ಅಂತಾರಾಷ್ಟ್ರೀಯ

ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕರೋನಾ ದೃಢ

ಕರಾಚಿ (ಪಾಕಿಸ್ತಾನ) prajakiran.com : ಭಾರತದ ಮೋಸ್ಟ್ ವಾಟೆಂಡ್ ಪಟ್ಟಿಯಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೂ ಕರೋನಾ ದೃಢವಾಗಿದೆ.

ಕರೋನಾ ಸೋಂಕು ತಗುಲಿರುವ ಶಂಕೆಯ ಹಿನ್ನಲೆಯಲ್ಲಿ ಕೋವಿಡ್ -19 ಗಂಟಲು ದ್ರವ ತಪಾಸಣೆ ವೇಳೆ ಈ ಮಾರಕ ಕರೋನಾ ವೈರಸ್ ಹರಡಿರುವುದು ಖಚಿತವಾಗಿದೆ.




ಇದೇ ವೇಳೆ ಆತನ ಪತ್ನಿಗೂ ಕರೋನಾ ಮಹಾಮಾರಿ ತಗುಲಿರುವುದು ಗೊತ್ತಾಗಿದೆ. ಇದರಿಂದಾಗಿ ಆತನ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕ್ವಾರಂಟೀನ್ ಮಾಡಲಾಗಿದೆ.

ಸದ್ಯ ಭೂಗತ ಪಾತಕಿ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ.  ಪಾಕಿಸ್ತಾನದಲ್ಲಿ ಈವರೆಗೆ 89 249 ಕರೋನಾ ಕೇಸ್ ಗಳು ಖಚಿತಗೊಂಡಿದ್ದು, ಒಂದೇ ದಿನ 3985 ಜನರಿಗೆ ಸೋಂಕು ತಗುಲಿದ್ದು, ಒಟ್ಟು  1838 ಜನ ಕರೋನಾ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಸದ್ಯದ ಸ್ಥೀತಿ ಗತಿ ಪ್ರಕಾರ ಪಾಕಿಸ್ತಾನ ಕರೋನಾದಲ್ಲಿ ಚೀನಾವನ್ನು ಹಿಂದಿಕ್ಕಿ ಮುಂದಕ್ಕೆ ಸಾಗುತ್ತಿದೆ. ಈವರೆಗೆ ಚೀನಾದಲ್ಲಿ 84614 ಜನರಿಗೆ ಸೋಂಕು ಹರಡಿದ್ದು, 4645 ಜನ ಸಾವನ್ನಪ್ಪಿದ್ದಾರೆ. ಭಾರತ ಕೂಡ ಚೀನಾವನ್ನು ಮೀರಿಸಿರುವುದು ಇಲ್ಲಿ ಸ್ಮರಿಸಬಹುದು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *