ಅಂತಾರಾಷ್ಟ್ರೀಯ

ಮಾತೃ ವಂದನಾ : ಮುದ್ರಣಕಾಶಿಗೆ ಆರನೇ ಸ್ಥಾನ

ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಿದ ಸಿಬ್ಬಂದಿ

ಮಂಜುನಾಥ ಎಸ್. ರಾಠೋಡ

ಗದಗ prajakiran.com : ಕೇಂದ್ರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಲಾಭಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲೇ ಆರನೇ ಸ್ಥಾನ ಪಡೆದಿದೆ.

ಏನಿದು ಯೋಜನೆ?:

ದೇಶದ ಮುಕ್ಕಾಲು ಪಾಲು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದಕ್ಕಿಂತ ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಅಪೌಷ್ಟಿಕತೆಯ ಪರಿಣಾಮ ಬಹುತೇಕ ತಾಯಂದಿರು ಅನಿವಾರ್ಯವಾಗಿ ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಮಗುವಿಗೆ ಗರ್ಭದಲ್ಲಿ ಸೂಕ್ತ ಪೋಷಣೆ ಸಿಗದಿದ್ದಾಗ ಇದು ಮಗುವಿನ ಬೆಳವಣಿಗೆ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಆರ್ಥಿಕ ಮತ್ತು ಸಾಮಾಜಿಕ ತೊಂದರೆಯಿಂದಾಗಿ ಅನೇಕ ಮಹಿಳೆಯರು ತಮ್ಮ ಗರ್ಭ ಧಾರಣೆ ಕೊನೆಯ ದಿನಗಳವರೆಗೆ ತಮ್ಮ ಜೀವನ ನಿರ್ವಹಣೆಗಾಗಿ ದುಡಿಯುತ್ತಾರೆ.

ಇದಲ್ಲದೆ, ಹೆರಿಗೆ ನಂತರದ ಕೆಲ ದಿನಗಳಲ್ಲೇ ಕೆಲಸ ಮಾಡುವುದನ್ನು ಪುನರಾರಂಭಿಸುತ್ತಾರೆ. ಇದರಿಂದಾಗಿ ಸಂಪೂರ್ಣವಾಗಿ ಚೇತರಿಸಿಕೊಳ್ಳದೇ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ, ಮೊದಲ ಆರು ತಿಂಗಳಲ್ಲಿ ಎಳೆಯ ಶಿಶುವಿಗೆ ಹಾಲುಣಿಸುವ ಸಾಮರ್ಥ್ಯ ಕುಸಿಯುತ್ತದೆ.

ಇದರಿಂದ ೧೯ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಷರತ್ತುಬದ್ಧವಾಗಿ ಮೂರು ಕಂತುಗಳಲ್ಲಿ    ಸಾವಿರ ವರ್ಗಾವಣೆ ಮಾಡಲಾಗುತ್ತದೆ.

ಆರನೇ ಸ್ಥಾನ ಪಡೆದ ಗದಗ: ಕಳೆದ ಜುಲೈವರೆಗೆ ಪ್ರತಿ ಜಿಲ್ಲೆಗೂ ಸರ್ಕಾರ ಗುರಿಯನ್ನು ನಿಗದಿಪಡಿಸಿತ್ತು. ಅದರಂತೆ ಗದಗ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ೨೧೦೦ಗುರಿಯನ್ನು ನಿಗದಿಪಡಿಸಲಾಗಿತ್ತು.

ಒಟ್ಟು ೨೬೪೫ ಗರ್ಭಿಣಿಯರನ್ನು ಗುರುತಿಸಿ, ಅವರಿಗೆ ಮಾತೃ ವಂದನಾ ಯೋಜನೆ ತಲುಪುವಂತೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ೬೨೭ ಗುರಿಗೆ ಬದಲಾಗಿ ೯೭೦ ಮಂದಿಗೆ ಯೋಜನೆ ತಲುಪುವಂತೆ ಮಾಡಲಾಗಿದೆ. ಈ ಮೂಲಕ ಕ್ರಮವಾಗಿ ಶೇ ೧೨೬.೪೨ ಸಾಧನೆ ಮಾಡಲಾಗಿದೆ.

ಹಿಂದೆ ಬಿದ್ದ ಬೆಂಗಳೂರು:

ರಾಜಧಾನಿ ಬೆಂಗಳೂರು ಈ ಯೋಜನೆ ಜಾರಿಯಲ್ಲಿ ಹಿಂದೆ ಬಿದ್ದಿದೆ. ಜುಲೈ ತಿಂಗಳಲ್ಲಿ ಕೇವಲ ಶೇ.೪೮.೩೩ರಷ್ಟು ಸಾಧನೆ ಮಾಡಿದ್ದು, ಜುಲೈ ಅಂತ್ಯದವರೆಗೆ ಒಟ್ಟಾರೆ ಶೇ.೮೮.೭೫ ಸಾಧನೆ ಮಾಡಲಾಗಿದೆ.

ಜುಲೈ ಅಂತ್ಯದವರೆಗೆ ಶೇ.೮೫.೯೪ ಸಾಧನೆ ಮಾಡುವ ಮೂಲಕ ಚಿಕ್ಕಮಗಳೂರು ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.

“ಕೋವಿಡ್ ಸಂದರ್ಭದಲ್ಲೂ ಅರ್ಹ ಫಲಾನುಭವಿಗೆ ಯೋಜನೆ ತಲುಪಿಸಿ ಈ ಯೋಜನೆಯಲ್ಲಿ ಗದಗ ಆರನೇ ಸ್ಥಾನಕ್ಕೇರಿರುವುದು ಶ್ಲಾಘನೀಯ.

ಇನ್ನೂ ಹೆಚ್ಚಿನ ಸಾಧನೆಯತ್ತ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಎಲ್ಲರ ಶ್ರಮದಿಂದ ಇದು ಸಾಧ್ಯವಾಗಿದೆ.”

– ಡಾ. ಆನಂದ .ಕೆ, ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ, ಗದಗ.

ಮಾತೃ ವಂದನಾ ಯೋಜನೆಯ ಜಿಲ್ಲಾವಾರು ಸಾಧನೆ (ಜುಲೈ)

ಜಿಲ್ಲೆ;       ಗುರಿಸಾಧನೆ:   ಶೇಕಡವಾರು

ರಾಮನಗರ:    ೪೭೫೯೦೯;    ೧೮೧.೭೪

ಕಲಬುರ್ಗಿ:    ೨೧೪೬; ೨೨೨೨;   ೧೭೩.೭೩

ವಿಜಯಪುರ೨೦೯೯;   ೩೪೭೫;   ೧೭೦.೪೩

ಯಾದಗಿರಿ:   ೧೦೨೭೧೬೧೪:    ೧೫೮.೫೬

ರಾಯಚೂರು೧೪೪೩೧೬೫೪:   ೧೪೧.೨೪

ಗದಗ:      ೬೨೭:   ೯೭೦:     ೧೩೬.೪೨

ಚಿಕ್ಕಬಳ್ಳಾಪುರ೩೯೭೮೫೪:    ೧೨೮.೮೬

ಮಂಡ್ಯ:     ೭೪೨:   ೯೪೬:    ೧೨೮.೮೧

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *