ಹುಬ್ಬಳ್ಳಿ Prajakiran.com : ಸರ್ಕಾರಿ ಕ್ವಾರಂಟೈನ ನಲ್ಲಿದ್ದ 75 ವರ್ಷದ ಭಿಕ್ಷುಕಿಗೆ ಕರೊನಾ ಸೋಂಕು ದೃಢ ಪಟ್ಟ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಎಲ್ಲಾ ಪೊಲೀಸರಿಗೆ ಕೋವಿಡ್ ತಪಾಸಣೆ ಮಾಡಲಾಗಿದೆ.
ಬೆಂಡಿಗೇರಿ ಠಾಣೆಯ 40ಕ್ಕೂ ಹೆಚ್ಚು ಸಿಬ್ಬಂದಿಗೆ ಗಂಟಲು ದ್ರವ ತಪಾಸಣೆ ಮಾಡಲಾಗಿದೆ. ಜೂನ್ 12 ರಂದು ಭಿಕ್ಷುಕಿಗೆ ಸೋಂಕು ದೃಢ ಪಟ್ಟಿದೆ.
ಆಕೆಯನ್ನು ವಾಹನದಲ್ಲಿ ಕರೆ ತಂದು ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ ಮಾಡಿಸಿದ್ದ ಪೊಲೀಸರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಿಕ್ಷುಕಿಯನ್ನ ಕ್ವಾರಂಟೈನ ಮಾಡಿಸಿದ್ದ ಪೊಲೀಸರಿಗೆ ಢವಢವ ಶುರುವಾಗಿದೆ. ಜೊತೆಗೆ ಠಾಣೆಯ ಇತರ ಸಿಬ್ಬಂದಿಗಳಿಗೆ ಮತ್ತಷ್ಟು ಆತಂಕ ಶುರುವಾಗಿದೆ.
ಅವರ ವರದಿ ನೆಗೆಟಿವ್ ಬರುತ್ತಾ ಇಲ್ಲವೇ ಪಾಸಿಟಿವ್ ಬರುತ್ತಾ ಎಂಬುದು ಕಾದು ನೋಡಬೇಕು.