ಜಿಲ್ಲೆ

ಧಾರವಾಡದ ೧೩ ಕೇಂದ್ರಗಳಲ್ಲಿ ಸೆ.೭ ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

ಧಾರವಾಡ prajakiran.com : ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ರಾಜ್ಯಾದ್ಯಂತ ಏಕಕಾಲದಲ್ಲಿ ಸೆ. 7ರಿಂದ  ಸೆ.೧೯  ವರೆಗೆ ನಡೆಯಲಿವೆ.

ಪರೀಕ್ಷೆಗಳು ಬೆಳಿಗ್ಗೆ ೧೦.೧೫ ರಿಂದ ಮಧ್ಯಾಹ್ನ ೧.೩೦ರ ವರೆಗೆ  ಹಾಗೂ ೬ ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನದ ಅವಧಿಯಲ್ಲಿ ೨.೧೫ ರಿಂದ ೫.೩೦ ವರೆಗೆ ನಡೆಯಲಿವೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟು ೧೩ ಪರೀಕ್ಷಾ ಕೇಂದ್ರಗಳಿದ್ದು, ಧಾರವಾಡ ಶಹರದಲ್ಲಿ  ೪,ಹುಬ್ಬಳ್ಳಿ ಶಹರದಲ್ಲಿ ೬, ನವಲಗುಂದ, ಕುಂದಗೋಳ ಮತ್ತು ಕಲಘಟಗಿ ತಾಲ್ಲೂಕಿನಲ್ಲಿ ತಲಾ ೧ ಕೇಂದ್ರಗಳಿವೆ.

ಕಲಾ ವಿಭಾಗದಲ್ಲಿ ೩೪೦೨, ವಾಣಿಜ್ಯ ವಿಭಾಗದಲ್ಲಿ  ೩೧೯೪ ಮತ್ತು ವಿಜ್ಞಾನ ವಿಭಾಗದಲ್ಲಿ  ೨೩೨೩ ಸೇರಿದಂತೆ ಒಟ್ಟು ೮೯೧೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಪ್ರತಿ ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀ. ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು/ಕಂಪ್ಯೂಟರ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಲು ಹಾಗೂ ನಿಷೇಧಾಜ್ಞೆ ಜಾರಿಗೊಳಿಳಿಸಿ  ಆದೇಶಿಸಲಾಗಿದೆ.

ಇಲಾಖೆಯ ಸೂಚನೆಯಂತೆ ಜಿಲ್ಲಾ ಕೇಂದ್ರದಲ್ಲಿ ಕೋವಿಡ್-೧೯ ಪಾಸಿಟಿವ್ ಪ್ರಕರಣದ ಅಭ್ಯರ್ಥಿಗಳಿಗಾಗಿ ಒಂದು ವಿಶೇಷ ಕೇಂದ್ರವನ್ನು ತೆರೆಯಲಾಗಿದೆ. 

ಅಲ್ಲಿಯ ಕೇಂದ್ರಕ್ಕೂ ಸಹ ಮುಖ್ಯ ಅಧೀಕ್ಷಕರನ್ನು ನೇಮಿಸಲಾಗಿದೆ.  ಜಿಲ್ಲಾ ಉಪನಿರ್ದೇಶಕರ ಉಸ್ತುವಾರಿಯಲ್ಲಿ ಕೇಂದ್ರಕ್ಕೆ  ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಪೂರೈಕೆ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದೇರ್ಶಕ ಚಿದಂಬರ ಕೆ.  ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *