ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ಶನಿವಾರ 239 ಕೋವಿಡ್ ಪಾಸಿಟಿವ್

ಒಟ್ಟು 14233 ಕೋವಿಡ್  ಪ್ರಕರಣಗಳು : 11564 ಜನ ಗುಣಮುಖ   ಧಾರವಾಡ prajakiran.com : ಜಿಲ್ಲೆಯಲ್ಲಿ ಇಂದು 239 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 14233 ಕ್ಕೆ ಏರಿದೆ. ಇದುವರೆಗೆ 11564 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2254 ಪ್ರಕರಣಗಳು ಸಕ್ರಿಯವಾಗಿವೆ.  67 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 415 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಪ್ರಕರಣಗಳು ಪತ್ತೆಯಾದ ಸ್ಥಳಗಳು:* *ಧಾರವಾಡ ತಾಲೂಕು:*  ಮದಿಹಾಳ ಹತ್ತಿರ ಜೋಶಿ ಹಾಲ್,ವಿಜಯಾನಂದ […]

ಜಿಲ್ಲೆ

ಹಳ್ಳವಾದ ಧಾರವಾಡದ ಹಾಸ್ಮಿನಗರ ರಸ್ತೆ

ಧಾರವಾಡ prajakiran.com  : ರಾತ್ರಿಯಿಡೀ ಮಳೆ ಸುರಿದ ಹಿನ್ನೆಲೆ ಯಲ್ಲಿ ಧಾರವಾಡದ ಹಾಸ್ಮಿನಗರ ರಸ್ತೆ ಹಳ್ಳದಂತಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಹೋಗಲು   ಪರದಾಟ ನಡೆಸುವಂತಾಗಿದೆ. ಹದಗೆಟ್ಟ ರಸ್ತೆ ಗುಂಡಿಗಳಲ್ಲಿ ತುಂಬಿ ನಿಂತಿರುವ ನೀರುಹಾಸ್ಮೀ ನಗರ 1ನೇ ಕ್ರಾಸ್‌ನಲ್ಲಿ ಈ ಯಡವಟ್ಟು ಆಗಿದೆ. ತುಂಬಿರುವ ನೀರುಬಕೇಟ್‌ಗಳಿಂದ  ಹೊರ ಹಾಕುತ್ತಿರುವ ನಿವಾಸಿಗಳು ಜನಪ್ರತಿನಿಧಿಗಳ ವಿರುದ್ದಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೀರು ಹೊರ ಹಾಕಿ ದಾರಿ ಸುಗಮ‌ ಮಾಡಿಕೊಳ್ಳುತ್ತಿರುವ  ಸ್ಥಳೀಯರು ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ನೋಡುವಂತೆ ಆಗ್ರಹಿಸಿದ್ದಾರೆ. ಇದೇ ವೇಳೆ ಅನೇಕರು ತಗ್ಗು […]

ಜಿಲ್ಲೆ

ಧಾರವಾಡದ ಹುಣಸಿಕುಮರಿ ಮೂಲ ಸೌಕರ್ಯ ವಂಚಿತ

ಕುಗ್ರಾಮದ ಕಥೆ  ಕೇಳಿ ಜನಪ್ರತಿನಿಧಿಗಳೇ….! ಮೂಲ  ಸೌಕರ್ಯ ಸಮಸ್ಯೆ ಎದುರಿಸುತ್ತಿರುವ  ಗ್ರಾಮ  ಮಂಜುನಾಥ ಕವಳಿ ಧಾರವಾಡ prajakiran.com : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ ಸಹ ಸಮಾಜದ ಕಟ್ಟ ಕಡೆಯ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ನಮ್ಮನ್ನು ಆಳುವ ಸರಕಾರಗಳು ಸಮರ್ಪಕವಾಗಿ ತಲುಪಿಸುವಲ್ಲಿ ವಿಫಲವಾಗುತ್ತಲೇ ಬಂದಿವೆ. ಇದಕ್ಕೆ ಉತ್ತಮ ನಿರ್ದೇಶನವೆಂಬಂತೆ ಧಾರವಾಡದಿಂದ ಕೇವಲ 25 ಕಿ.ಮೀ ದೂರದಲ್ಲಿರೋ ಹುಣಸಿಕುಮರಿ ಎಂಬ ಗ್ರಾಮದ ಜನರ ಅಳಲನ್ನು ಯಾರೂ ಸಹ ಕೇಳದಂತಾಗಿದೆ. ಹೆಚ್ಚು ಕಡಿಮೆ 600 ಜನ […]

ಜಿಲ್ಲೆ

ಧಾರವಾಡದ ಕಾಂಗ್ರೆಸ್ ಮುಖಂಡ ಬಸವರಾಜ್ ಬಿಕ್ಕಣ್ಣವರ ಇನ್ನಿಲ್ಲ

ಧಾರವಾಡ prajakiran.com : ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕವಿವಿ ಮಾಜಿ ಸಿಂಡಿಕೇಟ್ ಸದಸ್ಯರು, ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಜಿಲಾಧ್ಯಕ್ಷರಾಗಿದ್ದ ಬಸವರಾಜ ಬಿಕ್ಕಣ್ಣವರ ಶನಿವಾರ ಸಂಜೆ ನಿಧನ ಹೊಂದಿದರು. ಅವರು ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದರು. ಅವರು ಪತ್ನಿ,ಮಗ ಹಾಗೂ ಅಪಾರ ಬಳಗ ಅಗಲಿದ್ದಾರೆ.ಇವರ ಅಂತ್ಯಕ್ರಿಯೆ ಸೆ. 13ರಂದು ಭಾನುವಾರ 9 ಗಂಟೆಗೆ ಕಿತ್ತೂರಿನ ತೋಟದ […]

ಜಿಲ್ಲೆ

ಬಡತನದ ಮಧ್ಯೆ ಸಾಧನೆ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ಧನಸಹಾಯ

ಧಾರವಾಡ prajakiran.com : ಬಡತನದ ಮಧ್ಯೆಯೂ ಪ್ರತಿಭೆ ತೋರುವ  ವಿದ್ಯಾರ್ಥಿಗಳನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಪಿ ಗೋಪಿ ಕೃಷ್ಣ  ಅಭಿಪ್ರಾಯಪಟ್ಟರು. ಅವರು ಧಾರವಾಡದಲ್ಲಿ ಶುಕ್ರವಾರ ಬಡತನದ ಮಧ್ಯೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನಸಹಾಯದ ಚೆಕ್ ಹಸ್ತಾಂತರಿಸಿ ಮಾತನಾಡಿದರು. ಗಾಯತ್ರಿ ಹಳ್ಳಿಯವರ (ಮಾಳಮಡ್ಡಿ ಕಬ್ಬೂರ್ ಕಂಪೌಂಡಿನ ಶೆಡ್ ನಿವಾಸಿ) ನಂದಾದೇವಿ ಕಣವಿ ಮತ್ತು ಐಶ್ವರ್ಯ ಕೇಸರಗೊಪ್ಪ  ಬಡತನದ […]

ಜಿಲ್ಲೆ

ಶಿಕ್ಷಣಾಧಿಕಾರಿಗಳ ಸಂಘದ ಬೇಡಿಕೆಗೆ ಸಚಿವರ ಭರವಸೆ

ಧಾರವಾಡ prajakiran.com : ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಸಲ್ಲಿಸಿದ ಪ್ರಮುಖ ೪ ಬೇಡಿಕೆಗಳ ಈಡೇರಿಕೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಭರವಸೆ ನೀಡಿದರು. ಗುರುವಾರ ನಗರಕ್ಕೆ ಆಗಮಿಸಿದ್ದ ಸಚಿವರಿಗೆ ಶಿಕ್ಷಣಾಧಿಕಾರಿಗಳ ಸಂಘದ ಪರವಾಗಿ ಮನವಿ ಅರ್ಪಿಸಲಾಯಿತು. ಈಗಾಗಲೇ ಡಿ.ಪಿ.ಸಿ ಆಗಿರುವ ಶಿಕ್ಷಣ ಇಲಾಖೆಯ ಗ್ರುಪ್ ಬಿ ವೃಂದದ ಪತ್ರಾಂಕಿತ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಶೀಘ್ರ ಸ್ಥಳ ನಿಯುಕ್ತಿಗೊಳಿಸುವದು. ಸರ್ಕಾರದಿಂದ ರಚನೆಯಾಗಿರುವ ಹೊಸ ತಾಲೂಕುಗಳಿಗೆ ಶೀಘ್ರವೇ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಕಗೊಳಿಸಿ […]

ಜಿಲ್ಲೆ

ಬಿಆರ್ ಟಿ ಎಸ್ ಚಾಲಕನ ಸಮಯ ಪ್ರಜ್ಞೆಯಿಂದ 40 ಜನ ಬಚಾವ್

ಹುಬ್ಬಳ್ಳಿ prajakiran.com : ಹುಬ್ಬಳ್ಳಿ-ಧಾರವಾಡ ಬಿಆರ್ ಟಿ ಎಸ್ ಚಾಲಕನ ಸಮಯ ಪ್ರಜ್ಞೆಯಿಂದ  40 ಜನರ ಪ್ರಾಣ ರಕ್ಷಣೆಯಾದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆ. 5ರಂದು ಚಿಗರಿ ಬಸ್ ನಲ್ಲಿ ನವನಗರದ ಬ್ರಿಜ್ ಬಳಿ ಬರುತ್ತಿದ್ದಂತೆ ಚಾಲಕನಿಗೆ ತಲೆ ಸುತ್ತು ಬಂದಿದೆ. ತಕ್ಷಣ ಚಾಲಕನಿಗೆ ಬಸ್ ಚಾಲನೆ ಮಾಡಲು ಆಗಿಲ್ಲ. ಆಗಅದನ್ನು ನಿಯಂತ್ರಣ ಮಾಡಿ ರಸ್ತೆ ಪಕ್ಕಕ್ಕೆ ನಿಲ್ಲಿಸಿ ಚಾಲಕನ ಸೀಟ್ ನಿಂದ ಕೆಳಗೆ ಬಿದ್ದಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳಾ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ. […]

ಜಿಲ್ಲೆ

ಧಾರವಾಡದಲ್ಲಿ ರಸ್ತೆಯ ಮೇಲೆ ಹರಿದ ರಕ್ತ…..!

ಧಾರವಾಡ prajakiran.com : ರಸ್ತೆಯ ಮೇಲೆ ಹರಿಯುತ್ತಿರುವ ರಕ್ತ ಮಿಶ್ರಿತ ನೀರನ್ನು ಕಂಡು ಧಾರವಾಡದ ಜನತೆ ಹೌಹಾರಿಯುತ್ತಿದ್ದಾರೆ. ಅಲ್ಲದೆ,ಅಕ್ಷರಶಃ  ಬೆಚ್ಚಿ ಬೀಳುತ್ತಿದ್ದಾರೆ ಎಂದರೆ ನಂಬಲೇ ಬೇಕು. ಇದೇನಪ್ಪ ರಸ್ತೆಯ ಮೇಲೆ ರಕ್ತವೇ? ಎಂದು ನೀವು ಪ್ರಶ್ನಿಸಿದ್ರೆ ತಪ್ಪೇನಿಲ್ಲ. ಬೆಳ್ಳಂ ಬೆಳಗ್ಗೆ ರಸ್ತೆಯ ಮೇಲೆ ಹರಿಯುತ್ತಿರುವ ರಕ್ತ ಮಿಶ್ರಿತ ನೀರನ್ನು ಕಂಡು ಜನತೆ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ಧಾರವಾಡದ ಮಣಕಿಲ್ಲಾ ಪ್ರದೇಶದಲ್ಲಿರುವ ಕಸಾಯಿಖಾನೆಯಿಂದ ದನಗಳಗಳ ರಕ್ತ ನೀರಿನಲ್ಲಿ ಮಿಶ್ರಣವಾಗಿ ಆ ನೀರು ಓವರ್  ಫ್ಲೋ ಆಗಿ ರಸ್ತೆಯ […]

ಜಿಲ್ಲೆ

ಧಾರವಾಡದಲ್ಲಿ ರಕ್ತದ ಕೊರತೆ ನೀಗಿಸಲು ಆಮ್ ಆದ್ಮಿ ರಕ್ತದಾನ

ಧಾರವಾಡ prajakiran.com : ಕರೋನಾ ಮಹಾಮಾರಿಯ ಅವಧಿಯಲ್ಲಿ ದೀರ್ಘಕಾಲ ಲಾಕ್ ಡೌನ್ ಹಾಗೂ ಇತರ ನಿರ್ಬಂಧಗಳ ಕಾರಣ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಉಂಟಾಗಿರುವ ರಕ್ತದ ಕೊರತೆಯನ್ನು ನಿವಾರಿಸುವ ದೃಷ್ಟಿಯಿಂದ ಆಮ್ ಆದ್ಮಿ ಪಕ್ಷವು ಜೂಲೈ ತಿಂಗಳಲ್ಲೇ ರಕ್ತದಾನ ಅಭಿಯಾನವನ್ನು ಅರಂಭಿಸಿದೆ. ಮೊದಲನೆಯ ಹಂತದಲ್ಲಿ, ಹುಬ್ಬಳ್ಳಿಯಲ್ಲಿ ರಕ್ತದಾನ ಶಿಬಿರ ಮತ್ತು ಪ್ಲಾಸ್ಮಾ ಕಣಗಳ ದಾನ ಯಶಸ್ವಿಯಾಗಿ ಆಯೋಜಿಸಲಾಗಿದೆ. ಅಭಿಯಾನದ ಅಂಗವಾಗಿ, ಧಾರವಾಡದ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಅಭಾವದಿಂದ, ಚಿಕಿತ್ಸೆ ಪಡೆಯುತ್ತಿರುವ ಬಹಳಷ್ಟು ಜನರಿಗೆ ತೊಂದರೆ ಆಗುತ್ತಿದೆ. ಜಿಲ್ಲಾ ಆಸ್ಪತ್ರೆಯ ಬ್ಲಡ್ […]

ಜಿಲ್ಲೆ

ಧಾರವಾಡದ ೧೩ ಕೇಂದ್ರಗಳಲ್ಲಿ ಸೆ.೭ ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

ಧಾರವಾಡ prajakiran.com : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ರಾಜ್ಯಾದ್ಯಂತ ಏಕಕಾಲದಲ್ಲಿ ಸೆ. 7ರಿಂದ  ಸೆ.೧೯  ವರೆಗೆ ನಡೆಯಲಿವೆ. ಪರೀಕ್ಷೆಗಳು ಬೆಳಿಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ರ ವರೆಗೆ  ಹಾಗೂ ೬ ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನದ ಅವಧಿಯಲ್ಲಿ ೨.೧೫ ರಿಂದ ೫.೩೦ ವರೆಗೆ ನಡೆಯಲಿವೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು ೧೩ ಪರೀಕ್ಷಾ ಕೇಂದ್ರಗಳಿದ್ದು, ಧಾರವಾಡ ಶಹರದಲ್ಲಿ  ೪,ಹುಬ್ಬಳ್ಳಿ ಶಹರದಲ್ಲಿ ೬, ನವಲಗುಂದ, ಕುಂದಗೋಳ ಮತ್ತು ಕಲಘಟಗಿ ತಾಲ್ಲೂಕಿನಲ್ಲಿ ತಲಾ ೧ ಕೇಂದ್ರಗಳಿವೆ. ಕಲಾ ವಿಭಾಗದಲ್ಲಿ ೩೪೦೨, ವಾಣಿಜ್ಯ […]