ಮುಂಬಯಿ prajakiran.com : ಸ್ವಾತಂತ್ರ್ಯವೀರ ಸಾರ್ವಕರ್ ಅವರ 137 ನೇ ಜನ್ಮದಿನದ ಅಂಗವಾಗಿ ಮುಂಬಯಿಯ ಪ್ರತಿಷ್ಠಿತ ರಾಮಭಾವು ಮ್ಹಾಳಗಿ ಪ್ರಭೋದಿನಿ (ಆರ್ ಎಂಪಿ ) ಹಾಗೂ ಸಾರ್ವಕರ್ ದರ್ಶನ ಪ್ರತಿಷ್ಠಾನ ವತಿಯಿಂದ ಮೇ 28ರಂದು ಸಂಜೆ 5ಗಂಟೆಗೆ ಫೇಸ್ ಬುಕ್ ಲೈವ್ https://www.facebook.com/rmponweb.org. ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಖ್ಯಾತ ಇತಿಹಾಸ ತಜ್ಞ ಹಾಗೂ ಸಾರ್ವಕರ್ ಇಕೋ ಫ್ರಮ್ ಫಾರಗಟನ್ ಫಾಸ್ಟ್ ಲೇಖಕ ಡಾ . ವಿಕ್ರಮ ಸಂಪತ್ ಅವರು ಸಭಿಕರನ್ನುದ್ದೇಶಿಸಿ, ಟೈಮ್ ಲೆಸ್ ಸಾರ್ವಕರ್ ಹಾಗೂ ಎ ವಿಸನ್ ಧ್ಯಾಟ್ ಇಸ್ ಕಮಿಂಗ್ ಟು ಏ ಫ್ರೂಸನ್ ವಿಷಯದ ಮೇಲೆ ಮಾತನಾಡಲಿದ್ದಾರೆ ಎಂದು ಸಾರ್ವಕರ್ ದರ್ಶನ ಪ್ರತಿಷ್ಠಾನ ಕಾರ್ಯದರ್ಶಿ ಹಾಗೂ ರಾಮಭಾವು ಮ್ಹಾಳಗಿ ಪ್ರಭೋದಿನಿ (ಆರ್ ಎಂಪಿ ) ಡೆರಕ್ಟರ್ ಜನರಲ್ ರವೀಂದ್ರ ಸಾಟೆ ತಿಳಿಸಿದ್ದಾರೆ.