ರಾಜ್ಯ

ಹುಬ್ಬಳ್ಳಿ ಕಿಮ್ಸ್ ವೈದ್ಯರ ಅಮೋಘ ಸಾಧನೆ :‌ ಕರೊನಾ ಪೀಡಿತರಿಗೆ ಪ್ಲಾಸ್ಮಾ ಥೆರಪಿ ಯಶಸ್ಸು

ಹುಬ್ಬಳ್ಳಿ  prajakiran.com : ಕರೊನಾ ಪೀಡಿತರಿಗೆ ನೀಡಲಾದ ಪ್ಲಾಸ್ಮಾ ಥೆರಪಿ ಯಶಸ್ಸುಕಂಡಿದ್ದು,   ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರು ಈ ಅಮೋಘ ಸಾಧನೆ ಮಾಡಿದ್ದಾರೆ.

ಕರೊನಾ ಸೋಂಕಿತನಿಗೆ ನೀಡಿದ ಪ್ಲಾಸ್ಮಾ ಥೆರಪಿ  ಚಿಕಿತ್ಸೆ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದೆ.

ಪ್ಲಾಸ್ಮಾ ಥೆರಪಿಗೆ ಒಳಗಾದ ೬೪ ವರ್ಷದ ಸೋಂಕಿತ  ವ್ಯಕ್ತಿ ಗುಣಮುಖನಾಗಿದ್ದು, ಇದು ರಾಜ್ಯದಲೇ ಮೊದಲ ಯಶಸ್ವಿ  ಪ್ಲಾಸ್ಮಾ ಥೆರಪಿಯಾಗಿದೆ.

೬೪ ವರ್ಷದ ಕರೊನಾ ಸೋಂಕಿತ ವ್ಯಕ್ತಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.‌

ಈತನಿಗೆ ಪ್ಲಾಸ್ಮಾ ಥೆರಪಿ ಮಾಡಲು ನಿರ್ಧರಿಸಿದ್ದ ಹುಬ್ಬಳ್ಳಿಯ ಕಿಮ್ಸ್ ವೈದ್ಯರ ತಂಡ, ಕರೋನಾದಿಂದ ಗುಣಮುಖನಾದ ವ್ಯಕ್ತಿಯ ದೇಹದಿಂದ ಪ್ಲಾಸ್ಮಾ ಬೇರ್ಪಡಿಸಿ, ಸೋಂಕಿತನಿಗೆ ನೀಡಲಾಗಿತ್ತು.

ಒಟ್ಟು  ೨೦೦ ಎಂಎಲ್ ನಂತೆ ಎರಡು ಬಾರಿ ಪ್ಲಾಸ್ಮಾ ಥೆರಪಿ ನೀಡಿದ ಬಳಿಕ ಸೋಂಕಿತ ವೃದ್ಧ ಗುಣಮುಖನಾಗಿದ್ದಾನೆ.

ಇದು ರಾಜ್ಯದ ಕರೋನಾ ಪೀಡಿತರಲ್ಲಿ ಹೊಸ ಆಶಾ ಕಿರಣ ಮೂಡಿಸಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹಾಗೂ ಡಾ. ರಾಮ ಕೌಲಗೊಡ, ಡಾ ಅರುಣ ಕುಮಾರ್  ನೇತೃತ್ವದಲ್ಲಿ  ಈ ಪ್ಲಾಸ್ಮಾ ಚಿಕಿತ್ಸೆ ನಡೆದಿತ್ತು.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರ ಈ ಸಾಧನೆಗೆ ಸೋಂಕಿತ ಹಾಗೂ ಆತನ ಕುಟುಂಬ ಸದಸ್ಯರು ಮತ್ತು ಧಾರವಾಡ ಜಿಲ್ಲೆಯ ಜನತೆ ಮನದುಂಬಿ ಹರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ, ಐಎಂಸಿಆರ್ ನಮಗೆ ಪ್ಲಾಸ್ಮಾ ಥೆರಪಿ ಮಾಡಲು ಅನುಮತಿ ನೀಡಿತ್ತು.

ಆದರೆ ಆರಂಭದಲ್ಲಿ ಪ್ಲಾಸ್ಮಾ   ಬಂದಿರಲಿಲ್ಲ. ಆದರೆ ಪಿ-೩೬೩ ಸೋಂಕಿತ ವ್ಯಕ್ತಿ ತಮ್ಮ ಪ್ಲಾಸ್ಮಾ ಡೋನೆಟ್ ಮಾಡಲು ಮುಂದೆ ಬಂದರು.

ಅದನ್ನು ಪಿ-೨೭೧೦ ಸೋಂಕಿತನಿಗೆ ಪ್ಲಾಸ್ಮಾ ಥೆರಪಿ  ಮಾಡಿ ನಮ್ಮ ವೈದ್ಯರ ತಂಡ ಯಶಸ್ಸು ಸಾಧಿಸಿದೆ ಎಂದು ತಮ್ಮ ಸಂತಸ ಹಂಚಿಕೊಂಡರು.

ರಾಜ್ಯದಲ್ಲಿ ಯಶಸ್ಸು ಕಂಡ ಮೊದಲ ಪ್ಲಾಸ್ಮಾ ಥೆರಪಿ ಪ್ರಕರಣ ಇದಾಗಿದ್ದು, ಡಾ. ಸಚಿನ್ ಹೊಸಕಟ್ಟಿ, ಡಾ.ರಾಮ ಕೌಲಗೊಡ, ಡಾ. ಅರುಣ್ ಕುಮಾರ್ ನೇತೃತ್ವದಲ್ಲಿ  ಪ್ಲಾಸ್ಮಾ ಚಿಕಿತ್ಸೆ ನಡೆಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *