ಅಂತಾರಾಷ್ಟ್ರೀಯ

ಪಾಕಿಸ್ತಾನ ಜಿಂದಾಬಾದ್ ಎಂದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಷರತ್ತು ಬದ್ದ ಜಾಮೀನು

ಹುಬ್ಬಳ್ಳಿ prajakiran.com  : ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳಿಗೆ ಕೊನೆಗೂ  ಷರತ್ತು ಬದ್ದ ಜಾಮೀನು ಮಂಜೂರು ಆಗಿದೆ. ಹುಬ್ಬಳ್ಳಿಯ 2ನೇ ಜೆಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ. ಇವರು ಜಿಲ್ಲೆಯನ್ನು ಬಿಟ್ಟು ಹೋಗಬಾರದು. ಸಾಕ್ಷ್ಯವನ್ನು ನಾಶಪಡಿಸಬಾರದು ಎಂಬುದು ಸೇರಿದಂತೆ ಹಲವು ಷರತ್ತು ವಿಧಿಸಲಾಗಿದೆ. ಹುಬ್ಬಳ್ಳಿಯ ಕೆ ಎಲ್ ಇ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿರುವ ವಿದ್ಯಾರ್ಥಿಗಳಾದ ಜಮ್ಮು ಕಾಶ್ಮೀರದ ಬಾಸಿತ್ ಸೋಫಿ (19),ಅಮೀರ […]

ಅಂತಾರಾಷ್ಟ್ರೀಯ

ದುಬೈಯಿಂದ ಗರ್ಭಿಣಿ ಪತ್ನಿಯನ್ನು ಊರಿಗೆ ಕಳುಹಿಸಿದ ಪತಿ ಹೃದಯಾಘಾತದಿಂದ ಸಾವು

ತಿರುವನಂತಪುರ (ಕೇರಳ) prajakiran.com : ದುಬೈಯಿಂದ ತನ್ನ ಗರ್ಭಿಣಿ ಪತ್ನಿಯನ್ನು ಊರಿಗೆ ಕಳುಹಿಸಲು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದ  ನಿಧಿನ್ ಚಂದ್ರನ್ ಎಂಬ ಯುವಕ ಮತ್ತೆಂದೂ ಬಾರದ ಊರಿಗೆ ಪ್ರಯಾಣಿಸಿದ್ದಾನೆ. ಭಾರತದಲ್ಲಿ ಕರೋನಾ ವ್ಯಾಪಿಸಲು ತೊಡಗಿದಾಗ ಹೊರದೇಶಗಳಿಂದ ದೇಶಕ್ಕೆ ಬರುವ ವಿಮಾನ ಸಂಚಾರ ನಿಷೇಧಗೊಂಡ ಸಂದರ್ಭದಲ್ಲಿ ದುಬೈಯಲ್ಲಿದ್ದ ಏಳು ತಿಂಗಳ ಗರ್ಭಿಣಿ ಮಡದಿ ಆದಿರಾಳಿಗೆ ಊರಿಗೆ ಹೋಗಲು ವ್ಯವಸ್ಥೆ ಮಾಡಬೇಕೆದು ಆಕೆಯ ಮೂಲಕವೇ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು ಇದೇ ಕೇರಳದ ಪೆರಾಂಬ್ರ ಎಂಬ ಹಳ್ಳಿಯ 28 ವರ್ಷದ  ಯುವಕ ನಿಧಿನ್ […]

ಅಂತಾರಾಷ್ಟ್ರೀಯ

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕರೋನಾ ದೃಢ

ಕರಾಚಿ (ಪಾಕಿಸ್ತಾನ) prajakiran.com : ಭಾರತದ ಮೋಸ್ಟ್ ವಾಟೆಂಡ್ ಪಟ್ಟಿಯಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕರೋನಾ ದೃಢವಾಗಿದೆ. ಕರೋನಾ ಸೋಂಕು ತಗುಲಿರುವ ಶಂಕೆಯ ಹಿನ್ನಲೆಯಲ್ಲಿ ಕೋವಿಡ್ -19 ಗಂಟಲು ದ್ರವ ತಪಾಸಣೆ ವೇಳೆ ಈ ಮಾರಕ ಕರೋನಾ ವೈರಸ್ ಹರಡಿರುವುದು ಖಚಿತವಾಗಿದೆ. ಇದೇ ವೇಳೆ ಆತನ ಪತ್ನಿಗೂ ಕರೋನಾ ಮಹಾಮಾರಿ ತಗುಲಿರುವುದು ಗೊತ್ತಾಗಿದೆ. ಇದರಿಂದಾಗಿ ಆತನ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕ್ವಾರಂಟೀನ್ ಮಾಡಲಾಗಿದೆ. ಸದ್ಯ ಭೂಗತ ಪಾತಕಿ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ.  ಪಾಕಿಸ್ತಾನದಲ್ಲಿ ಈವರೆಗೆ 89 249 […]

ಅಂತಾರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ 2561 ಜನ ಪೊಲೀಸರಿಗೆ ಸೋಂಕು, ಈವರೆಗೆ 31 ಸಾವು

ಮುಂಬೈ prajakiran.com : ಮಹಾರಾಷ್ಟ್ರದಲ್ಲಿ ಈವರೆಗೆ 2561 ಜನ ಪೊಲೀಸರಿಗೆ ಮಹಾಮಾರಿ ಕರೋನಾ ಸೋಂಕು ವಕ್ಕರಿಸಿದ್ದು, ಇದರಿಂದಾಗಿಯೇ ಈವರೆಗೆ 31 ಜನ ಪೊಲೀಸರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ನಾಲ್ವರಿಗೆ ಕರೋನಾ ಸೋಂಕು ಹರಡಿದ್ದು, ಪೊಲೀಸ್ ಇಲಾಖೆಯನ್ನು ಬೆಚ್ಚಿಬಿಳಿಸಿದೆ. ದೇಶದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ ಒಟ್ಟು ಸಂಖ್ಯೆ 6348ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರವೊಂದರಲ್ಲಿಯೇ 2710 ಜನ ಸಾವನ್ನಪ್ಪಿದ್ದು, ನಿನ್ನೇ ಒಂದೇ ದಿನ 123 ಜನ ಮಹಾರಾಷ್ಟ್ರ ರಾಜ್ಯದಲ್ಲಿಯೇ ಮೃತಪಟ್ಟಿದ್ದಾರೆ. ಆ ಮೂಲಕ ಮಹಾರಾಷ್ಟ್ರದ ಒಟ್ಟು ಸೋಂಕಿತರ ಸಂಖ್ಯೆ 77,793ಕ್ಕೆ […]

ಅಂತಾರಾಷ್ಟ್ರೀಯ

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಗೆ ಟಿಕೇಟ್

ನವದೆಹಲಿ prajakiran.com : ರಾಜ್ಯದಿಂದ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಗೆ ಟಿಕೇಟ್ ನೀಡಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ. ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ ಮಾಡಲು ಕಾಂಗ್ರೆಸ್ ಟಿಕೇಟ್ ನೀಡಲಾಗಿದೆ.   ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಲೋಕಸಭೆಯ ಸಂಸದೀಯ ನಾಯಕರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ […]

ಅಂತಾರಾಷ್ಟ್ರೀಯ

ದೇಶದಲ್ಲಿ ಒಂದೇ ದಿನದಲ್ಲಿ 9851 ಸೋಂಕಿತರು ಪತ್ತೆ, 273 ಸಾವು

ನವದೆಹಲಿ prajakiran.com :  ದೇಶದಲ್ಲಿ ಮಹಾಮಾರಿ ಕರೋನಾ ರಣಕೇಕೆ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ  ಒಂದೇ ದಿನದಲ್ಲಿ 9851 ಸೋಂಕಿತರು ಪತ್ತೆಯಾಗಿದ್ದು, 273 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಒಂದು ಸಮಾಧಾನದ ಸಂಗತಿ ಒಂದೇ ದಿನದಲ್ಲಿ 5355 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಆ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ  2,26,770ಕ್ಕೆ ಏರಿಕೆಯಾಗಿದೆ. ಈ ಪೈಕಿ 1,09,462 ಜನ ಈವರೆಗೆ ಗುಣಮುಖರಾಗಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ.ದೇಶದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 6348ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರವೊಂದರಲ್ಲಿಯೇ 2710 ಜನ ಸಾವನ್ನಪ್ಪಿದ್ದು, ನಿನ್ನೇ ಒಂದೇ […]

ಅಂತಾರಾಷ್ಟ್ರೀಯ

ಚೀನಾ ಆಪ್ ಗಳಿಗೆ ಸೆಡ್ಡು ಹೊಡೆದ ಜಿಯೋ ಬ್ರೋಸರ್

ಬೆಂಗಳೂರು prajakiran.com : ದೇಶದ್ಯಾಂತ ಚೀನಿ ಆಪ್ ಗಳನ್ನು ಬಹಿಷ್ಕರಿಸುವ ಅಭಿಯಾನ ಜೋರಾಗಿ ಸಾಗಿರುವ ಬೆನ್ನ ಹಿಂದೆಯೇ ಜಿಯೋ ಬ್ರೋಸರ್ ಭಾರಿ ಸದ್ದು ಮಾಡುತ್ತಿದೆ. ಚೀನಾ ಆಪ್ ಗಳಿಗೆ ಪರ್ಯಾಯವಾಗಿ ದೇಶದಲ್ಲಿ ಬಹಳಷ್ಟು ಆಪ್ ಗಳಿವೆ ಎಂಬುದನ್ನು ಜಿಯೋ ಸಾಬೀತು ಪಡಿಸಿದೆ.   https://play.google.com/store/apps/details?id=com.jio.web ಅದರಲ್ಲಿ ಜಿಯೋ ಕಂಪನಿಯ ಅನೇಕ ಉತ್ಪನ್ನಗಳಿದ್ದು, ಅವುಗಳ ಸಾಲಿಗೆ ದೊಡ್ಡ ಪಟ್ಟಿಯೇ ಇದೆ. ಇತ್ತೀಚಿನ ದಿನಗಳಲ್ಲಿ ಜಿಯೋ ಉತ್ಪನ್ನಗಳು ಭಾರೀ ಜನಪ್ರಿಯತೆ ಗಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಜಿಯೋ ಬ್ರೋಸರ್ ಈಗಾಗಲೇ 1 […]

ಅಂತಾರಾಷ್ಟ್ರೀಯ

ನಿಸರ್ಗ ಚಂಡಮಾರುತ ಎಫೆಕ್ಟ್  : ಮಹಾರಾಷ್ಟ್ರದಲ್ಲಿ ಒಂದು ಬಲಿ

ನವದೆಹಲಿ prajakiran.com : ನಿಸರ್ಗ ಚಂಡಮಾರುತಕ್ಕೆ ಗುಜರಾತ್, ಮಹಾರಾಷ್ಟ್ರ ನಲುಗಿ ಹೋಗಿದ್ದು, ಹತ್ತು ಹಲವು ಮನೆಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದ್ದು, ಮಹಾರಾಷ್ಟ್ರದಲ್ಲಿ ಒಬ್ಬ ಬಲಿಯಾಗಿದ್ದಾನೆ. ಉತ್ತರಕರ್ನಾಟಕ ಭಾಗಕ್ಕೆ ಇದರ ಸ್ಪರ್ಶವಾಗಿದ್ದು, ಉತ್ತರಕನ್ನಡ, ಬೆಳಗಾವಿ ಹಾಗೂ   ಧಾರವಾಡ ಜಿಲ್ಲೆಯಲ್ಲೂ ಹಾದು ಹೋಗಿದೆ. ವಾಯು ಭಾರ ಕುಸಿತದಿಂದ ಬೆಳಗ್ಗೆಯಿಂದಲೇ ಎರಡು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಳಿಸಿದೆ. ಆದರೆ ಈ ವರ್ಷದ ಮೋದಲ ಪ್ರಕೃತಿ ವಿಕೋಪದಿಂದ ಉತ್ತರ ಕರ್ನಾಟಕ ತಪ್ಪಿಸಿಕೊಂಡಿದೆ ಎಂದು ಹವಾಮಾನ ತಜ್ಞ ಆರ್ […]

ಅಂತಾರಾಷ್ಟ್ರೀಯ

ಪ್ರಧಾನಿ ಮೋದಿ ಗುಣಗಾನ ಮಾಡಿದ ಸಿಎಂ ಬಿಎಸ್ ವೈ 

ಬೆಂಗಳೂರು prajakiran.com : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿನ ಭ್ರಷ್ಟಾಚಾರ ಹಾಗೂ ದುರಾಡಳಿತಕ್ಕೆ ಮುಕ್ತಿ ಹಾಕಲು ಅನೇಕ ಕಾರ್ಯಕ್ರಮ ನೀಡಿದ್ದಾರೆ.  ಜಾಗತೀಕ ಮಟ್ಟದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ದೇಶದ ಏಕತೆಗಾಗಿ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ 370 ರದ್ದು, ಒಂದು ದೇಶ ಒಂದು ರೇಶನ್ ಕಾರ್ಡ್, ರಾಮಮಂದಿರ ತೀರ್ಪು, ತ್ರಿವಳಿ ತಲಾಖ್ ರದ್ದು ಸೇರಿ ಮಹತ್ತರ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಅವರು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೋದಿಯವರು ಎರಡನೇ ಅವಧಿಯ ಮೊದಲ ಒಂದು […]

ಅಂತಾರಾಷ್ಟ್ರೀಯ

ರಾಜ್ಯದಲ್ಲಿ ಒಂದೇ ದಿನ 3 ಸಾವು : ದೇಶದಲ್ಲಿ 170 ಜನರ ಬಲಿ

 ನವದೆಹಲಿ prajakiran.com : ರಾಜ್ಯದಲ್ಲಿ ಕರೋನಾ ಮರಣ ಮೃದಂಗ ಮುಂದುವರೆದಿದ್ದು, ಕಳೆದ 24 ಗಂಟೆಗಳಅವಧಿಯಲ್ಲಿ ಮೂರು ಜನ ಸಾವನ್ನಪ್ಪಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ರಾಯಚೂರಿನ 69 ವರ್ಷದ ಮಹಿಳೆ ಕರೋನಾ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಅದೇ ರೀತಿ ಬೀದರನ 49 ವರ್ಷದ ಪುರುಷ ಕೂಡ ಸಾವನ್ನಪ್ಪಿದ್ದಾರೆ. ಇನ್ನು ಗುಮ್ಮಟನಗರಿ ವಿಜಯಪುರದಲ್ಲಿ ಸಾವು ಸಂಭವಿಸಿದ್ದು, ಅಲ್ಲಿ 82 ವರ್ಷದ ವೃದ್ದ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾನೆ. ದೇಶದಲ್ಲಿ ಕೂಡ ಕರೋನಾದಿಂದ ಬಳಲಿ ಬೆಂಡಾಗಿ […]