕ್ಷ ಗಡಿ ದಾಟಿದ್ದು, ದಿನಕ್ಕೆ 5 ರಿಂದ6 ಸಾವಿರ ಸೋಂಕಿತರು ಕಾಣಸಿಗುತ್ತಿದ್ದಾರೆ.

ಕಳೇದ 24 ಗಂಟೆಗಳಲ್ಲಿ 6387 ಜನ ಸೋಂಕಿತರು ದೇಶದ ವಿವಿಧ ಭಾಗಗಳಲ್ಲಿ ಪತ್ತೆಯಾಗಿದ್ದಾರೆ. ಆಮೂಲಕ ದೇಶದಜನತೆಯ ಆತಂಕ ತಲ್ಲಣ ಮುಂದುವರೆದಿದೆ.

ಮಹಾರಾಷ್ಟ್ರವೊಂದರಲ್ಲಿಯೇ ಈವರೆಗೆ 1792 ಜನ ಸಾವನ್ನಪ್ಪಿದ್ದು, 54 758 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಅದೇ ರೀತಿ ಪ್ರಧಾನಿಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರ ತವರು ರಾಜ್ಯ ಗುಜರಾತ್ ನಲ್ಲಿ ಈವರೆಗೆ 915 ಜನ ಸಾವನ್ನಪ್ಪಿದ್ದು, 14,821 ಜನರಿಗೆ ಸೋಂಕು ಆವರಿಸಿದೆ.

ಮಧ್ಯಪ್ರದೇಶದಲ್ಲಿ 305 ಸಾವನ್ನಪ್ಪಿದ್ದು, 7024 ಜನರು ಕರೋನಾದಿಂದ ಬಳಲುತ್ತಿದ್ದಾರೆ.

ಅದೇ ರೀತಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ 14,665 ಕರೋನಾ ಸೋಂಕಿತರಿದ್ದು, 288 ಜನ ಈವರೆಗೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಹೀಗೆ ದೇಶದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿ ಹಲವು ರಾಜ್ಯಗಳು ಅಕ್ಷರಶಃ ಬೆಚ್ಚಿಬಿದ್ದಿವೆ.

ವಿಶ್ವದ ಕರೋನಾ ಸೋಂಕಿತರ ಸಂಖ್ಯೆ 57 ಲಕ್ಷದ ಗಡಿ ದಾಟಿದ್ದು, 3.50 ಜನ ಈವರೆಗೆ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

 ಸಮಾಧಾನದ ಸಂಗತಿಯೆಂದರೆ ಈವರೆಗೆ ವಿಶ್ವದೆಲ್ಲಡೆ 24 ಲಕ್ಷ ಜನ ಗುಣಮುಖರಾಗಿದ್ದರೆ, ಭಾರತದಲ್ಲಿಯೇ ಶೇ 50ಕ್ಕಿಂತ ಹೆಚ್ಚಿನ ಸೋಂಕಿತರು ಚೇತರಿಸಿಕೊಂಡಿದ್ದಾರೆ.

1 ಲಕ್ಷ 57 ಸಾವಿರ ಪೈಕಿ 67 ಸಾವಿರಕ್ಕಿಂತ ಹೆಚ್ಚಿನ ಜನ ಗುಣಮುಖರಾಗಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *