ಅಂತಾರಾಷ್ಟ್ರೀಯ

ದೇಶದಲ್ಲಿ ಒಂದೇ ದಿನದಲ್ಲಿ 9851 ಸೋಂಕಿತರು ಪತ್ತೆ, 273 ಸಾವು

ನವದೆಹಲಿ prajakiran.com :  ದೇಶದಲ್ಲಿ ಮಹಾಮಾರಿ ಕರೋನಾ ರಣಕೇಕೆ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ  ಒಂದೇ ದಿನದಲ್ಲಿ 9851 ಸೋಂಕಿತರು ಪತ್ತೆಯಾಗಿದ್ದು, 273 ಜನ ಸಾವನ್ನಪ್ಪಿದ್ದಾರೆ.

ಇದರಲ್ಲಿ ಒಂದು ಸಮಾಧಾನದ ಸಂಗತಿ ಒಂದೇ ದಿನದಲ್ಲಿ 5355 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಆ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ  2,26,770ಕ್ಕೆ ಏರಿಕೆಯಾಗಿದೆ.

ಈ ಪೈಕಿ 1,09,462 ಜನ ಈವರೆಗೆ ಗುಣಮುಖರಾಗಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ.ದೇಶದಲ್ಲಿ ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 6348ಕ್ಕೆ ಏರಿಕೆಯಾಗಿದೆ.



ಮಹಾರಾಷ್ಟ್ರವೊಂದರಲ್ಲಿಯೇ 2710 ಜನ ಸಾವನ್ನಪ್ಪಿದ್ದು, ನಿನ್ನೇ ಒಂದೇ ದಿನ 123 ಜನ ಮೃತಪಟ್ಟಿದ್ದಾರೆ.

ಆ ಮೂಲಕ ಸೋಂಕಿತರ ಸಂಖ್ಯೆ 77,793ಕ್ಕೆ ಬಂದು ನಿಂತಿದ್ದು, ನಿನ್ನೇ ಒಂದೇ ದಿನ 2933 ಜನರಿಗೆ ಸೋಂಕು ಆವರಿಸಿದೆ.

ಎರಡನೇ ಸ್ಥಾನದಲ್ಲಿ ತಮಿಳುನಾಡು ಇದ್ದು, ಸೋಂಕಿತರ ಸಂಖ್ಯೆ 27,256 ಕ್ಕೆ ಎರಿದ್ದು, 220 ಜನ ಸಾವನ್ನಪ್ಪಿದ್ದಾರೆ.

ಮೂರನೇ ಸ್ಥಾನದಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯಿದ್ದು,  ಅಲ್ಲಿ ಈವರೆಗೆ 25004 ಜನರಿಗೆ ಕರೋನಾ ತಗುಲಿದ್ದು, 650 ಜನ ಸಾವನ್ನಪ್ಪಿದ್ದಾರೆ.

ಇನ್ನೂ  ನಾಲ್ಕನೇ ಸ್ಥಾನದಲ್ಲಿ ಗುಜರಾತ್ ಇದ್ದು, ಈವರೆಗೆ 1155 ಜನ ಸಾವನ್ನಪ್ಪಿದ್ದು, 18,584 ಜನರಿಗೆ ಸೋಂಕು ವಕ್ಕರಿಸಿದೆ.

ಅದೇ ರೀತಿ ಐದನೇ ಸ್ಥಾನದಲ್ಲಿ ರಾಜಸ್ಥಾನವಿದ್ದು, 9862 ಸೋಂಕಿತರಿದ್ದು, 213 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.



ಆನಂತರದ ಸ್ಥಾನದಲ್ಲಿ ಉತ್ತರಪ್ರದೇಶ ವಿದ್ದು, ಇಲ್ಲಿ 9237 ಸೋಂಕಿತರಿದ್ದು, 245 ಜನ ಸಾವನ್ನಪ್ಪಿದ್ದಾರೆ.

ಮಧ್ಯಪ್ರದೇಶದಲ್ಲಿ 8762 ಸೋಂಕಿತರಿದ್ದು, 377 ಜನ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 6876  ಜನರಿಗೆ ಸೋಂಕು ಹರಡಿದ್ದು, 355 ಜನ ಮೃತಪಟ್ಟಿದ್ದಾರೆ.

ಹೀಗೆ ವಿಶ್ವದಲ್ಲಡೆ ಕರೋನಾ ಸೋಂಕು ಆವರಿಸುತ್ತಲೇ ಇದ್ದು, ಸಾವಿನ ಅಟ್ಟಹಾಸ ಕೂಡ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಭಾರತ ಈಗಾಗಲೇ ಚೀನಾವನ್ನು ಹಿಂದಿಕ್ಕಿ ವಿಶ್ವದ ಟಾಪ್ ಟೆನ್ ಸೋಂಕಿತ ದೇಶಗಳ ಸಾಲಿನಲ್ಲಿ ಸ್ಥಾನ ಪಡೆದಿರುವುದು ನೋವಿನ ಸಂಗತಿಯಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *