ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ಪ್ರತಿ ದಿನ 1330 ಜನರಿಗೆ ಕೋವಿಡ್ ಪರೀಕ್ಷೆ ….!

ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ….!

ಧಾರವಾಡ prajakiran.com :
ಕೋವಿಡ್-19 ರ ಎರಡನೇ ಅಲೆ ಆರಂಭವಾದಾಗ ಕೋರೊನಾ ಸೋಂಕು ನಗರ ಪ್ರದೇಶದಲ್ಲಿ ಹೆಚ್ಚಿಗೆ ಇದ್ದು, ಗ್ರಾಮೀಣ ಭಾಗದಲ್ಲಿ ಕಡಿಮೆ ಪ್ರಮಾಣದಲ್ಲಿತ್ತು.

ಆದರೆ ಈಗ ದಿನದಿಂದ ದಿನಕ್ಕೆ
ಗ್ರಾಮಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

ಆದ್ದರಿಂದ ತಕ್ಷಣವೇ ಕೋವಿಡ್ ಪ್ರಕರಣಗಳನ್ನು ಗುರುತಿಸಲು ಅನುಕೂಲವಾಗಲು ಜಿಲ್ಲೆಯ ಎಲ್ಲ 52 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರ್ಯಾಟ್(RAT) (RAPID ಆ್ಯಂಟಿಜನ್ ಟೆಸ್ಟ್) ಟೆಸ್ಟ್ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖಾಸಗಿ ವೈದ್ಯರ, ನೋಡಲ್ ಅಧಿಕಾರಿಗಳ ಸಭೆ ಜರುಗಿಸಿದ ನಂತರ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

ಪ್ರತಿ ದಿನ ಸುಮಾರು 1330 ಜನರಿಗೆ ಗಂಟಲು ಮತ್ತು ಮೂಗು ದ್ರವ ಕೋವಿಡ್ (ಆರ್.ಟಿ.ಪಿ.ಸಿ.ಆರ್. ಮೂಲಕ) ಪರೀಕ್ಷೆ ಮಾಡಲು ಸರಕಾರ ಜಿಲ್ಲೆಗೆ ಗುರಿ ನಿಗದಿಗೊಳಿಸಿದೆ.

ಕೋವಿಡ್ ಪಾಸಿಟಿವ್ ಆಗಿರುವ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕಿತರು, ಕೋವಿಡ್ ರೋಗ ಲಕ್ಷಣವಿರುವವರಿಗೆ ಮಾತ್ರ ಪರೀಕ್ಷೆ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ.

ಆದರೂ ಧಾರವಾಡ ಜಿಲ್ಲೆಯಲ್ಲಿ ಈಗ ಪ್ರತಿದಿನ ಸರಾಸರಿ ಸುಮಾರು 2400 ಜನರಿಗೆ ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಈಗ ಶೇ 34 ರಷ್ಟಾಗಿದೆ ಎಂದು ಅವರು ತಿಳಿಸಿದ್ದಾರೆ.

*ಗ್ರಾಮೀಣ ಜನರು ಆತಂಕದಿಂದ ಸ್ಥಳೀಯ ವೈದ್ಯರಿಗೆ ತೋರಿಸಿ, ಸಮ್ಮನಾಗಬಾರದು*: ಗ್ರಾಮೀಣ ಭಾಗದಲ್ಲಿರುವ ಜನರು ಕೋವಿಡ್ ಲಕ್ಷಣಗಳಿದ್ದರೂ ಸ್ಥಳೀಯ ವೈದ್ಯರಿಗೆ ತೋರಿಸಿ, ಅವರು ಕೊಡುವ ಮಾತ್ರೆ ಸೇವಿಸಿ, ಸುಮ್ಮನಾಗುತ್ತಿದ್ದಾರೆ.

ಅವರಿಗೆ ಬಂದಿರುವುದು ಕೋವಿಡ್ ಸೋಂಕು ಆಗಿದ್ದರೆ, ಸೋಂಕು ಹೆಚ್ಚು ಉಲ್ಬಣವಾದ ಮೇಲೆ ಕೋವಿಡ್ ಟೆಸ್ಟ್ ಗೆ ಬರುತ್ತಾರೆ.

ಟೆಸ್ಟ್ ವರದಿ ಬಂದು ಅವರಿಗೆ ಚಿಕಿತ್ಸೆ ಆರಂಭವಾಗುವ ಹೊತ್ತಿಗೆ ತುಂಬಾ ಸಮಯವಾಗಿ, ರೋಗಿ ಸ್ಥಿತಿ ಗಂಭಿರವಾಗುತ್ತದೆ.

ಆದ್ದರಿಂದ ಯಾವುದೇ ವ್ಯಕ್ತಿ ಕೋವಿಡ್ ಲಕ್ಷಣವೆನಿಸಿದರೆ ತಕ್ಷಣ ಸಮೀಪದ ಸರಕಾರಿ ಆಅಸ್ಪತ್ರೆಗೆ ಹೋಗಿ, ಕೋವಿಡ್ ಟೆಸ್ಟ್ ಗೆ ಒಳಪಡಬೇಕು.

ವರದಿ ಬರುವವರೆಗೆ ಪ್ರತ್ಯೇಕವಾಗಿ ಇದ್ದು, ವೈದ್ಯರು ನೀಡಿರುವ ಮಾತ್ರೆಗಳನ್ನು ಸೇವಿಸಬೇಕು.

ಸೋಂಕು ಕಾಣಿಸಿದ ಮೊದಲ 7 ದಿನ ಚಿಕಿತ್ಸೆಗೆ ಬಹು ಮುಖ್ಯವಾಗಿರುತ್ತವೆ. ‘ಪ್ರಾಪರ್ ಲೈನ್ ಆಪ್ ಕೋವಿಡ್ ಟ್ರಿಟಮೆಂಟ್’ ಆದರೆ ರೋಗಿ‌ ಸುರಕ್ಷಿತವಾಗಿದ್ದು, ಹಾಸ್ಪಿಟಲೈಜ್ ಆಗುವುದು ಕಡಿಮೆ ಚಾನ್ಸ್ ಇರುತ್ತದೆ.

ವರದಿ ಬಂದ ತಕ್ಷಣ ಆರೋಗ್ಯ ಸ್ಥಿರತೆ ನೋಡಿ, ವೈದ್ಯರು ಆಸ್ಪತ್ರೆಗೆ ಅಥವಾ ಕೋವಿಡ್ ಕಾಳಜಿ ಕೇಂದ್ರಕ್ಕೆ ಹಾಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸಿಸಲು ಸೌಕರ್ಯವಿದ್ದರೆ ಹೋಮ್ ಐಸೀಲೇಶನ್ ಆಗಲು ಸಲಹೆ ನೀಡುತ್ತಾರೆ.

ಹೋಮ ಐಸೋಲೇಶನ್ ಆದವರ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಅಗತ್ಯ ಸಲಹೆ, ಔಷಧಿ ನೀಡುತ್ತಾರೆ.

ಅಗತ್ಯವೆನಿಸಿದಾಗ ಸಂಪರ್ಕಿಸಲು ದೂರವಾಣಿ ಸಂಖ್ಯೆ ನೀಡುತ್ತಾರೆ.

ಜಿಲ್ಲಾಡಳಿತ ಅನುಕೂಲ ಮಾಡಿಕೊಡುತ್ತಿದ್ದರೂ ಕೆಲವು ಜನರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರದೆ ಮನೆಯಲ್ಲಿದ್ದು, ಅನಾರೋಗ್ಯಕ್ಜೆ ಒಳಗಾಗುತ್ತಾರೆ.

ಉಸಿರಾಟ ಸಮಸ್ಯೆಗೆ ಇಡಾಗುತ್ತಾರೆ. ಮತ್ತು ಮನೆಯಲ್ಲಿದ್ದು, ಮನೆಯವರಿಗೂ ಸೋಂಕು ಹರಡುತ್ತಿದ್ದಾರೆ.

ಮುಂಜಾಗೃತೆ ವಹಿಸುವದರಿಂದ ಅನಗತ್ಯವಾಗಿ ಭಯ, ಆತಂಕಗಳಿಗೆ ಒಳಗಾಗುವುದು ಮತ್ತು ಆ ಮೂಲಕ ಅನಗತ್ಯವಾಗಿ ಆಸ್ಪತ್ರೆಗಳಲ್ಲಿ ಒತ್ತಡ ಹೇರಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಗಳಿಗಾಗಿ ಆಗುವ ಒತ್ತಡವನ್ನು ಕಡಿಮೆ ಮಾಡಬಹುದು.

*ವಲಸಿಗರು ಲಕ್ಷಣಗಳಿದ್ದರೆ ಸ್ವಯಂ ಆಗಿ ಟೆಸ್ಟ್ ಮಾಡಿಸಿಕೊಳ್ಳಬೇಕು*:
ಬೇರೆ ರಾಜ್ತ, ಜಿಲ್ಲೆ, ಪ್ರದೇಶಗಳಿಂದ ಗ್ರಾಮಗಳಿಗೆ ಬಂದವರು ಕೋವಿಡ್ ಟೆಸ್ಡ್ ಮಾಡಿಸಿಕೊಂಡು, ವರದಿ ಬರುವವರೆಗೆ ಪ್ರತ್ಯೇಕವಾಗಿರಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *