ರಾಜ್ಯ

ಗದಗ ಜಿಲ್ಲೆಯ ಕಪ್ಪತಗುಡ್ಡ ಅಂಚಿನ 14 ಕಲ್ಲಿನ ಕ್ವಾರಿ ಸಂಪೂರ್ಣ ಸ್ಥಗಿತಕ್ಕೆ ನೋಟಿಸ್

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಆದೇಶ

ಮಂಜುನಾಥ ಎಸ್. ರಾಠೋಡ

ಗದಗ prajakiran.com : ಅಪಾರ ನೈಸರ್ಗಿಕ ಗಿಡಮೂಲಿಕೆ ಸಸ್ಯ ಸಂಪತ್ತು  ಹಾಗೂ ವನ್ಯಜೀವಿ ಧಾಮ ಎಂದು ಘೋಷಣೆಯಾದಕಪ್ಪತಗುಡ್ಡಅಂಚಿನಲ್ಲಿರುವ  14 ಕಲ್ಲಿನ ಕ್ವಾರಿಯನ್ನು ಸ್ಥಗಿತಗೊಳಿಸುವಂತೆ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಗಣಿ ಇಲಾಖೆ ಕಪ್ಪತಗುಡ್ಡದ ೧ ಕಿ.ಮೀ ವ್ಯಾಪ್ತಿಯಲ್ಲಿ ಬರುವ ೧೪ ಸಂಪೂರ್ಣ ಸ್ಥಗಿತಕ್ಕೆ ನೋಟೀಸ್ ನೀಡಿದೆ. 

೩೨,೩೪೬ ಹೆಕ್ಟೇರ್ ಪ್ರದೇಶ ಹೊಂದಿರುವ ಕಪ್ಪತಗುಡ್ಡದ ಅಂಚಿನಲ್ಲಿ ೩೩ ಗ್ರಾಮಗಳಿದ್ದು, ಮೂರು ತಾಲೂಕುಗಳ ವಿಸ್ತಾರವನ್ನು ಹೊಂದಿದೆ.

ಗದಗ ತಾಲೂಕಿನ ೨೧೩೪.೮೬ ಹೆಕ್ಟೇರ್ ಪ್ರದೇಶ, ಶಿರಹಟ್ಟಿ ತಾಲೂಕಿನಲ್ಲಿ ೪೯೭೫.೧೩ ಹೆಕ್ಟೇರ್ ಮತ್ತು ಮುಂಡರಗಿ ತಾಲೂಕಿನ ೧೬೨೯೧.೬೮ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಒಳಗೊಂಡಿದೆ.

ಇದರಲ್ಲಿ ಕಪ್ಪತಗುಡ್ಡವನ್ನು ನಾಲ್ಕು ಬ್ಲಾಕ್ಗಳಲ್ಲಿ ವಿಂಗಡಿಸಿ ೨೪,೪೧೫ ಹೆಕ್ಟೆರ್ ಪ್ರದೇಶವನ್ನು ವನ್ಯಜೀವಿಧಾಮ ಎಂದು . , ೨೦೧೯ರಂದು ಘೋಷಣೆ ಮಾಡಲಾಗಿದೆ.

ಇದರ ವ್ಯಾಪ್ತಿಯ ಕಲ್ಲುಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ನವದೆಹಲಿ ೨೦೧೯ ಅಗಷ್ಟ ರಂದು ಆದೇಶ ನೀಡಿತ್ತು.

ಇದಾದ ಬರೊಬ್ಬರಿ ಒಂದು ವರ್ಷದ ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ವ್ಯಾಪ್ತಿಯ ೧೪ ಕಲ್ಲಿನ ಕ್ವಾರಿ ಸ್ಥಗಿತಕ್ಕೆ ನೋಟಿಸ್ ನೀಡಿದೆ. ೧೪ ಕಲ್ಲಿನ ಕ್ವಾರಿಗಳು ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿವೆ.

 ಜಿಲ್ಲಾಡಳಿತದ ಮೇಲೆ ಪ್ರಭಾವ ಬೀರಿ ಒಂದು ವರ್ಷ ವಿಳಂಭಗೊಳಿಸಿ ಕೋಟ್ಯಾಂತರ ಕಪ್ಪುಶಿಲೆ ಕೊಳ್ಳೆಹೊಡೆಯಲಾಗಿದೆ. ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕ್ವಾರಿಯಲ್ಲಿ ಶಕ್ತಿಶಾಲಿ ಜಿಲೆಟಿನ್ ಸ್ಫೋಟ ನಡೆಸಲಾಗುತ್ತಿದೆ. ಹೆಚ್ಚಾಗಿ ಪಾಸ್ ರಹಿತವಾಗಿ ಕಡಿಯನ್ನು ಟಿಪ್ಪರ ಮೂಲಕ ಸಾಗಿಸಲಾಗುತ್ತದೆ.

ಉದ್ಯಮಿಗಳು ಸರ್ಕಾರಕ್ಕೆ ವಂಚಿಸಿರುವ ಪ್ರಕರಣದ ಹಿಂದೆ ಕೆಲವು ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಕಪ್ಪತಗುಡ್ಡವನ್ನು ಪರಿಸರ ಸೂಕ್ಷ್ಮ ವಲಯವನ್ನು ನಿಗದಿಪಡಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಪ್ರದೇಶದ ಗಡಿಯಿಂದ ಕನಿಷ್ಠ . ಕಿ.ಮೀನಿಂದ ಗರಿಷ್ಠ ಕಿ.ಮೀ ವ್ಯಾಪ್ತಿವರೆಗೆ ಕರಿಕಲ್ಲು ಗಣಿಗಾರಿಕೆ, ಕ್ವಾರಿ ಹಾಗೂ ಇನ್ನಿತರ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು ೨೦೧೯ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ.

ಮೊದಲು ೨೦೧೮ ರಲ್ಲಿ ವನ್ಯಜೀವಿಧಾಮದ ಸುತ್ತಲೂ ಅರಣ್ಯ ಇಲಾಖೆಯು ಸುಪ್ರೀಂ ಕೋರ್ಟ್ ಸೂಚನೆಯಂತೆ ಅರಣ್ಯದ ಗಡಿಭಾಗದಿಂದ ೧೦ ಕಿ.ಮೀ ವ್ಯಾಪ್ತಿಯವರೆಗೂ ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಬೇಕಾಗಿತ್ತು.

ಕಪ್ಪತ್ತಗುಡ್ಡ ವನ್ಯಜೀವಿಧಾಮದ ಕಿ.ಮೀ. ವ್ಯಾಪ್ತಿಗೆ ಬರುವ ಕಲ್ಲಿನ ಕ್ವಾರಿ ಸ್ಥಗಿತಗೊಳಿಸಲು ಗಣಿ ಇಲಾಖೆ ನೋಟಿಷ್ ನೀಡಿದ್ದು, ಯಾವ ಪರುಷಾರ್ಥಕ್ಕೆ.? ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆಯನ್ನು ಗಣಿ ಇಲಾಖೆ ಗಾಳಿಗೆ ತೂರಿದೆ ಎಂದು ಹಲವು ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ೩೦೦ಕ್ಕೂ ಹೆಚ್ಚು ಜಲ್ಲಿ ಕ್ರಶರ್ಗಳಿವೆಪ್ರತಿ ದಿನ ಹಗಲುರಾತ್ರಿ ಎನ್ನದೆ ಬಂಡೆ ಸಿಡಿಸಲು ಬೋರ್ವೆಲ್ ಡ್ರಿಲ್ನಿಂದ ೫೦ರಿಂದ ೧೦೦ ಅಡಿ ಆಳ ಕೊರೆದು ಸ್ಫೊಟಿಸಲಾಗುತ್ತಿದೆ.

ಇದರ ಪೂರ್ತಿ ಜಿಲಿಟಿನ್ ತುಂಬಿ ಕಲ್ಲು ಸ್ಪೋಟಿಸುವದರಿಂದ ಸುತ್ತ ಮುತ್ತ ನಾಲ್ಕು ಕಿ.ಮೀ ದವರೆಗೂ ಭೂಮಿ ಕಂಪಿಸುತ್ತದೆ.

ಜಿಲ್ಲೆಯಲ್ಲಿ ಬಹುತೇಕ ಪಾಸ್ ರಹಿತವಾಗಿ ಪ್ರತಿ ದಿನ  ಟಪ್ಪರ್ಗಳಲ್ಲಿ ಜೆಲ್ಲಿ, ಎಂಸ್ಯಾಂಡ್, ಕಡಿಯನ್ನು ಸಾಗಿಸಲಾಗುತ್ತಿದೆ.

ಇದರಿಂದ ಸುತ್ತಮುತ್ತಲ ನೂರಾರು ಗ್ರಾಮಗಳು ನಿತ್ಯ ರಾತ್ರಿ ನಡುಗುತ್ತವೆ. ಮನೆಯಲ್ಲಿರುವ ಪಾತ್ರೆ ಸಾಮಗ್ರಿಗಳು ಅಲುಗಾಡಿ ಬೀಳುತ್ತಿವೆ.

ಮನೆಯ ಗೋಡೆಗಳು ಬಿರುಕು ಬಿಟ್ಟು ಬಡವರ ಮನೆಗಳು ನೆಲಕ್ಕುರುಳುವ ಹಂತಕ್ಕೆ ತಲುಪಿವೆ ಎಂದು ಅನೇಕ ಗ್ರಾಮಸ್ಥರು ಅಳಲುತೋಡಿಕೊಂಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *