ರಾಜ್ಯ

ಮಗಳಿಂದ ತಂದೆಗೆ, ತಂದೆಯಿಂದ ಧಾರವಾಡದ ಮೊರಬ ಊರಿಗೆ ಹರಡಿದ ಮಹಾಮಾರಿ ಕರೋನಾ…!

ಧಾರವಾಡ Prajakiran.com : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ‌ಮೊರಬ ಗ್ರಾಮ ಕರೊನಾ ಅಟ್ಟಹಾಸಕ್ಕೆ ತತ್ತರಿಸಿ ಹೋಗಿದೆ.

ಪಿ-6222 ನಿಂದಾಗಿ ಒಂದೇ ದಿನ ಮೊರಬ ಗ್ರಾಮದ 23 ಜನರಿಗೆ ಸೋಂಕು ತಾಗಿದ್ದು,  ಒಟ್ಟು 25 ಜನರಿಗೆ ಸೊಂಕು ತಗುಲಿಸಿರೋ ಈತ ಈಗ ಸೂಪರ್ ಸ್ಪೈಡರ್ ಆಗಿದ್ದಾರೆ. ಆ ಮೂಲಕ ಮೊರಬ ಗ್ರಾಮವೊಂದರಲ್ಲೇ 27 ಜನ ಸೋಂಕಿತರಾಗಿದ್ದಾರೆ.

ಈ ಪೈಕಿ 23 ಜನ ಸೊಂಕಿತರು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು,ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 155ಕ್ಕೆ ಏರಿದೆ.

ಇದು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದ  ದುರದೃಷ್ವವೇ ಎಂದರೆ ತಪ್ಪಾಗಲಾರದು. ಏಕೆಂದರೆ ಆಸ್ಪತ್ರೆ ಸೇರಿದ ಮರು ದಿನವೇ ಈತನ ಸಂಪರ್ಕಕ್ಕೆ ಬಂದಿದ್ದ 65 ವರ್ಷದ ವೃದ್ಧ ಪಿ 7060 ಮೃತ ಪಟ್ಟಿದ್ದಾನೆ.

ಅಚ್ಚರಿಯ ಸಂಗತಿಯೆಂದರೆ ಪಿ 6222 ಎಲ್ಲಿಯೂ ಹೋಗಿರಲಿಲ್ಲ. ದೆಹಲಿಯಿಂದ ಆಗಮಿಸಿದ್ದ ಮಗಳು ಪಿ 6522 ಆಗಮಿಸಿದ್ದರೂ ಮೊದಲು ಈಕೆಗೆ ಸೋಂಕು ದೃಢವಾಗಿರಲಿಲ್ಲ. ಮೊದಲು ತಂದೆಯಲ್ಲಿಯೇ ಸೋಂಕು ಕಂಡಿತ್ತು.



ಆ ಬಳಿಕ ಮಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ಇವಳಲ್ಲಿಯೂ ಸೊಂಕು ಕಂಡಿತ್ತು. ಆರಂಭದಲ್ಲಿ ಪಿ 6222 ದಿಂದ ಪತ್ನಿ ಮತ್ತು ಮಗನಿಗೆ ಮಾತ್ರ ಸೊಂಕು ಕಂಡು ಬಂದಿತ್ತು.

ಆದರೆ ಇವತ್ತು ಇಡೀ ಮೊರಬ ಗ್ರಾಮವೇ ತಲ್ಲಣಿಸುವಂತೆ 23 ಜನರಿಗೆ ಸೊಂಕು ದೃಢ ಪಟ್ಟಿದೆ. ಮಗಳು ಮನೆಗೆ ಬಂದ ಬಳಿಕ ಈತ ಎಂದಿನಂತೆ ಮೂರು ದಿನಗಳ ಕಾಲ ಊರಲ್ಲಿ ಓಡಾಡಿದ್ದನಂತೆ. 

ಅದೇ ಕಾರಣಕ್ಕೆ ಈಗ ಇಷ್ಟು ಜನರಿಗೆ ಸೊಂಕು ತಗುಲಿದೆ.‌ ಇನ್ನು 12 ಜನ 50 ವರ್ಷ ಮೇಲ್ಪಟ್ಟ ವೃದ್ಧರೇ ಇರೋದು ಇನ್ನೂ  ಆಘಾತಕಾರಿ ಸಂಗತಿಯಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಕರೊನಾ ಮಹಾ ಸ್ಫೋಟವಾಗುತ್ತಿದ್ದು, ನಿನ್ನೇ ಒಂದೇ ದಿನ 34 ಜನರಲ್ಲಿ ಸೊಂಕು ಧೃಡ ಪಟ್ಟಿದೆ. ಇವತ್ತು ಎಷ್ಟು ಜನರಿಗೆ ವಕ್ಕರಿಸುತ್ತದೆಯೋ ಎಂಬ ಆತಂಕ ಮನೆ ಮಾಡಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *