ಅಂತಾರಾಷ್ಟ್ರೀಯ

ಅಯೋಧ್ಯೆ ಶ್ರೀರಾಮನ ಪೂಜೆಗೆ ಧಾರವಾಡದ ಕಂಬಳಿ ಉಡುಗೊರೆ

ಧಾರವಾಡ ಪ್ರಜಾಕಿರಣ.ಕಾಮ್ : ಜಗತ್ತೇ ಕುತೂಹಲದಿಂದ ಅಯೋಧ್ಯಾ ಶ್ರೀ ರಾಮಮಂದಿರ ಉದ್ಘಾಟನೆಯನ್ನ ಎದುರು ನೋಡುತ್ತಿದೆ.

ಈ ಸುಸಂದರ್ಭದಲ್ಲಿ ಧಾರವಾಡ ಜಿಲ್ಲೆಯಿಂದ ಪ್ರಭು ಶ್ರೀರಾಮನ ಪೂಜೆಗೆ ಕುರುಬರ ಕರಿ ಕಂಬಳಿ ಹೋಗುತ್ತಿದೆ.

ಹೌದು ಇಂತಹ ಸಂತಸದ ವಿಷಯ ಧಾರವಾಡ ಜಿಲ್ಲೆಯ ಪಾಲಿಗೆ ಹೆಮ್ಮೆ ಹಾಗೂ ಕೀರ್ತಿಯನ್ನು ತರುವಂತಿದೆ.

ಇದೇ ತಿಂಗಳು ಜನವರಿ 22ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆ ಹಾಗೂ ಭವ್ಯ ಮಂದಿರ ಉದ್ಘಾಟನೆ ಆಗುತ್ತಿದೆ.

ಮಂದಿರದ ಉದ್ಘಾಟನೆಗಾಗಿ ಧಾರವಾಡದ ಕಮಲಾಪುರ ಭಾಗದ ಪ್ರಗತಿಪರರು ಹಿರಿಯರು ಆಗಿರುವ ಸುಭಾಷ ಬಸಪ್ಪ ರಾಯಪ್ಪನವರ ಅವರು ಎರಡು ಕಂಬಳಿಗಳನ್ನು ರಾಮಮಂದಿರಕ್ಕೆ ಕೊಟ್ಟಿದ್ದಾರೆ.

 

ವಿಶ್ವ ಹಿಂದೂ ಪರಿಷತನ ಹಿರಿಯರಾಗಿರುವ
ಡಾ.ಎಸ್. ಆರ ರಾಮನಗೌಡರ ಹಾಗೂ ಮಾಜಿ ಮಹಾಪೌರ ಈರೇಶ ಅಂಚಟಗೇರಿ ಅವರಿಗೆ ಕಂಬಳಿಗಳನ್ನು ನೀಡಿದ್ದು, ಆ ಕಂಬಳಿಗಳನ್ನು ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರ ಮೂಲಕ ಪೂಜೆಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನದ ಆಡಳಿತ ಮಂಡಳಿಗೆ ಶ್ರೀರಾಮನ ಉದ್ಘಾಟನೆ ಪೂಜೆಗೆ ಕಂಬಳಿಗಳನ್ನು ಬಳಸುವುದರಿಂದ ಉತ್ತರ ಕರ್ನಾಟಕದ ಕೊಡುಗೆ ಕೊಟ್ಟಂತೆ ಆಗಿದೆ.

ರಾಮನ ಪೂಜೆಯಲ್ಲಿ ಕಂಬಳಿಗಳ ಮೂಲಕ ಅಳಿಲು ಸೇವೆ ಮಾಡಲು ಅವಕಾಶ ಸಿಕ್ಕವರಿಗೆ ವಿಶ್ವಹಿಂದೂಪರಿಷತನ ಹಿರಿಯರು ಕಂಬಳಿಗಳನ್ನ ಹಸ್ತಾಂತರಿಸಿಕೊಂಡು ಶುಭ ಹಾರೈಸಿದ್ರು.

ಈ ಸಂದರ್ಭದಲ್ಲಿ ಸೋಮಶೇಖರಗೌಡ ಪಾಟಿಲ, ಗುರುನಾಥ ಹೊನ್ನನ್ನವರ,
ಈರಪ್ಪ ಗೌಡಪ್ಪನವರ, ಎಲ್ಲಪ್ಪ‌ ಹೊಟ್ಟಿ , ಉಳವಪ್ಪ ಅನಾಡ, ಚಂದ್ರು ಗುಮಗೋಳಮಠ, ಮುರುಗೇಶ ಬಾಳಗಿ,
ಈರಯ್ಯ ರಾಮಯ್ಯನವ,
ಬಸು ಬಾಳಗಿ, ನಿರ್ಮಲ ಕನ್ನಿನಾಯ್ಕರ ಹಾಗೂ ಸ್ಥಳೀಯರು ಹಿರಿಯರು, ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *