ಅಪರಾಧ

ಧಾರವಾಡ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ಧಾರವಾಡ prajakiran.com ಆ.11 : ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಇತ್ತೀಚಿಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು. ಅಗಸ್ಟ್ 6 ರಂದು ಹಾರೋಬೆಳವಡಿ ಹತ್ತಿರ ಸರಗಳ್ಳತನ ಮಾಡಿದ ಹುಬ್ಬಳ್ಳಿಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು.

ಈ ಕುರಿತು ಇಂದು (ಆ.11) ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಎರಡು ಪ್ರತ್ಯೇಕ ಕೃತ್ಯಗಳಲ್ಲಿ ಭಾಗಿಯಾಗಿ ಆರೋಪವೆಸಗಿದ್ದ ಲಕ್ಷಣ ಬಳ್ಳಾರಿ (25), ಸಿದ್ಧಾರೂಢ ಉಪ್ಪಾರ (27) ಇವರಿಂದ 2 ಬಂಗಾರದ ಚೈನ್ (50 ಗ್ರಾಂ)ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಮೋಟಾರ್ ಸೈಕಲ್ ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ .

ಇಂತಹ ಕೃತ್ಯಗಳು ಬೇರೆಡೆ ಕಂಡುಬಂದರೆ ಸಾರ್ವಜನಿಕರು ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಅಥವಾ ಇಆರ್‌ಎಸ್ಎಸ್ 112 ಕ್ಕೆ ಕರೆ ಮಾಡಿದರೆ ತಕ್ಷಣ ಪೊಲೀಸ್ ಇಲಾಖೆಯು ಕಾರ್ಯಪ್ರವೃತ್ತರಾಗಿ ಪ್ರಕರಣ ಬೇಧಿಸಲು ಸಹಾಯವಾಗುತ್ತದೆ.

ಈ ದಾಳಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಗ್ರಾಮೀಣ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಎಂ.ಬಿ.ಸಂಕದ ಅವರ ಮಾರ್ಗದರ್ಶನದಲ್ಲಿ, ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಇನ್ಸಪೇಕ್ಟರ್ ಶ್ರೀಧರ ವ್ಹಿ ಸತಾರೆ, ಪಿಎಸ್‍ಐ ಗಳಾದ ಮಹೇಂದ್ರಕುಮಾರ ನಾಯಕ, ಸುಮಾ ಎಮ್.ಗೋರಬಾಳ ನೇತೃತ್ವದಲ್ಲಿ ಕಾನ್ಸ್‌ಟೇಬಲ್‌ಗಳಾದ ರುದ್ರಪ್ಪ ಮರಡಿ, ಎಫ್‌.ಕೆ.ತಿಮ್ಮಾಪೂರ, ಆರ್.ಡಿ.ಗಂಗಲ್, ಎಮ್.ಜಿ.ಸೈಯ್ಯದನವರ, ಗಣೇಶ ಕಾಂಬಳೆ, ಎಲ್.ಡಿ.ರಾಠೋಡ, ಪ್ರಕಾಶ ಗೂಳಪ್ಪಗೌಡರ, ಶರೀಫ್ ಎಂ.ಹಗೇದ ಭಾಗವಹಿಸಿದ್ದರು ಎಂದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *