ರಾಜ್ಯ

ಗದಗ ಜಿಲ್ಲೆಯ ಆರ್‌ಟಿಇ ಸೀಟು ೩೩೯ ಗೆ ಸೀಮಿತ….!

೨೦೧೮-೧೯ರಲ್ಲಿ ೧೮೦ ಶಾಲೆಗಳ ಪೈಕಿ ೧೨೦೦ ಸೀಟುಗಳು  

ಬದಲಾದ ಮಾರ್ಗಸೂಚಿಯಿಂದ ಗಣನೀಯ ಇಳಿಕೆ

ಮಂಜುನಾಥ ಎಸ್. ರಾಠೋಡ

ಗದಗ prajakiran.com : ಬದಲಾದ ನಿಯಮಾವಳಿಗಳಿಂದಾಗಿ ಗದಗ ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೇವಲ ೪೨ ಖಾಸಗಿ ಶಾಲೆಗಳಲ್ಲಿ ೩೩೯ ಆರ್‌ಟಿಇ (ಕಡ್ಡಾಯ ಶಿಕ್ಷಣ ಹಕ್ಕು) ಸೀಟುಗಳು ಮಾತ್ರ ಲಭ್ಯವಾಗಲಿವೆ.

ಸರ್ಕಾರದ ಹೊಸ ಮಾರ್ಗಸೂಚಿಯಿಂದಾಗಿ ಎರಡು ವರ್ಷಗಳಿಂದ ಆರ್ಟಿಇ ವ್ಯಾಪ್ತಿಗೆ ಒಳಪಡುವ ಶಾಲೆಗಳು ಮತ್ತು ಸೀಟುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ೨೦೧೮೧೯ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೧೮೦ ಶಾಲೆಗಳಲ್ಲಿ ,೨೦೦ಕ್ಕೂ ಹೆಚ್ಚು ಆರ್ಟಿಇ ಸೀಟುಗಳು ಲಭ್ಯವಾಗಿದ್ದವು.

ಸೀಟುಗಳ ಸಂಖ್ಯೆ ಕಡಿತ:

೨೦೧೯-೨೦ನೇ ಸಾಲಿನ ಶೈಕ್ಷಣಿಕ ವರ್ಷಾರಂಭದಲ್ಲಿ ಆರ್‌ಟಿಇ ನಿಯಮಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದ ರಿಂದ ಆರ್‌ಟಿಇ ಶಾಲೆಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡಿತ್ತು.

ಹೊಸ ನಿಯಮದ ಪ್ರಕಾರ, ಗ್ರಾಮ ಅಥವಾ ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದರೆ ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಹಾಗಾಗಿ ಶಾಲೆ ಹಾಗೂ ಸೀಟುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

ಆರ್‌ಟಿಇ ಹೊಸ ನಿಯಮಾವಳಿ ನಂತರ ೨೦೧೯-೨೦ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೪೨ ಶಾಲೆಗಳ ಪೈಕಿ ಆರ್‌ಟಿಇ ೩೩೮ ಸೀಟುಗಳು ಲಭ್ಯ ಇದ್ದವು.

ಆದರೆ, ೨೦೮ ವಿದ್ಯಾರ್ಥಿಗಳು ಅರ್ಹತೆಯನ್ನು ಹೊಂದಿದ್ದು, ಕೇವಲ ೧೧೬ ಜನ ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದರು.

ಕೋವಿಡ್-೧೯ ಕಾರಣದಿಂದಾಗಿ ಶಾಲೆಗಳ ಪುನರಾರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಳ್ಳದೇ ಇದ್ದರೂ ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ ಅಡಿಯಲ್ಲಿ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

೨೦೨೦-೨೧ನೇ ಸಾಲಿನಲ್ಲಿ ೪೨ ಶಾಲೆಗಳ ಪೈಕಿ ೩೩೯ ಸೀಟುಗಳಿದ್ದು, ಅದರಲ್ಲಿ ೧೭೪ ವಿದ್ಯಾರ್ಥಿಗಳು ನೇಮಕರಾಗಿದ್ದಾರೆ. ಅದರಲ್ಲಿ ೬೩ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.

ಖಾಸಗಿ, ಅನುದಾನಿತ ಶಾಲೆಗಳಲ್ಲಿ ಶೇ ೨೫ರಷ್ಟು ಸೀಟುಗಳನ್ನು ಬಡ ಕುಟುಂಬಗಳ ಮಕ್ಕಳಿಗೆ ಮೀಸಲಿಡಬೇಕು ಎಂಬುದು ಆರ್‌ಟಿಇ ಕಾಯ್ದೆಯ ನಿಯಮ. ಅದರಂತೆ ಜಿಲ್ಲೆಯಲ್ಲಿ ೪೨ ಶಾಲೆಗಳನ್ನು ಗುರುತಿಸಲಾಗಿದೆ.

ನಿಯಮಗಳ ಅನುಸಾರ ಜಿಲ್ಲೆಗೆ ಈ ವರ್ಷ ೩೩೮ ಸೀಟುಗಳು ಹಂಚಿಕೆಯಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ ಜಿ.ಎಂ ತಿಳಿಸಿದರು.

ಸದ್ಯ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ಲಭ್ಯವಿರುವ ಸೀಟುಗಳ ಸಂಖ್ಯೆಯಲ್ಲಿ ಪರಿಷ್ಕರಣೆ ನಡೆದಿದೆ. ಮೊದಲ ಸುತ್ತಿನಲ್ಲಿ ೧೭೪ ಮಕ್ಕಳ ಹೆಸರುಗಳ ಪಟ್ಟಿ ಬಿಡುಗಡೆಯಾಗಿದೆ. ಶೀಘ್ರ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಬಹುತೇಕ ಜನವಸತಿ ಪ್ರದೇಶಗಳಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇವೆ. ಕೇವಲ ೪೨ ಜನವಸತಿ ಪ್ರದೇಶಗಳಲ್ಲಿ ಮಾತ್ರ ರೀತಿಯ ಶಾಲೆಗಳು ಇಲ್ಲದಿರುವುದದರಿಂದ ಆರ್ಟಿಇಗೆ ಅವಕಾಶ ನೀಡಲಾಗಿದೆ

” ೨೦೧೯–೨೦ನೇ ಸಾಲಿನಲ್ಲಿ ೩೩೮ ಆರ್‌ಟಿಇ ಸೀಟುಗಳಲ್ಲಿ ೧೧೬ ಮಕ್ಕಳು ಮಾತ್ರ ದಾಖಲಾಗಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿರುವ ೩೩೯ ಸೀಟುಗಳು ಭರ್ತಿಯಾಗುವಂತೆ ಶ್ರಮ ವಹಿಸಲಾಗುತ್ತಿದೆ.

ಬಿಇಒ ಮೂಲಕ ಆರ್‌ಟಿಇ ಸೀಟು ಸಿಕ್ಕಿರುವ ಮಕ್ಕಳ ಪೋಷಕರಿಗೆ ಕರೆಮಾಡಿ ಮನವೊಲಿಸುತ್ತೇವೆ.” 

 – ಬಸವಲಿಂಗಪ್ಪ ಜಿ.ಎಂ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗದಗ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *