ರಾಜ್ಯ

ಗದಗ : ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಅಕ್ಕಿ ವಶ

ಗದಗ prajakiran.com : ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಅಕ್ಕಿ ವಶಕ್ಕೆ ಪಡೆದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣ್ಣದಿಂದ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸಲಾಗುತ್ತಿತ್ತು. 50 ಕೆಜಿಯ ,600 ಪಾಕೆಟ್, ಸೇರಿದಂತೆ ಲಾರಿ ವಶಕ್ಕೆ ಪಡೆಯಲಾಗಿದೆ. ಅಂದಾಜು 5 ಲಕ್ಷ ಹೆಚ್ಚು ಮೌಲ್ಯದ ಅನ್ನ ಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ ಗಜೇಂದ್ರಗಡ ಪೊಲೀಸ್ […]

ರಾಜ್ಯ

ಗದಗ ಜಿಲ್ಲೆಯ ಕಪ್ಪತಗುಡ್ಡ ಅಂಚಿನ 14 ಕಲ್ಲಿನ ಕ್ವಾರಿ ಸಂಪೂರ್ಣ ಸ್ಥಗಿತಕ್ಕೆ ನೋಟಿಸ್

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಆದೇಶ ಮಂಜುನಾಥ ಎಸ್. ರಾಠೋಡ ಗದಗ prajakiran.com : ಅಪಾರ ನೈಸರ್ಗಿಕ ಗಿಡಮೂಲಿಕೆ ಸಸ್ಯ ಸಂಪತ್ತು  ಹಾಗೂ ವನ್ಯಜೀವಿ ಧಾಮ ಎಂದು ಘೋಷಣೆಯಾದ “ಕಪ್ಪತಗುಡ್ಡ” ಅಂಚಿನಲ್ಲಿರುವ  14 ಕಲ್ಲಿನ ಕ್ವಾರಿಯನ್ನು ಸ್ಥಗಿತಗೊಳಿಸುವಂತೆ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಗಣಿ ಇಲಾಖೆ ಕಪ್ಪತಗುಡ್ಡದ ೧ ಕಿ.ಮೀ ವ್ಯಾಪ್ತಿಯಲ್ಲಿ ಬರುವ ೧೪ ಸಂಪೂರ್ಣ ಸ್ಥಗಿತಕ್ಕೆ ನೋಟೀಸ್ ನೀಡಿದೆ.  ೩೨,೩೪೬ ಹೆಕ್ಟೇರ್ ಪ್ರದೇಶ […]

ರಾಜ್ಯ

ಮಗನ ಸಾವಿನ ವಿಷಯ ತಿಳಿದು ಚಿಕ್ಕಪ್ಪ ಸಹ ಹೃದಯಾಘಾತದಿಂದ ಸಾವು

 ಯಜಮಾನತಿ ತಿಥಿಕಾರ್ಯ ಮಾಡಲು ಹೊರಟ ಕುಟುಂಬಕ್ಕೆ ಶಾಕ್ ಗದಗ  prajakiran.com : ಮನೆಯ ಯಜಮಾನತಿ ತಿಥಿಕಾರ್ಯ ಮಾಡಲು ಹೊರಟ ಕುಟುಂಬಕ್ಕೆ ತಂದೆ, ಮಗ ಒಂದೇ ದಿನ‌ ಸಾವನ್ನಪ್ಪುವ ಮೂಲಕ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಶಾಕ್ ಆದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ನಿವೃತ್ತ ಶಿಕ್ಷಕ ಕುಬೇರಪ್ಪ ಹೊಸಮನಿ(೬೦) ಹಾಗೂ ಅವರ ಸಹೋದರನ ಮಗ ಪ್ರವೀಣ್ ಹೊಸಮನಿ (೨೫) ಸಾವನ್ನಪ್ಪಿದ್ದಾರೆ. ಚಿಕ್ಕಪ್ಪ […]

ರಾಜ್ಯ

ಬಿಸಿಯೂಟ ತಯಾರಕರಿಗೆ ೬ ತಿಂಗಳಿಂದ ದೊರೆಯದ ವೇತನ

ಶಾಲಾ ಮಕ್ಕಳಿಗೆ ಎಣ್ಣೆ, ಹಾಲಿನ ಪುಡಿ ಸಿಕ್ಕಿಲ್ಲ…! ಜಿಲ್ಲೆಯಾದ್ಯಂತ ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಅಕ್ಕಿ, ಬೆಳೆ ವಿತರಣೆ ಮಂಜುನಾಥ ಎಸ್. ರಾಠೋಡ ಗದಗ prajakiran.com : ಕರೋನಾ ವೈರಸ್ ಕೋವಿಡ್–೧೯ ವೈರಸ್ ಸೋಂಕು ತಡೆಗಟ್ಟಲು ಹಾಗೂ ನಿಯಂತ್ರಿಸಲು ಸರ್ಕಾರಿ ಶಾಲೆಗಳು ಬಂದ್ ಆಗಿದ್ದರೂ ಮಕ್ಕಳ ಕಲಿಕೆಗೆ ತೊಂದರೆ ಆಗದಿರಲೆಂದು ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಆದರೆ, ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ದೊರೆಯುವ ಆಹಾರ ಪದಾರ್ಥಗಳಲ್ಲಿ ಅಕ್ಕಿ–ಬೆಳೆ ಮಾತ್ರವೇ ನೀಡಲಾಗಿದೆ. ಜಿಲ್ಲೆಯ ಕಿರಿಯ ಪ್ರಾಥಮಿಕ–೨೮೨, ಹಿರಿಯ ಪ್ರಾಥಮಿಕ ೬೪೧, ಪ್ರೌಢಶಾಲೆ ೩೨೩ […]

ರಾಜ್ಯ

ಕೃಷಿ ಪರಿಕರ ಮಾರಾಟ ಮಳಿಗೆಗೆ ನೋಟಿಸ್

ಗದಗ prajakiran.com : 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದು, ನೊಂದಾಯಿತವಲ್ಲದ ಪೀಡೆನಾಶಕ, ನಕಲಿ ಜೈವಿಕ ಉತ್ಪನ್ನಗಳ ಮಾರಾಟ ಹೆಚ್ಚುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಕೃಷಿ ಇಲಾಖೆಯ ಜಾರಿದಳ ವಿಭಾಗದ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ತಾಲೂಕಿನ ಮುಳಗುಂದ ಪಟ್ಟಣದಲ್ಲಿರುವ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಸಂಶಯಾತ್ಮಕ ಜೈವಿಕ ಉತ್ಪನ್ನಗಳಲ್ಲಿರುವ ಅಂಶಗಳನ್ನು ತಿಳಿಯಲು ಕೆಲವು ಉತ್ಪನ್ನಗಳ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಿದರು. ಶ್ರೀಸಾಯಿರಾಮ ಅಗ್ರೋ […]

ರಾಜ್ಯ

ಗದಗನಲ್ಲಿ ಮಳೆರಾಯನ ಅವಾಂತರಕ್ಕೆ ರಾತ್ರಿಯಿಡಿ ಜಾಗರಣೆ

ಜಲ್ಲಿಗೇರಿ ತಾಂಡಾ ಸಂಪೂರ್ಣ ಕೆರೆ ನೀರಲ್ಲೇ ರಾತ್ರಿಯಿಡೀ ಕಳೆದ ಜನತೆ ಗದಗ : ರಾತ್ರಿಯಿಡೀ ಸುರಿದ ರಣ ಮಳೆಯಿಂದಾಗಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಲವಡೆ ಅನೇಕ ಅವಾಂತರ ಸೃಷ್ಟಿಯಾಗಿವೆ. ಇದರಿಂದಾಗಿ ತಾಲೂಕಿನ ಜಲ್ಲಿಗೇರಿ ತಾಂಡಾ ಸಂಪೂರ್ಣ ಕೆರೆಯಂತಾಗಿದೆ.ತಾಂಡಾದ ಅನೇಕ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದು ರಾತ್ರಿಯಿಡೀ ಗ್ರಾಮಸ್ಥರು ಹೈರಾಣಾಗಿದ್ದಾರೆ. ತಡರಾತ್ರಿಯಿಂದ ನಸುಕಿನ ಜಾವದವರೆಗೂ ಸುರಿದ ವರುಣನ ಆರ್ಭಟಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಮಕ್ಕಳು, ವೃದ್ಧರು, ಮಹಿಳೆಯರು ನೀರಲ್ಲೇ ರಾತ್ರಿಯಿಡೀ ಕಳೆದ ಪರದಾಡಿದ್ದಾರೆ. ಗೃಹ ಉಪಯೋಗಿ ವಸ್ತುಗಳು […]

ಅಪರಾಧ

ಗದಗನಲ್ಲಿ 2.35 ಲಕ್ಷದ 20 ಮೋಬೈಲ್ ಮರಳಿಸಿದ ಪೊಲೀಸರು

ಗದಗ prajakiran.com : ಗದಗ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಟ್ಟು 2 ಲಕ್ಷದ 35 ಸಾವಿರ ಮೌಲ್ಯದ ವಿವಿಧ ಕಂಪನಿಯ 20 ಮೋಬೈಲ್ ಗಳನ್ನು ಪೊಲೀಸರು ಶ್ರಮ ವಹಿಸಿ ಪತ್ತೆ ಹಚ್ಚಿ ಮೂಲ ಮಾಲಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರದಿದ್ದಾರೆ. ಗದಗ ಎಸ್ ಪಿ , ಡಿಎಸ್ ಪಿ  ಅವರ ಮಾರ್ಗದರ್ಶನದಲ್ಲಿ ಗದಗ ಶಹರ ಪೊಲೀಸ್ ಠಾಣೆಯ ಸಿ ಪಿ ಐ   ಪಿ ವ್ಹಿ ಸಾಲಿಮಠ ಹಾಗೂ ಅಪರಾಧ ವಿಭಾಗದ ಪಿಎಸ್ ಐ  ಶ್ರೀಮತಿ ಜಿ ಟಿ ಜಕ್ಕಲಿ […]

ರಾಜ್ಯ

ಗದಗನಲ್ಲಿ ಇಬ್ಬರು ಆರೋಗ್ಯ ಅಧಿಕಾರಿಗಳ ಸಾವು

ಗದಗ prajakiran.com : ಗದಗ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶನಿವಾರ ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಕಿಡಿ ಕಾರಿದ ಪ್ರತಿಭಟನಾಕಾರರು ಒಂದೇ ವಾರದಲ್ಲಿ ಇಬ್ಬರು ಆರೋಗ್ಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಹಲವರಿಗೆ ಪಾಸಿಟಿವ್ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗದಗನ ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ  ಹಾಗೂ ಮಂಜುನಾಥ ತಳವಾರಿ (೪೫) ಕರೋನಾ ದಿಂದ ಸಾವನ್ನಪ್ಪಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಯಾಗಿದ್ದಾರೆ. ಕೋವಿಡ್ […]

ರಾಜ್ಯ

ಗದಗ ಜಿಲ್ಲೆಯ ಆರ್‌ಟಿಇ ಸೀಟು ೩೩೯ ಗೆ ಸೀಮಿತ….!

೨೦೧೮-೧೯ರಲ್ಲಿ ೧೮೦ ಶಾಲೆಗಳ ಪೈಕಿ ೧೨೦೦ ಸೀಟುಗಳು   ಬದಲಾದ ಮಾರ್ಗಸೂಚಿಯಿಂದ ಗಣನೀಯ ಇಳಿಕೆ ಮಂಜುನಾಥ ಎಸ್. ರಾಠೋಡ ಗದಗ prajakiran.com : ಬದಲಾದ ನಿಯಮಾವಳಿಗಳಿಂದಾಗಿ ಗದಗ ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೇವಲ ೪೨ ಖಾಸಗಿ ಶಾಲೆಗಳಲ್ಲಿ ೩೩೯ ಆರ್‌ಟಿಇ (ಕಡ್ಡಾಯ ಶಿಕ್ಷಣ ಹಕ್ಕು) ಸೀಟುಗಳು ಮಾತ್ರ ಲಭ್ಯವಾಗಲಿವೆ. ಸರ್ಕಾರದ ಹೊಸ ಮಾರ್ಗಸೂಚಿಯಿಂದಾಗಿ ಎರಡು ವರ್ಷಗಳಿಂದ ಆರ್‌ಟಿಇ ವ್ಯಾಪ್ತಿಗೆ ಒಳಪಡುವ ಶಾಲೆಗಳು ಮತ್ತು ಸೀಟುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ೨೦೧೮–೧೯ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೧೮೦ […]

ಜಿಲ್ಲೆ

ಗದಗನ ಶೇ. ೯೦ ಮಕ್ಕಳ ಕೈ ಸೇರಿದ ಪಠ್ಯಪುಸ್ತಕ

ಮಂಜುನಾಥ ಎಸ್. ರಾಠೋಡ ಗದಗprajakiran.com : ಕೊರೊನಾ ಭೀತಿಯಿಂದಾಗಿ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈಗಾಗಲೇ ಜಿಲ್ಲೆಯಲ್ಲಿ ಮಕ್ಕಳ ಮನೆಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ೨೦೨೦-೨೧ನೇ ಸಾಲಿಗೆ ಅಗತ್ಯವಿರುವ ಎಲ್ಲ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ೧ರಿಂದ ೧೦ನೇ ತರಗತಿವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಉಚಿತವಾಗಿ ಪಠ್ಯಪುಸ್ತಕಗಳನ್ನು ವಿತರಿಸುತ್ತಿದೆ. ಗದಗ ಶೈಕ್ಷಣಿಕ ಜಿಲ್ಲೆಯಲ್ಲಿ ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಿಗೆ ಪುಸ್ತಕಗಳು ಬಂದಿವೆ. […]