ಅಂತಾರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ 2561 ಜನ ಪೊಲೀಸರಿಗೆ ಸೋಂಕು, ಈವರೆಗೆ 31 ಸಾವು

ಮುಂಬೈ prajakiran.com : ಮಹಾರಾಷ್ಟ್ರದಲ್ಲಿ ಈವರೆಗೆ 2561 ಜನ ಪೊಲೀಸರಿಗೆ ಮಹಾಮಾರಿ ಕರೋನಾ ಸೋಂಕು ವಕ್ಕರಿಸಿದ್ದು, ಇದರಿಂದಾಗಿಯೇ ಈವರೆಗೆ 31 ಜನ ಪೊಲೀಸರು ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ ನಾಲ್ವರಿಗೆ ಕರೋನಾ ಸೋಂಕು ಹರಡಿದ್ದು, ಪೊಲೀಸ್ ಇಲಾಖೆಯನ್ನು ಬೆಚ್ಚಿಬಿಳಿಸಿದೆ.

ದೇಶದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ ಒಟ್ಟು ಸಂಖ್ಯೆ 6348ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರವೊಂದರಲ್ಲಿಯೇ 2710 ಜನ ಸಾವನ್ನಪ್ಪಿದ್ದು, ನಿನ್ನೇ ಒಂದೇ ದಿನ 123 ಜನ ಮಹಾರಾಷ್ಟ್ರ ರಾಜ್ಯದಲ್ಲಿಯೇ ಮೃತಪಟ್ಟಿದ್ದಾರೆ.

ಆ ಮೂಲಕ ಮಹಾರಾಷ್ಟ್ರದ ಒಟ್ಟು ಸೋಂಕಿತರ ಸಂಖ್ಯೆ 77,793ಕ್ಕೆ ಬಂದು ನಿಂತಿದ್ದು, ನಿನ್ನೇ ಒಂದೇ ದಿನ 2933 ಜನರಿಗೆ ಸೋಂಕು ಆವರಿಸಿದೆ.

ಇದರಲ್ಲಿ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಕೂಡ ಅಧಿಕ ಸಂಖ್ಯೆಯಲ್ಲಿ ಇರುವುದು ಜನರ ನೆಮ್ಮದಿ ಕೆಡಿಸಿದೆ.



ಇನ್ನೂ ಕರ್ನಾಟಕದಲ್ಲಿ ಕೂಡ ಪೊಲೀಸರಿಗೆ ಕರೋನಾ ಸೋಂಕು ಕಾಡುತ್ತಲೇ ಇದೆ. ಯಾದಗಿರಿ ಜಿಲ್ಲೆಯ ಶಹಪುರ ಪೊಲೀಸ್ ಠಾಣೆ ಸಿಬ್ಬಂದಿ 29 ವರ್ಷದ ಕಾನ್ಸಟೇಬಲ್ ಕೋವಿಡ್ ದೃಢಪಟ್ಟಿದೆ. ಆತನನ್ನು ಕೋಳ್ಳೂರು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಈ ಹಿನ್ನಲೆಯಲ್ಲಿ ಶಹಾಪುರ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಪೊಲೀಸ್ ಜೊತೆ ಸಂಪರ್ಕ ಹೊಂದಿದ್ದ ಸಿಬ್ಬಂದಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇದರಿಂದಾಗಿ ಶಹಾಪುರ ಪೊಲೀಸರು ಆತಂಕಗೊಂಡಿದ್ದಾರೆ.

ರಾಜ್ಯದಲ್ಲಿ ಕೂಡ ಹತ್ತಾರು ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ನೂರಾರು ಜನ ಈವರೆಗೆ ಕರೋನಾ ಸೋಂಕಿನ ಭೀತಿಯಿಂದ ಹೋಮ್ ಕ್ವಾರಂಟೈನ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *