ಅಪರಾಧ

ಗದಗನಲ್ಲಿ 2.35 ಲಕ್ಷದ 20 ಮೋಬೈಲ್ ಮರಳಿಸಿದ ಪೊಲೀಸರು

ಗದಗ prajakiran.com : ಗದಗ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಟ್ಟು 2 ಲಕ್ಷದ 35 ಸಾವಿರ ಮೌಲ್ಯದ ವಿವಿಧ ಕಂಪನಿಯ 20 ಮೋಬೈಲ್ ಗಳನ್ನು ಪೊಲೀಸರು ಶ್ರಮ ವಹಿಸಿ ಪತ್ತೆ ಹಚ್ಚಿ ಮೂಲ ಮಾಲಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರದಿದ್ದಾರೆ.

ಗದಗ ಎಸ್ ಪಿ , ಡಿಎಸ್ ಪಿ  ವರ ಮಾರ್ಗದರ್ಶನದಲ್ಲಿ ಗದಗ ಶಹರ ಪೊಲೀಸ್ ಠಾಣೆಯ ಸಿ ಪಿ   ಪಿ ವ್ಹಿ ಸಾಲಿಮಠ ಹಾಗೂ ಅಪರಾಧ ವಿಭಾಗದ ಪಿಎಸ್   ಶ್ರೀಮತಿ ಜಿ ಟಿ ಜಕ್ಕಲಿ ಇವರ ನೇತೃತ್ವದಲ್ಲಿ  ಸಿಬ್ಬಂದಿಗಳಾದ  ವ್ಹಿ ಎಸ್ ಶೆಟ್ಟಣ್ಣವರ ,ಬಿ ಜಿ ಹೊರಕೇರಿ, ಆರ್ ಜಿ ಬೇವಿನಕಟ್ಟಿ. ಹನುಮಂತ ಯಡಿಯಾಪೂರ, ಪಿ ಎಸ್ ಕಲ್ಲೂರ ಡಿಪಿಓ ಗದಗ ಸಿಬ್ಬಂದಿಯಾದ ಗುರು ಬೂದಿಹಾಳ ಇವರ ದಕ್ಷ ಹಾಗೂ ಪ್ರಮಾಣಿಕತೆಯಿಂದ ಈ ಜಾಲವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ

ಗದಗ ಶಹರ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಮೋಬೈಲ್ ಕಳೆದುಕೊಂಡ ಜನತೆ ಮತ್ತೆ ಮರಳಿ ಮೊಬೈಲ್ ಸಿಕ್ಕ ಖುಷಿಯಲ್ಲಿರುವ ಜನರು  ಅಧಿಕಾರಿಗಳಿಗೆ ,ಸಿಬ್ಬಂದಿಗಳಿಗೆ ಹೃದಯಪೂರ್ವಕ ಧನ್ಯವಾದಗಳು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *