ರಾಜ್ಯ

ಹುಬ್ಬಳ್ಳಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಏಳೆಂಟು ಬಾರಿ ಹೋಗಿ ಬಂದಿದ್ದ ಸೋಂಕಿತ

ಧಾರವಾಡ prajakiran.com :  ಕೋವಿಡ್ -19 ಸೊಂಕಿತರಾಗಿರುವ ಪಿ – 3397 ಹಾಗೂ ಪಿ- 3398 ಇವರ ಪ್ರಯಾಣ ವಿವರಗಳನ್ನು ಜಿಲ್ಲಾಡಳಿತವು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.

ಪಿ-3397 ಪ್ರಯಾಣ ವಿವರ :

ಪಿ- 3397 ನೇ ಸೋಂಕಿತ  47 ವರ್ಷದ ಪುರುಷ ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದ ನಿವಾಸಿಯಾಗಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ಬಾಡಿಗೆ ಬೊಲೆರೋ ವಾಹನದ ಮೂಲಕ ಹುಬ್ಬಳ್ಳಿಯ ಅಮರಗೋಳದ ಎಪಿಎಂಸಿಯ ತರಕಾರಿ ಮಾರುಕಟ್ಟೆಗೆ ಏಳೆಂಟು ಬಾರಿ ಹೋಗಿ ಬಂದಿದ್ದಾರೆ.

ಮೇ 18 ರಂದು ಬಿ. ಗುಡಿಹಾಳದಿಂದ ಅದೇ ಗ್ರಾಮದ ಪರಿಚಯದ ವ್ಯಕ್ತಿಯೊಂದಿಗೆ ಬೈಕ್ ಮೂಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಬೆಳಿಗ್ಗೆ 9:30 ಗಂಟೆಗೆ ಹೋಗಿದ್ದರು.

ಬೆಳಿಗ್ಗೆ 11.30 ಕ್ಕೆ ಗ್ರಾಮಕ್ಕೆ ಮರಳಿ,  ತಮ್ಮ ಗ್ರಾಮದ ವ್ಯಕ್ತಿಯೊಬ್ಬರ ಶವಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿರುತ್ತಾರೆ. 

ಮೇ 19 ರಂದು ಅದೇ ಗ್ರಾಮದ ಇಬ್ಬರು ವ್ಯಕ್ತಿಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟು ಮಧ್ಯಾಹ್ನ 12:30 ಕ್ಕೆ  ದುಮ್ಮವಾಡ ಗ್ರಾಮಕ್ಕೆ ಹೋಗಿ ,  ಮಧ್ಯಾಹ್ನ 2:30 ಕ್ಕೆ  ಪುನಃ ತಮ್ಮ ಮನೆಗೆ ಹಿಂದಿರುಗಿರುತ್ತಾರೆ .

ಅದೇ ದಿನ ಸಂಜೆ 6:30 ಕ್ಕೆ  ದ್ವಿಚಕ್ರ ವಾಹನದಲ್ಲಿ  ಕಲಘಟಗಿಗೆ ಹೋಗಿ ಸಂಜೆ 7:30 ಕ್ಕೆ ಮನೆಗೆ ಹಿಂದಿರುಗಿರುತ್ತಾರೆ . 

ಮೇ 20 ರಂದು ಬೆಳಿಗ್ಗೆ 9:30 ಕ್ಕೆ ದ್ವಿಚಕ್ರ ವಾಹನದಲ್ಲಿ ಕಲಘಟಗಿಗೆ ಹೋಗಿ ನಂತರ ಮಧ್ಯಾಹ್ನ 12 ಗಂಟೆಗೆ ಮನೆಗೆ ಹಿಂದಿರುಗಿರುತ್ತಾರೆ . 

ಮೇ 22 ರಂದು ಮಧ್ಯಾಹ್ನ 3:30 ಕ್ಕೆ ಮಗನೊಂದಿಗೆ ದ್ವಿಚಕ್ರ ವಾಹನದ ಮೂಲಕ ಮಿಶ್ರಿಕೋಟಿಯಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಸಂಜೆ 4:30  ಕ್ಕೆ ಮನೆಗೆ ಮರಳಿರುತ್ತಾರೆ.

ಮೇ 22 ರಿಂದ ಮೇ 26 ರವರಗೆ ಮನೆಯಲ್ಲಿಯೇ ಇರುತ್ತಾರೆ.  ಮೇ 26 ರಂದು ರಾತ್ರಿ 9  ಗಂಟೆಗೆ ತಮ್ಮ ಇಂಡಿಕಾ ಕಾರ್ ನಲ್ಲಿ ನಾಲ್ಕು ಜನ ಮಕ್ಕಳ ಜೊತೆ ಧಾರವಾಡ ಎಸ್ ಡಿ ಎಂ  ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿ ದಾಖಲಾಗಿರುತ್ತಾರೆ.

ಅದೇ ದಿನ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿರುತ್ತದೆ. 

ಮೇ 31 ರಂದು ಪಿ – 3397 ರವರು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .

ಪಿ – 3398 ನೇ ಸೋಂಕಿತ 25 ವರ್ಷದ ಪುರುಷ ಪ್ರಯಾಣ ವಿವರ :

ಬಿಹಾರ ರಾಜ್ಯದ ನಿವಾಸಿಯಾಗಿರುತ್ತಾರೆ.  ಇವರು ಲಾಕ್ ಡೌನ್  ಪೂರ್ವದ ಮೂರು ತಿಂಗಳು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿನ ಖಾಸಗಿ ಗಾರ್ಮೆಂಟಿನಲ್ಲಿ ಕಾರ್ಯನಿರ್ವಹಿಸಿ , ಅಲ್ಲಿಯೇ ವಾಸವಿರುತ್ತಾರೆ . 

ಮೇ 23 ರಂದು ಕಾಮಾಕ್ಷಿ ಪಾಳ್ಯದಿಂದ ಹೊರಟು ಬಸ್ ಮೂಲಕ ಮೆಜೆಸ್ಟಿಕ್ ಬಸ್ ನಿಲ್ದಾಣ ತಲುಪಿ ನಂತರ ಸಂಜೆ 5 ಗಂಟೆಗೆ ರಾಜಹಂಸ ಬಸ್‌ ( ಬಸ್ ನಂ ಕೆಎ – 25 – ಎಫ್ – 6860 ) ಮೂಲಕ ಹೊರಟು ಮೇ 24  ರ  ನಸುಕಿನ ಜಾವ 1:30  ಗಂಟೆಗೆ ಹುಬ್ಬಳ್ಳಿಯ ಗಬ್ಬೂರ  ಬೈಪಾಸ್‌ ತಲುಪಿ ಅಲ್ಲಿಂದ ಆಟೋ ಮೂಲಕ ಹಳೇ ಮಂಟೂರು ರಸ್ತೆ ಪಕ್ಕದಲ್ಲಿನ ಆಶ್ರಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ಬಂದಿರುತ್ತಾರೆ .

ಮೇ 24 ಹಾಗೂ ಮೇ 25 ರಂದು ಆಶ್ರಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ವಾಸವಿರುತ್ತಾರೆ .  ಮೇ 26  ರಂದು ಆಟೋ ಮೂಲಕ ಮಧ್ಯಾಹ್ನ 12:30 ಗಂಟೆಗೆ ಚಿಟಗುಪ್ಪಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿ ಮಧ್ಯಾಹ್ನ  3 ಗಂಟೆಗೆ  ಆಶ್ರಯ ಕಟ್ಟಡ ನಿರ್ಮಾಣ ಸ್ಥಳಕ್ಕೆ ಹಿಂದಿರುಗಿರುತ್ತಾರೆ.

ಅದೇ ದಿನ ಇವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿರುತ್ತದೆ . ಮೇ 27 ರಿಂದ 29 ರವರೆಗೆ ಹಳೇ ಮಂಟೂರು ರಸ್ತೆ ಪಕ್ಕದಲ್ಲಿನ ಆಶ್ರಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಯನಿರ್ವಹಿಸಿರುತ್ತಾರೆ .

ಮೇ 31 ರಂದು ಪಿ  -3398 ರವರು ಕೋವಿಡ್ -19 ಸೋಂಕಿತರೆಂದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ . 

ಈ ಇಬ್ಬರು ಸೋಂಕಿತರನ್ನು  ಸಂಪರ್ಕಿಸಿದ ಸಾರ್ವಜನಿಕರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಆ ಎಲ್ಲ ವ್ಯಕ್ತಿಗಳು ಕೂಡಲೇ ಕರೊನಾ ಸಹಾಯವಾಣಿ 1077 ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು.

ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು  ಎಂದು ಜಿಲ್ಲಾಡಳಿತ ತಿಳಿಸಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *