ಜಿಲ್ಲೆ

ಧಾರವಾಡದಲ್ಲಿ ಸೆ.೨೫ ರಿಂದ ಮಾಸ್ಕ್ ಬಳಕೆ ಉಲ್ಲಂಘಿಸುವವರಿಗೆ ದಂಡ

ವಿಶೇಷ ಕಾರ್ಯಾಚರಣೆಗೆ ಧಾರವಾಡ ಜಿಲ್ಲಾಡಳಿತ ನಿರ್ಧಾರ ಇದುವರೆಗೆ ೩೦ ಲಕ್ಷ ರೂ. ದಂಡ ಆಕರ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಧಾರವಾಡ prajakiran.com : ಕೊರೊನಾ ವೈರಾಣು ನಿಯಂತ್ರಣಕ್ಕೆ ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಈ ನಿಯಮ ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಮಾಸ್ಕ್ ಬಳಕೆ ಮಾಡದವರಿಂದ ಜಿಲ್ಲೆಯಲ್ಲಿ ಈಗಾಗಲೇ ೩೦ ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ದಂಡ ವಿಧಿಸುವ ಕಾರ್ಯ ಇನ್ನಷ್ಟು ಚುರುಕುಗೊಳಿಸಲು  ನಾಳೆ ಸೆ.೨೫ ರಿಂದ ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ […]

ಆಧ್ಯಾತ್ಮ ಜಿಲ್ಲೆ

ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ೪,೪೭೫ ಚಾಲ್ತಿ, ೧೦ ವ್ಯಾಜ್ಯಪೂರ್ವ ಪ್ರಕರಣಗಳ ಇತ್ಯರ್ಥ  

೨೫ ಕೋಟಿಗಿಂತ ಹೆಚ್ಚು ಮೊತ್ತ ವಸೂಲು ಧಾರವಾಡ  prajakiran.com :  ಇ-ಲೋಕ್ ಅದಾಲತ್‌ನ್ನು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿತ್ತು.    ಈ ಲೋಕಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾಗಿರುವ ಉಮೇಶ್ ಎಮ್. ಅಡಿಗ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ ೧೩ ಪೀಠಗಳನ್ನು, ಹುಬ್ಬಳ್ಳಿಯಲ್ಲಿ ೧೬ ಪೀಠಗಳನ್ನು, ಕುಂದಗೋಳ, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ ೨ ಪೀಠವನ್ನು ಸ್ಥಾಪಿಸಲಾಗಿತ್ತು. ವಿವಿಧ ರೀತಿಯ ಸುಮಾರು ೭,೬೪೫ ಕ್ಕಿಂತ […]

ಜಿಲ್ಲೆ

ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಅಂಬೇಡ್ಕರ್ ಭವನ

ಧಾರವಾಡ prajakiran.com : ಧಾರವಾಡದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಕೋವಿಡ್ ಭೀತಿಯ ನಡುವೆ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಅಂಬೇಡ್ಕರ್ ಭವನ ಇದೀಗ ಕಸದ ತೊಟ್ಟಿಯಂತಾಗಿದ್ದು, ಎಲ್ಲಿ ನೋಡಿದರಲ್ಲಿ ಗಿಡ ಗಂಟಿಗಳು, ಕಸದ ರಾಶಿ, ನೆಲ ಹಾಸು ಮೇಲೂ ಸಹ ಹುಲ್ಲು ಬೆಳೆದಿದೆ. ಈ ಬಗ್ಗೆ ನಿರ್ವಹಣೆ ಮಾಡಬೇಕಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಕಟ್ಟಡದ ನಿವೇಶನದ ಸ್ಥಳದಲ್ಲಿಯೇ […]

ಜಿಲ್ಲೆ

ಬಂಗಾರ ಸಾಲದ ಮೇಲೆ ಬಡ್ಡಿ ಕಡಿತ ಮಾಡಿದ ಕರ್ನಾಟ ವಿಕಾಸ ಗ್ರಾಮೀಣ ಬ್ಯಾಂಕ್

ಧಾರವಾಡ prajakiran.com : ಕೊರೋನಾ ವೈರಸ್ (ಕೋವಿಡ್ -೧೯) ಸೃಷ್ಟಿಸಿರುವ ಈ ಸಂಕ್ರಮಣ ಸ್ಥಿತಿಯಲ್ಲಿ ಜನಸಾಮಾನ್ಯರ ಅದರಲ್ಲೂ ರೈತರ ಮತ್ತು  ವ್ಯಾಪಾರಸ್ಥರ ಆರ್ಥಿಕ ಅಗತ್ಯಗಳನ್ನು ಗುರುತಿಸಿ, ಧಾರವಾಡ ಮೂಲದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ೭.೨೫ % ರಷ್ಟು ಕಡಿಮೆ ಬಡ್ಡಿ ದರದಲ್ಲಿ “ವಿಕಾಸ್ ಲಘು ಸುವರ್ಣ” ಎಂಬ ಹೆಸರಿನಲ್ಲಿ  ವಿಶೇಷ ಚಿನ್ನದ ಸಾಲ ಯೋಜನೆಯನ್ನು ಶುಕ್ರವಾರದಂದು ಬಿಡುಗಡೆ ಮಾಡಿದೆ. ನೂತನ ಬಂಗಾರ ಸಾಲ ಯೋಜನೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಪಿ ಗೋಪಿ ಕೃಷ್ಣ, […]

ಜಿಲ್ಲೆ

ಮಕ್ಕಳ ಮೂಲಭೂತ ಕಲಿಕೆ ಬಲಪಡಿಸಲು ಶಿಕ್ಷಕರಿಗೆ ತರಬೇತಿ

ಧಾರವಾಡ prajakiran.com : ಗುಣಾತ್ಮಕ ಹಾಗೂ ಪರಿಣಾಮಕಾರಿ ಶಿಕ್ಷಣವು ಮೂಲಭೂತ ಕಲಿಕೆಯನ್ನು ಅವಲಂಬಿಸಿರುವುದರಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಮೂಲಭೂತ ಕಲಿಕೆ ಬಲಪಡಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗುವುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌ನ ‘ರ‍್ಲಿ ಸ್ಪಾರ್ಕ ಕಾರ್ಯಕ್ರಮ’ದ ಜೊತೆಗೆ ಜಂಟಿಯಾಗಿ ಮಕ್ಕಳ ಮೂಲಭೂತ ಕಲಿಕೆ ಬಲಪಡಿಸಲು ಶಿಕ್ಷಕರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಸಮಾಲೋಚಿಸಲು ಶುಕ್ರವಾರ ತಮ್ಮ ಕಾರ್ಯಾಲಯದಲ್ಲಿ ಜರುಗಿದ […]

ಜಿಲ್ಲೆ

ಧಾರವಾಡದ ಶತಮಾನದ ಅಂಚಿನಲ್ಲಿದ್ದ ಶಾಲಾ ಕಟ್ಟಡ ಕುಸಿತ

ಧಾರವಾಡ prajakiran.com : ಶತಮಾನದ ಅಂಚಿನಲ್ಲಿದ್ದ ಶಾಲಾ ಕಟ್ಟಡವೊಂದು ಕುಸಿದ ಘಟನೆ ಧಾರವಾಡದಲ್ಲಿ ಗುರುವಾರ ನಡೆದಿದೆ. ಧಾರವಾಡದ ಪಂಚ ಕಚೇರಿ ಓಣಿಯ ಸೆಂಟ್ರಲ್ ಸ್ಕೂಲ್ ಮಳೆಯಿಂದ ಗೂಡೆ ಕುಸಿದು ಹಾನಿಯಾಗಿದೆ. ಈ ಶಾಲಾ ಕಟ್ಟಡವನ್ನು 1929 ರಲ್ಲಿ ನಿಮಿ೯ಸಲಾಗಿತ್ತು. ಕರೂನಾ ಹಿನ್ನಲೆಯಲ್ಲಿ ಶಾಲೆಗೆ ರಜೆಯಿದ್ದ ಪರಿಣಾಮ ಭಾರೀ ದುರಂತವೊಂದು ತಪ್ಪಿದ್ದು, ನೂರಾರು ಮಕ್ಕಳಿಗೆ ಜೀವದಾನ ನೀಡಿತ್ತಂದರೆ ತಪ್ಪಾಗಲಾರದು. ಮಾಹಿತಿ ಅರಿತು ರಜೆಯಲ್ಲಿದ್ದರೂ ಘಟನಾ ಸ್ಥಳಕ್ಕೆ ದೌಡಾಯಿಸಿದ ಕ್ಷೇತ್ರ ಶಿಕ್ಷಣ ಅಧಿಕಾರಿ ಎ.ಎ. ಖಾಜಿ ಭೇಟಿ ನೀಡಿ ಪರಿಶೀಲನೆ […]

ಜಿಲ್ಲೆ

ಧಾರವಾಡದಲ್ಲಿ ಸೆ.೨೧ ರಿಂದ ಹೆಸರು, ಉದ್ದು ಬೆಂಬಲ ಬೆಲೆ ಖರೀದಿ ಯೋಜನೆಯಡಿ ನೋಂದಣಿ ಪ್ರಾರಂಭ  

ಧಾರವಾಡ prajakiran.com :  ೨೦೨೦-೨೧ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಹಾಗೂ ಉದ್ದಿನಕಾಳನ್ನು ಜಿಲ್ಲೆಯ ರೈತರಿಂದ ಖರೀದಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸೋಮವಾರ ಸೆ.೨೧ ರಿಂದ ರೈತರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳನ್ನು ಪ್ರತಿ ಕ್ವಿಂಟಲ್ ಗೆ […]

ಜಿಲ್ಲೆ

ಬೆಣ್ಣೆಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋದ ರೈತ ಕುಟುಂಬಗಳಿಗೆ 5 ಲಕ್ಷ ಚೆಕ್ ಹಸ್ತಾಂತರ

ಧಾರವಾಡ prajakiran.com : ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದಲ್ಲಿ ಬೆಣ್ಣೆಹಳ್ಳದ ಪ್ರವಾಹದಿಂದಾಗಿ ಕೊಚ್ಚಿಹೋದ ಶ್ರೀಕಾಂತರಡ್ಡಿ ಇನಾಮತಿ ಹಾಗೂ ದೇವೆಂದ್ರಪ್ಪ ಯಮನಪ್ಪ ಮಾದರ  ಅವರ ಕುಟುಂಬಗಳಿಗೆ ಬುಧವಾರ ತಲಾ 5 ಲಕ್ಷ ರೂ.ಪರಿಹಾರ ನೀಡಲಾಯಿತು. ನವಲಗುಂದ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಅವರು ಮೃತರ ವಾರಸುದಾರರಾದ ಅನಸೂಯಾ ಶ್ರೀಕಾಂತರಡ್ಡಿ ಇನಾಮತಿ ಹಾಗೂ ಸಾವಕ್ಕ ಮಾದರ ಇವರಿಗೆ ತಲಾ 5 ಲಕ್ಷ ರೂ ಗಳ ಪರಿಹಾರ ಧನದ ಚೆಕ್ ನೀಡಿ, ಬೆಣ್ಣೆಹಳ್ಳ ವೀಕ್ಷಿಸಿದರು. ಕಾಂಗ್ರೆಸ್ […]

ಜಿಲ್ಲೆ

ಧಾರವಾಡ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾಗಮ ಅನುಷ್ಠಾನ ವೀಕ್ಷಣೆ   

 ಧಾರವಾಡ prajakiran.com : ಧಾರವಾಡ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಮಮತಾ ನಾಯಕ ಸೋಮವಾರ ವೀಕ್ಷಣೆ ಮಾಡಿದರು.  ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಜಿಲ್ಲೆಯ ವಿದ್ಯಾಗಮ ಕಾರ್ಯಕ್ರಮದ ಅನುಷ್ಠಾನದ ಕುರಿತು ಸಮಗ್ರ ಮಾಹಿತಿಯನ್ನು ಪಡೆದು ಮಾರ್ಗದರ್ಶನ ಮಾಡಿದರು. ನಂತರ ಧಾರವಾಡ ಗ್ರಾಮೀಣ ವಲಯದ ಕೆಜಿಎಸ್ ನರೇಂದ್ರ ಹಾಗೂ ಜಿಹೆಚ್‌ಎಸ್ ಚಿಕ್ಕಮಲ್ಲಿಗವಾಡ ಶಾಲೆಗಳ ವೀಕ್ಷಣೆ ಮಾಡಿದರು. ಗ್ರಾಮೀಣ ಮಕ್ಕಳು ಬಹಳ ಉತ್ಸಾಹದಿಂದ ಕಲಿಕಾ ಕೇಂದ್ರಗಳಲ್ಲಿ ಭಾಗವಹಿಸಿರುವುದು ಹಾಗೂ ಊರಿನ ಜನರ […]

ಜಿಲ್ಲೆ

ಶಾಸಕ ಅರವಿಂದ ಬೆಲ್ಲದ ಭರವಸೆ : ಕವಿವಿ ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಕ್ಕೆ

ಧಾರವಾಡ prajakiran.com : ಕರ್ನಾಟಕ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಹಾಗೂ ಸ್ಕಾಲರ್ ಶಿಪ್ ವಿತರಣೆಗೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಶಾಸಕರಾದ  ಅರವಿಂದ  ಬೆಲ್ಲದ, ಪ್ರಸಾದ್  ಅಬ್ಬಯ್ಯ ಭರವಸೆ  ಮೇರೆಗೆ  ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿ ಗಳ ಮನ ಗೆದ್ದಬೆಲ್ಲದ : ಧಾರವಾಡದ  ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಶಾಸಕ ಬೆಲ್ಲದ, ವಿಶ್ವ ವಿದ್ಯಾಲಯದ  ಕುಲಪತಿ ಹಾಗೂ  ಸಮಾಜಕಲ್ಯಾಣ ಅಧಿಕಾರಿಗಳ ಜೊತೆಗೆ  ಮಾತನಾಡಿದರು. ಬಳಿಕ ಪ್ರತಿಭಟನೆ ನಿರತ ವಿಧ್ಯಾರ್ಥಿಗಳ ಸಂಗಡ […]