ರಾಜ್ಯ

ಧಾರವಾಡ ಜಿಲ್ಲೆಯ ಐದು ಸೋಂಕಿತರು ಐಸಿಯುನಲ್ಲಿ : ಮತ್ತೇ ಮೂವರಿಗೆ ವಕ್ಕರಿಸಿದ ಕರೋನಾ   

follow/like: facebook.com/prajakirannews ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಮತ್ತೆ ಹೊಸದಾಗಿ 3 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ. ಡಿಡಬ್ಲ್ಯೂಡಿ 176-ಪಿ-7946ನ ಸೋಂಕಿತ 56   ವರ್ಷದ ಪುರುಷ ನಿಗೆ ಕರೋನಾ ಸೋಂಕು ಹೇಗೆ ಬಂತು ಎಂಬುದು ತಿಳಿದಿಲ್ಲ. ಹೀಗಾಗಿ ಆತನ ಕರೋನಾ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.  ಡಿಡಬ್ಲ್ಯೂಡಿ 177-ಪಿ-7947ನ ಸೋಂಕಿತ 51 ವರ್ಷದ ಪುರುಷನಿಗೆ ಕೂಡ  ಕರೋನಾ ವೈರಸ್ ವಕ್ಕರಿಸಿದೆ. ಆದರೆ […]

ರಾಜ್ಯ

ಮಗಳಿಂದ ತಂದೆಗೆ, ತಂದೆಯಿಂದ ಧಾರವಾಡದ ಮೊರಬ ಊರಿಗೆ ಹರಡಿದ ಮಹಾಮಾರಿ ಕರೋನಾ…!

ಧಾರವಾಡ Prajakiran.com : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ‌ಮೊರಬ ಗ್ರಾಮ ಕರೊನಾ ಅಟ್ಟಹಾಸಕ್ಕೆ ತತ್ತರಿಸಿ ಹೋಗಿದೆ. ಪಿ-6222 ನಿಂದಾಗಿ ಒಂದೇ ದಿನ ಮೊರಬ ಗ್ರಾಮದ 23 ಜನರಿಗೆ ಸೋಂಕು ತಾಗಿದ್ದು,  ಒಟ್ಟು 25 ಜನರಿಗೆ ಸೊಂಕು ತಗುಲಿಸಿರೋ ಈತ ಈಗ ಸೂಪರ್ ಸ್ಪೈಡರ್ ಆಗಿದ್ದಾರೆ. ಆ ಮೂಲಕ ಮೊರಬ ಗ್ರಾಮವೊಂದರಲ್ಲೇ 27 ಜನ ಸೋಂಕಿತರಾಗಿದ್ದಾರೆ. ಈ ಪೈಕಿ 23 ಜನ ಸೊಂಕಿತರು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು,ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 155ಕ್ಕೆ ಏರಿದೆ. ಇದು ಧಾರವಾಡ ಜಿಲ್ಲೆಯ […]

ರಾಜ್ಯ

ಧಾರವಾಡದ ೪೬ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳ ಸುತ್ತ ೧೪೪ ಕಲಂ ನಿಷೇಧಾಜ್ಞೆ ಜಾರಿ

ಹುಬ್ಬಳ್ಳಿ-ಧಾರವಾಡ praajakiran.com :   ಜೂನ್ ೨೫  ರಿಂದ  ಜುಲೈ ೪ ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯ ಅವಧಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ಹಾಗೂ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಗಟ್ಟಲು ಹುಬ್ಬಳ್ಳಿ-ಧಾರವಾಡ ನಗರದ ೪೬ ಪರೀಕ್ಷಾ ಕೇಂದ್ರಗಳ ಸುತ್ತ ಸೆಕ್ಷನ್ ೧೪೪ ಕಲಂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.  ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ಮತ್ತು ಪರೀಕ್ಷೆಗಳನ್ನು ಶಾಂತಿಯುತ ಮತ್ತು ಸುಗಮವಾಗಿ ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸಿಆರ್‌ಪಿಸಿ ಕಲಂ ೧೪೪ ಹಾಗೂ ೨೦ ರ ಪ್ರಕಾರ ಹೆಚ್ಚುವರಿ […]

ರಾಜ್ಯ

ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ ೭ ದಿನ ಸಾಂಸ್ಥಿಕ ಕ್ವಾರಂಟೈನ್

ಧಾರವಾಡ prajakiran.com  : ಸರಕಾರದ ಹೊಸ ನಿಯಮದಂತೆ ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ ೭ ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು. ಅವರು ಸೋಮವಾರ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ಉಳಿದ ರಾಜ್ಯಗಳಿಂದ ಬರುವವರಿಗೆ ಹೊಮ್‌ಕ್ವಾರಂಟೈನ್ ಮಾಡಲಾಗುತ್ತಿದೆ. ರೋಗಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.   ಜಿಲ್ಲೆಯಲ್ಲಿ ಇಲ್ಲಿವರೆಗೆ ೨೧,೧೧೨ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ೧೨೧ ಕರೊನಾ ವೈರಸ್ ಪ್ರಕರಣಗಳು ಪತ್ತೆ ಆಗಿದ್ದು, ಇದರಲ್ಲಿ ೫೦ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು […]

ರಾಜ್ಯ

ಭಿಕ್ಷುಕಿಗೆ ಕರೊನಾ ಸೋಂಕು : ಕ್ವಾರಂಟೈನ ಮಾಡಿಸಿದ್ದ ಪೊಲೀಸರಿಗೆ ಢವಢವ

ಹುಬ್ಬಳ್ಳಿ Prajakiran.com : ಸರ್ಕಾರಿ ಕ್ವಾರಂಟೈನ ನಲ್ಲಿದ್ದ  75 ವರ್ಷದ ಭಿಕ್ಷುಕಿಗೆ ಕರೊನಾ ಸೋಂಕು ದೃಢ ಪಟ್ಟ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ‌ ಪೊಲೀಸ್ ಠಾಣೆಯ ಎಲ್ಲಾ ಪೊಲೀಸರಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ. ಬೆಂಡಿಗೇರಿ ಠಾಣೆಯ 40ಕ್ಕೂ ಹೆಚ್ಚು ಸಿಬ್ಬಂದಿಗೆ ಗಂಟಲು ದ್ರವ ತಪಾಸಣೆ ಮಾಡಲಾಗಿದೆ. ಜೂನ್ 12 ರಂದು ಭಿಕ್ಷುಕಿಗೆ ಸೋಂಕು ದೃಢ ಪಟ್ಟಿದೆ.  ಆಕೆಯನ್ನು ವಾಹನದಲ್ಲಿ ಕರೆ ತಂದು ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ ಮಾಡಿಸಿದ್ದ ಪೊಲೀಸರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. […]

ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತೆರಿಗೆ ಹೆಚ್ಚಳ ಖಂಡಿಸಿ ಪ್ರತಿಭಟನೆ

ಧಾರವಾಡ prajakiran.com : ಆರ್ಥಿಕ ಕುಸಿತ ಮತ್ತು ಕೋವಿಡ್ ಸಂಕಷ್ಟದ ನಡುವೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ   ಶುಕ್ರವಾರ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು. 30-ಜೂನ್-2020 ರ ವರೆಗೆ ಜಿಲ್ಲಾ ಆಡಳಿತ ಸಿ.ಆರ್.ಪಿ.ಸಿ. ಕಲಂ 144 ವಿಸ್ತರಿಸಿರುವುದರಿಂದ, ಕೋವಿಡ್ ಸಂಕಷ್ಟದ ದಿನಗಳಲ್ಲಿ ಸರ್ಕಾರದ ನಿಯಮ ಮತ್ತು ನಿರ್ಬಂಧಗಳಿಗೆ ಒಳಪಟ್ಟು ಮತ್ತು ಜನರ ಆರೋಗ್ಯದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಈ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರಕಾರ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಸ್ತಿ […]

ರಾಜ್ಯ

ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜಾಮೀನು : ಚಾರ್ಜ್ ಶೀಟ್ ಸಲ್ಲಿಸದ ಪೊಲೀಸರ ವಿರುದ್ದ ತನಿಖೆಗೆ ಆದೇಶ

ಬೆಳಗಾವಿ prajakiran.com : ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ  ಜಾಮೀನು ಮಂಜೂರು ಆಗಲು ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಗೊತ್ತಾಗಿದೆ. ಧಾರವಾಡ ಜಿಲ್ಲಾ ಪೊಲೀಸರು 90ದಿನದೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸದೆ ಇರುವುದು ಆರೋಪಿಗಳಿಗೆ ಜಾಮೀನು ಪಡೆಯಲು ಅನುಕೂಲವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾಧಿಕಾರಿ ಜಾಕ್ಸನ್ ಡಿಸೋಜಾ ಅವರು ಸಿ ಆರ್ ಪಿಸಿ 167 (2) ಅಡಿ 90 ದಿನಗಳ ಒಳಗೆ […]

ಅಂತಾರಾಷ್ಟ್ರೀಯ

ಪಾಕಿಸ್ತಾನ ಜಿಂದಾಬಾದ್ ಎಂದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಷರತ್ತು ಬದ್ದ ಜಾಮೀನು

ಹುಬ್ಬಳ್ಳಿ prajakiran.com  : ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕೊನೆಗೂ  ಷರತ್ತು ಬದ್ದ ಜಾಮೀನು ಮಂಜೂರು ಆಗಿದೆ. ಹುಬ್ಬಳ್ಳಿಯ 2ನೇ ಜೆಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಇವರು ಜಿಲ್ಲೆಯನ್ನು ಬಿಟ್ಟು ಹೋಗಬಾರದು. ಸಾಕ್ಷ್ಯವನ್ನು ನಾಶಪಡಿಸಬಾರದು ಎಂಬುದು ಸೇರಿದಂತೆ ಹಲವು ಷರತ್ತು ವಿಧಿಸಲಾಗಿದೆ. ಹುಬ್ಬಳ್ಳಿಯ ಕೆ ಎಲ್ ಇ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿರುವ ವಿದ್ಯಾರ್ಥಿಗಳಾದ ಜಮ್ಮು ಕಾಶ್ಮೀರದ ಬಾಸಿತ್ ಸೋಫಿ (19),ಅಮೀರ […]

ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಈವರೆಗೆ 44 ಜನ ಕೋವಿಡ್ ನಿಂದ ಗುಣಮುಖ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದು ಸಮಾಧಾನದ ಸಂಗತಿಯಾಗಿದೆ. ಹುಬ್ಬಳ್ಳಿಯ ಕಿಮ್ಸ್ ನಿಂದ ಮಂಗಳವಾರ   ಐವರನ್ನ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ. ಗುಣಮುಖರಾದವರನ್ನು ಪಿ- 2181 ( 33 ವರ್ಷದ ಪುರುಷ) ,  ಪಿ-3397 ( 47 ವರ್ಷದ ಪುರುಷ) , ಪಿ-3398 ( 25 ವರ್ಷದ ಪುರುಷ) , ಪಿ- 3436 ( 48 ವರ್ಷದ ಪುರುಷ) ಹಾಗೂ ಪಿ-3437 […]

ರಾಜ್ಯ

ಬಿಆರ್‌ಟಿಎಸ್ ವೈಫಲ್ಯ : ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ ವಿರುದ್ದ ಆಕ್ರೋಶ

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಜಾರಿಗೆ ತಂದಿರುವ ಬಿಆರ್‌ಟಿಎಸ್ ಯೋಜನೆ, ನೆನೆಗುದಿಗೆ ಬಿದ್ದ ಬೈ ಪಾಸ್ ನಿರ್ಮಾಣ, ಗುಜರಾತ್ ನವರಿಗೆ ಯುಜಿಡಿ ಕಾಮಗಾರಿ ಹೀಗೆ ಅನೇಕ ಯೋಜನೆಗಳು ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳಿಗೆ ಕಿಕ್ ಬ್ಯಾಕ್ ನೀಡುವ ಯೋಜನೆಗಳಾಗಿವೆ ಹೊರತು ಜನರಿಗೆ ಉಪಯೋಗವಾಗಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆರೋಪಿಸಿದರು. ಅವರು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 600 ಕೋಟಿ ರೂ. ವೆಚ್ಚದಲ್ಲಿದ್ದ ಈ ಯೋಜನೆ ಸಿದ್ಧವಾಗಿದ್ದು, ಅದು 1200 ಕೋಟಿ […]