ಅಂತಾರಾಷ್ಟ್ರೀಯ

ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಕಟುವಾಗಿ ಹರಿಹಾಯ್ದ ಬಿಜೆಪಿ ಶಾಸಕ : ಮಠಾಧೀಶರಿಗೆ ವಕಾಲತ್ತು ವಹಿಸದಿರಲು ಬಹಿರಂಗ ಮನವಿ

ವಿಜಯಪುರ prajakiran.com : ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮತ್ತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಕಟುವಾಗಿ ಹರಿಹಾಯ್ದಿದ್ದಾರೆ.

ಅಲ್ಲದೆ, ಅವರ ಕುಟುಂಬದ ಪರ
ಮಠಾಧೀಶರಿಗೆ ವಕಾಲತ್ತು ವಹಿಸದಿರಲು ಬಹಿರಂಗ ಮನವಿ ಮಾಡಿದ್ದಾರೆ.
ಅದರ ಸಾರಾಂಶ ಹೀಗಿದೆ ನೀವೆ ಓದಿ.

ರಾಜ್ಯದ ವೀರಶೈವ – ಲಿಂಗಾಯತ ಮಠ ಮಾನ್ಯಗಳ ಪೂಜ್ಯ ಮಠಾಧೀಶರು ಹಾಗು ಪೂಜ್ಯ ಸ್ವಾಮಿಜಿಗಳಿಗೆ ಶ್ರೀ ಯಡಿಯೂರಪ್ಪನವರ ಸುಪುತ್ರ ವಿಜಯೇಂದ್ರನಿಗೆ ತಮ್ಮ ತಂದೆಯ ಸ್ಥಾನದ ಪತನದ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನವಾಗುತ್ತದೆ ಮತ್ತು ಕಡೆಗಣಿಸಿಂತಾಗುತ್ತದೆ ಎಂದು ಬಿಂಬಿಸಲಾಗುತ್ತಿದೆ.

ಇದರಿಂದ ಪಕ್ಷಕ್ಕೆ ಭಾರಿ ಹಿನ್ನಡೆಯಾಗುತ್ತದೆ ಹಾಗೂ ಪಕ್ಷವೆ ಕರ್ನಾಟಕದಲ್ಲಿ ನಾಶವಾಗುತ್ತದೆ. ಎಂಬ ಇತ್ಯಾದಿ ಬೆದರಿಕೆಯನ್ನು ಮಠಾಧೀಶರು, ಸ್ವಾಮಿಜಿಗಳಿಂದ ಹೇಳಿಕೆ ನೀಡಲು ಒತ್ತಡ ಪ್ರಾರಂಭಿಸಿದ್ದು, ಇದಕ್ಕಾಗಿ ಎಷ್ಟೇ ಹಣ ಖರ್ಚಾದರೂ ಸರಿ, ಎಂಬಂತೆ ಎಲ್ಲರ ಸಂಪರ್ಕ ಮಾಡತೊಡಗಿದ್ದಾರೆ.

ಆದರೆ ಯಾರೊಬ್ಬ ಪೂಜ್ಯರು ಸಹ ಇಂತಹ ಸಮಾಜ ಕಳಂಕಿತರ ಪರವಾಗಿ ವಿಶ್ವ ಗುರು ಬಸವಣ್ಣನವರ ತತ್ವಕ್ಕೆ ವಿರುದ್ಧವಾದ ನಿಲುವು ತಳೆಯುವದಿಲ್ಲ ಎಂಬುದು ನಮ್ಮ ನಂಬಿಕೆ.

ಭ್ರಷ್ಟಾಚಾರದಿಂದ ಇಡೀ ಕುಟುಂಬ ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದೆ. ಇಂತಹ ಕುಟುಂಬದಿಂದ ನಮ್ಮ ರಾಜ್ಯವನ್ನು ಮುಕ್ತಗೊಳಿಸಲು ಯಾರೂ ಆಮೀಷಕ್ಕೆ ಒಳಗಾಗದೇ ಇವರ ಪರ ಹೇಳಿಕೆಯಾಗಲೀ ಅಥವಾ ಇವರ ಪರ ಲಾಭಿ ಮಾಡಬಾರದೆಂದು ಕಳಕಳಿಯ ವಿನಂತಿ.

ಭ್ರಷ್ಟಾಚಾರದಿಂದ ಗಳಿಸಿದ ಹಣದಿಂದ ಏನು ಬೇಕಾದರೂ ಖರೀಧಿಸಬಹುದು, ಎಂಬ ಸೊಕ್ಕಿನಿಂದ ಇಂದು ಎಲ್ಲರನ್ನೂ ಅಂದರೆ ಪೂಜ್ಯ ಮಠಾಧೀಶರನ್ನು. ಮಾಧ್ಯಮಗಳನ್ನು ವಿರೋಧ ಪಕ್ಷಗಳನ್ನು ಖರೀದಿ ಮಾಡುವ ಅಹಂಕಾರ ಮತ್ತು ಹಣದ ಪಿತ್ತ ನೆತ್ತಿಗೆ ಏರಿದೆ.

ತಮ್ಮ‌ ಪರ ನಿಲುವು ತಳೆಯಲು ಒತ್ತಾಯಿಸುವುದು ಹಾಗು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಹಾಗೂ ಪಕ್ಷದ ಕೇಂದ್ರದ ನಾಯಕರುಗಳನು ಕೆಟ್ಟ ಶಬ್ದಗಳಲ್ಲಿ ಟೀಕೀಸಲು ತಮ್ಮದೇ ಆದ ಖಾಸಗಿ ಜಾಲತಾಣ ಮೂಲಕ ಪ್ರೇರೇಪಿಸುತ್ತಿರುವುದು, ನಮ್ಮ ವೀರಶೈವ ಲಿಂಗಾಯತ ಸಮಾಜ ಎಂದಿಗೂ ಸಹಿಸಲ್ಲ. ಈ ರೀತಿ ಇವರ ಪರ ಹೋದರೆ ಸಮಾಜ ತಲೆತಗ್ಗಿಸಿ, ಭ್ರಷ್ಟ ಸಮಾಜವನಿಸುತ್ತದೆ

ಅಕಸ್ಮಾತ ಇಂತಹ ದುರುಳರ, ಭ್ರಷ್ಟರ ಪರವಾಗಿ ಯಾರಾದರೂ ಹೇಳಿಕೆ ನೀಡಿದರೆ ಅದು ನಮ್ಮ ವೀರಶೈವ ಲಿಂಗಾಯತರ ಅಧ:ಪತನವಾದಂತೆ ಸರಿ. ಎಂದಿಗೂ ಸಮಾಜ ಸಮಾಜಮುಖಿಯಾಗಿರಬೇಕು ಹೊರತು ಹಣದ ಆಮೀಷಕ್ಕೊಳಗಾಗಬಾರದು.

ಇದು ನಮ್ಮಪಂಚ ಪೀಠ, ಬಸವಾದಿ ಪ್ರಮಥರ ತತ್ತ್ವಕ್ಕೆ ವಿರೋಧ ಆಗಿದೆ ಎಂದು ಬಸವನಗೌಡ ಪಾಟೀಲ ಯತ್ನಾಳ ಮನವಿ ಮಾಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *