ರಾಜ್ಯ

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಗೆ ಬರೋಬ್ಬರಿ ಕ್ಲಾಸ್ ತೆಗೆದುಕೊಂಡ ಶೆಟ್ಟರ್

ಹುಬ್ಬಳ್ಳಿ prajakiran.com : ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ಅವ್ಯವಹಾರ, ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಅದರ ವಿರುದ್ದ ಕಣ್ಣುಮುಚ್ಚಿಕೊಂಡು ಕುಳಿತಿರುವುದು ನೋಡಿದರೆ ನಮಗೆ ನಾಚಿಕೆ ಆಗ್ತಿದೆ ಸ್ವಾಮಿ  ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಗೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಆಗಿರುವ ಹಿರಿಯ ನಾಗರಿಕ ಎ. ಶೆಟ್ಟರ್ ಎಂಬುವವರು ಬರೋಬ್ಬರಿ 8.55 ನಿಮಿಷಗಳ ಕಾಲ ಕ್ಲಾಸ್ ತೆಗೆದುಕೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶೆಟ್ಟರ್  ಅವರೇ ನಿಮಗೆ ನೋಡಿ ಜನ ಮತ ಹಾಕಿಲ್ಲ.ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿಯವರ ನಾಯಕತ್ವ ನೋಡಿ ಮತ ಹಾಕಿದ್ದಾರೆ.

ನಿಮಗೆ ಬಿಜೆಪಿ ಕಾರ್ಯಕರ್ತಅಂತ ಹೇಳಿಕೊಳ್ಳಲು ಕೂಡ ಒಂದು ಹೆಮ್ಮೆ ಬೇಕು. ಈಗಲಾದರೂ ಕೆಲಸ ಮಾಡಬೇಕು ಎಂದು ಎನ್ನಿಸಿದರೆ  ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಗುಡುಗಿದ್ದಾರೆ.

ಹುಬ್ಬಳ್ಳಿಯ ವಿದ್ಯಾವನ ಕಾಲೋನಿಯ ಕೊಚ್ಚೆಗುಂಡಿಯಲ್ಲಿ ನಿಮ್ಮ ಭಾವಚಿತ್ರವಿಟ್ಟು ಅಲ್ಲಿಯ ಜನತೆ ರಂಗೋಲಿ ಹಾಕಿ ನಿಮ್ಮ ವಿರುದ್ದಆಕ್ರೋಶ ಹೊರ ಹಾಕಿದ್ದಾರೆ.

ಈಗಲಾದರೂ ಎಚ್ಚೆತ್ತುಕೊಳ್ಳಿ ಸ್ವಾಮಿ. ನಿಮಗೆ ಆಕಸ್ಮಿಕವಾಗಿ ಕೆಲಸ ಮಾಡಬೇಕು ಎನ್ನಿಸಿದರೆ ಮಾಡಿ ಸದ್ಯಕ್ಕೆ 2 ವರ್ಷಗಳಿಂದ ಹೊಸೂರು ರಸ್ತೆ ಬಿಟ್ಟು ಹುಬ್ಬಳ್ಳಿ_ಧಾರವಾಡದ ಯಾವ ರಸ್ತೆಯೂ ಅಭಿವೃದ್ದಿಕಂಡಿಲ್ಲ. ಜನರ ಕಷ್ಟರಅರಿವಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಿಮಗೇನು ಗೊತ್ತಾಗಬೇಕು ಸ್ವಾಮಿ ಬಡವರ ಕಷ್ಟ, ಸರಕಾರ ಪುಗಸೆಟ್ಟೆ ಕಾರು, ಡಿಸೇಲ್ ಕೊಡ್ತಾರೆ ಐಷರಾಮಿ ಬಂಗಲೇ, ಹೋಟೆಲ್ ಗಳಲ್ಲಿ ಉಳಿತಿರಿ ಎಂದು ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಿಂದ 25 ವರ್ಷಗಳಿಂದ ಶಾಸಕರಾಗಿದ್ದಿರಿ, ವಿರೋಧ ಪಕ್ಷದ ನಾಯಕರಾಗಿರಿ, ಸಿಎಂ ಆಗಿರಿ, ಕಂದಾಯ ಸಚಿವರಾದ್ರಿ, ಬೃಹತ್ ಕೈಗಾರಿಕಾ ಸಚಿವರಾದ್ರಿ ಒಳ್ಳೆಯ ಕೆಲಸ ಮಾಡಬೇಕು ಅಂತ ಮನಸ್ಸಿಗೆ ಬೇಕಲ್ಲ ಎಂದು ಛೇಡಿಸಿದ್ದಾರೆ.

ಉತ್ತರಕರ್ನಾಟಕದ ಜನತೆಗೆ ಗೊತ್ತಿದೆ ನಿಮ್ಮ ಯೋಗ್ಯತೆ, ನೀವು ಯಾವ ಘನಂದಾರಿ ಕೆಲಸ ಮಾಡಿಲ್ಲ.  ಶಾಸಕರಾಗಲು ನಿಮ್ಮಶ್ರಮ ಎಳ್ಳು ಕಾಳು ಇಲ್ಲ.

ಅಟಲಬಿಹಾರಿ ವಾಜಪೇಯಿ ನರೇಂದ್ರ ಮೋದಿ ನೇತೃತ್ವಕ್ಕೆ ಮನ್ನಣೆ ನೀಡಿ ಜನ ನಿಮ್ಮನ್ನು ಆರಿಸಿದ್ದಾರೆ. ಜನ ನಿಮಗೇನು ನೌಕರಿ ಕೇಳ್ತಾರಾ, ಆಸ್ತಿ ಕೇಳತ್ತಾರೆಯೇ ಎಂದು ಕಿಡಿಕಾರಿದ್ದಾರೆ.

ಕನಿಷ್ಟ ಮೂಲಸೌಲಭ್ಯ, ವಿದ್ಯುತ್, ನೀರು, ಪ್ರಾಥಮಿಕ ಆರೋಗ್ಯ ಕೇಂದ್ರ, ಒಳ್ಳೆಯ ರಸ್ತೆ ಕೊಡಕ್ಕೆ ಆಗ್ತಿಲ್ಲ ಎಂದರೆ ಎನು ಅರ್ಥ ಎಂದು ಕುಟುಕಿದ್ದಾರೆ.

 ಬಿಜೆಪಿ ಕಾರ್ಯಕರ್ತ ಎ ಶೆಟ್ಟರ್ ವಿರುದ್ದ ಹೊರ ಹಾಕಿದ ಆಕ್ರೋಶದ ಕಿಡಿನುಡಿಯ ವೀಡಿಯೋ ಇದೀಗ ಹುಬ್ಬಳ್ಳಿ ಧಾರವಾಡ ಜನತೆ ಮನಮುಟ್ಟಿದ್ದು ವೀಡಿಯೋ ವೈರಲ್ ಆಗಿದೆ. ನಿಮ್ಮ ಯೋಗ್ಯತೆಗೆ ಒಂದು ಸುಸಜ್ಜಿತ ರಸ್ತೆ ಕೊಡೊಕೆ ಆಗಲಿಲ್ಲವೇ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *