ರಾಜ್ಯ

ಕುಂದಗೋಳ ಕಾಂಗ್ರೆಸ್ ನಲ್ಲಿ ಕಾರ್ಯಕರ್ತರ ಕಡೆಗಣನೆಗೆ ಬುಗಿಲೆದ್ದ ಆಕ್ರೋಶ

ಹುಬ್ಬಳ್ಳಿ prajakiran.com : ಮಾಜಿ ಸಚಿವ ಸಿ.ಎಸ್ ಶಿವಳ್ಳಿ ಅವರ ನಿಧನದ ನಂತರ ಕುಂದಗೋಳ ಕಾಂಗ್ರೆಸ್ ನಲ್ಲಿ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶ  ಬುಗಿಲೆದಿದೆ.

ಈ ಬಗ್ಗೆ ಅನೇಕ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ಅವರ ಕೆಲವು ಅಭಿಪ್ರಾಯಗಳು ಈ ರೀತಿ ಇವೆ.

ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸನಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ.  ಲೂಟಿಕೋರರಿಗೆ ಮಾತ್ರ ಜಾಗ. ಶಿವಳ್ಳಿ ನಂತರ ಅನಾಥವಾದ ಕುಂದಗೋಳ ತಾಲೂಕಿನ ಪ್ರಾಮಾಣಿಕ ಕಾಂಗ್ರೇಸ್ ಕಾರ್ಯಕರ್ತರು.

ಶಿವಳ್ಳಿಯವರು ಯಾವ ಅನ್ಯಾಯವನ್ನು ವಿರೋದಿಸುತ್ತಿದ್ದರೋ ಅದು ಇಂದು ತಾಂಡವವಾಡುತ್ತಿದೆ. ಅವರು ಬೆಳೆಸಿದ ಅನೇಕ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಪ್ರಾಮಾಣಿಕತೆಗೆ ಬೆಲೆನೇ ಇಲ್ಲದಂತಾಗಿದೆ. 

ಶಿವಳ್ಳಿಯವರು ನಮ್ಮಂತ ಅನೇಕ ನಿಯತ್ತಿನ  ಕಾರ್ಯಕರ್ತರನ್ನ ಅನಾಥರನ್ನಾಗಿ ಮಾಡಿದರು. ಶಿವಳ್ಳಿಯವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯ ಇಲ್ಲ.  ಶಿವಳ್ಳಿಯವರಿಗೆ ಶಿವಳ್ಳಿ ಅವರೇ ಸಾಟಿ ಬರೆದಿದ್ದಾರೆ.

ಆದರೆ ಈ ಬಗ್ಗೆ ಎಲ್ಲವನ್ನೂ ನೋಡಿಯೋ ನೋಡದಂತೆ ಇರುವ ಧಾರವಾಡ ಜಿಲ್ಲಾ ಕಾಂಗ್ರೆಸ್ ಮುಖಂಡರು ಮಾತ್ರ ಜಾಣ ಕುರುಡುತನ ತೋರಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಏಕೆಂದರೆ ಆ ವಾಟ್ಸ್ ಅಪ್ ಗ್ರೂಪನಲ್ಲಿ ಜಿಲ್ಲಾಧಕ್ಷರು ಕೂಡ ಇದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹರಿಸುವುದು ಬಿಟ್ಟು ಮೌನ್ ವಹಿಸಿರುವುದು ಅವರು ಪಕ್ಷದ ಕಾರ್ಯಕರ್ತರನ್ನು ಸಮನಾಗಿ ಕರೆದುಕೊಂಡು ಹೋಗುವಲ್ಲಿ ವಿಫಲವಾಗಿದ್ದಾರೆ ಎಂಬುದು ತೋರಿಸಿಕೊಡುತ್ತದೆ ಎಂದರೆ ತಪ್ಪಾಗಲಾರದು.

ಧಾರವಾಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಕಾರ್ಯಕರ್ತರಿಗಿಂತ ಮುಖಂಡರ ಪಡೆಯೇ ದೊಡ್ಡದಿದ್ದು, ಹತ್ತು ಹಲವು ಬಣಗಳಿವೆ. ಹೀಗಾಗಿ ಎಲ್ಲರನ್ನು ಒಟ್ಟೂಗೂಡಿಸಿ ಕರೆದುಕೊಂಡು ಹೋಗುವ ಸಮರ್ಥ ನಾಯಕರ ಕೊರತೆ ಜಿಲ್ಲೆಯಲ್ಲಿ ಪಕ್ಷಕ್ಕೆ ಎದ್ದುಕಾಣುತ್ತಿದೆ ಎಂಬುದು ಕಾರ್ಯಕರ್ತರ ಅನಿಸಿಕೆಯಾಗಿದೆ..

ಜಿಲ್ಲೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ನಾಯಕತ್ವ ಕೊರತೆ ಬಗ್ಗೆ ಅನೇಕ  ಹಿರಿಯ ನಾಯಕರ ಬಳಿ ತಮ್ಮಅಳಲು ತೋಡಿಕೊಂಡಿದ್ದಾರೆ. ಅವರು ಕೂಡಅದಕ್ಕೆ ಹೆಚ್ಚಿನ ಮನ್ನಣೆ ನೀಡಲು ಹೋಗದಿರುವುದುಹಲವರಿಗೆ ಅಚ್ಚರಿ ಮೂಡಿಸಿದೆ.

ಈಗಲಾದರೂ ಕೆಪಿಸಿಸಿಗೆ ನೂತನ ಸಾರಥ್ಯವಹಿಸಿರುವ ಡಿ.ಕೆ.ಶಿವಕುಮಾರ್, ಉತ್ತರ ಕರ್ನಾಟಕ ಭಾಗದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್ ಅವರು ಬರುವ ದಿನಗಳಲ್ಲಿ ಇದಕ್ಕೆ ಯಾವ ರೀತಿ ಚುರುಕು ಮುಟ್ಟಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *