follow/like: facebook.com/prajakirannews
ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಮತ್ತೆ ಹೊಸದಾಗಿ 3 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.
ಡಿಡಬ್ಲ್ಯೂಡಿ 176-ಪಿ-7946ನ ಸೋಂಕಿತ 56 ವರ್ಷದ ಪುರುಷ ನಿಗೆ ಕರೋನಾ ಸೋಂಕು ಹೇಗೆ ಬಂತು ಎಂಬುದು ತಿಳಿದಿಲ್ಲ. ಹೀಗಾಗಿ ಆತನ ಕರೋನಾ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಡಿಡಬ್ಲ್ಯೂಡಿ 177-ಪಿ-7947ನ ಸೋಂಕಿತ 51 ವರ್ಷದ ಪುರುಷನಿಗೆ ಕೂಡ ಕರೋನಾ ವೈರಸ್ ವಕ್ಕರಿಸಿದೆ. ಆದರೆ ಈತನಿಗೆ ಕರೋನಾ ಸೋಂಕು ಹೇಗೆ ತಗುಲಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಆತನ ಕರೋನಾ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
ಡಿಡಬ್ಲ್ಯೂಡಿ 178-ಪಿ-7948 ಸೋಂಕಿತ 55 ವರ್ಷದ ಮಹಿಳೆ ಕರೋನಾ ಸೋಂಕು ಹರಡಿದೆ. ಇವರಿಗೆ ಪಿ-7041 ಹಾಗೂ 7038 ಸೋಂಕಿತರ ಸಂಪರ್ಕದಿಂದ ಹರಡಿದೆ ಎಂದು ವಿವರಿಸಿದೆ.
ಶುಕ್ರವಾರ ಕರೋನಾದಿಂದ ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪಿ-2710 ಹಾಗೂ ಪಿ-4532 ಸೋಂಕಿತರು ಚೇತರಿಕೆ ಕಂಡಿದ್ದು ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಈವರೆಗೆ ಧಾರವಾಡ ಜಿಲ್ಲೆಯ ಮೂವರು ಕರೋನಾ ಸೋಂಕಿತರು ಸಾವನ್ನಪ್ಪಿದ್ದು, ಇನ್ನೂ ಐದು ಸೋಂಕಿತರು ಐಸಿಯುನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 178 ಕ್ಕೆ ಏರಿಕೆಯಾಗಿದೆ. ಈ ಪೈಕಿ ಈಗಾಗಲೇ 56 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.