ಜಿಲ್ಲೆ

ಶಾಸಕ ಅರವಿಂದ ಬೆಲ್ಲದ ಭರವಸೆ : ಕವಿವಿ ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಕ್ಕೆ

ಧಾರವಾಡ prajakiran.com : ಕರ್ನಾಟಕ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಹಾಗೂ ಸ್ಕಾಲರ್ ಶಿಪ್ ವಿತರಣೆಗೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಶಾಸಕರಾದ  ಅರವಿಂದ  ಬೆಲ್ಲದ, ಪ್ರಸಾದ್  ಅಬ್ಬಯ್ಯ ಭರವಸೆ  ಮೇರೆಗೆ  ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

ವಿದ್ಯಾರ್ಥಿ ಗಳ ಮನ ಗೆದ್ದಬೆಲ್ಲದ :

ಧಾರವಾಡದ  ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಶಾಸಕ ಬೆಲ್ಲದ, ವಿಶ್ವ ವಿದ್ಯಾಲಯದ  ಕುಲಪತಿ ಹಾಗೂ  ಸಮಾಜಕಲ್ಯಾಣ ಅಧಿಕಾರಿಗಳ ಜೊತೆಗೆ  ಮಾತನಾಡಿದರು.

ಬಳಿಕ ಪ್ರತಿಭಟನೆ ನಿರತ ವಿಧ್ಯಾರ್ಥಿಗಳ ಸಂಗಡ ಮಾತು-ಕತೆ ಮಾಡಿ   ವಿಶ್ವ ವಿದ್ಯಾಲಯದ ಲೋಪದೋಷವನ್ನು ಪರಿಶೀಲನೆ ನಡೆಸಿ, ಸಂಬಂಧಿಸಿದ ಸರಕಾರಿ ಅಧಿಕಾರಿಗಳ ಗಮನಕ್ಕೆ  ತಂದು ಪರಿಶಿಷ್ಟ ವರ್ಗದ ವಿದ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಸಕಾಲದಲ್ಲಿ ಲ್ಯಾಪ್ ಟಾಪ್  ವಿತರಣೆಯನ್ನು  ಮಾಡುವ ಭರವಸೆ ನೀಡಿದರು.

ಪರೀಕ್ಷೆ  ಸಮೀಪ ಇರುವದರಿಂದ ಈ ರೀತಿ ಪ್ರತಿಭಟನೆ  ಮಾಡುವುದು ಬೇಡ ನಿಮ್ಮ  ಸಮಸ್ಯೆ  ಎನಾದರೂ ಇದ್ದರೆ  ತಕ್ಷಣವೇ  ತಮ್ಮ  ಗಮನಕ್ಕೆ  ತರಬೇಕು  ಎಂದು ಹೇಳಿದರು.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಈ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ  ಹಾಗೂ  ವಿದ್ಯಾರ್ಥಿಗಳ ಸಂಧಾನ ಸಭೆಯಲ್ಲಿ  ಶಾಸಕ ಅರವಿಂದ ಬೆಲ್ಲದ ಕಾರ್ಯವೈಖರಿಯು ವಿದ್ಯಾರ್ಥಿ ಗಳ ಮನ ಗೆದ್ದಿತು.

  ಸಂಧಾನ ಸಭೆಯಲ್ಲಿ  ವಿಶ್ವ ವಿದ್ಯಾಲಯದ ಕುಲಪತಿ, ಸಿಂಡಿಕೇಟ್  ಸದಸ್ಯರು, ಎನ್ ಎಸ್ ಯು ಐ ಮುಖಂಡ ಮಹಾಂತೇಶ ಕಂಬಾರ,  ವಿದ್ಯಾರ್ಥಿ ಮುಖಂಡರಾದ ಅಮೋಘ,  ಗಣಪತಿ,  ಶಶಿ,  ರವಿ  ಇನ್ನಿತರ  ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *