ರಾಜ್ಯ

ಕೃಷಿ ಪರಿಕರ ಮಾರಾಟ ಮಳಿಗೆಗೆ ನೋಟಿಸ್

ಗದಗ prajakiran.com : 2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದು, ನೊಂದಾಯಿತವಲ್ಲದ ಪೀಡೆನಾಶಕ, ನಕಲಿ ಜೈವಿಕ ಉತ್ಪನ್ನಗಳ ಮಾರಾಟ ಹೆಚ್ಚುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಕೃಷಿ ಇಲಾಖೆಯ ಜಾರಿದಳ ವಿಭಾಗದ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ತಾಲೂಕಿನ ಮುಳಗುಂದ ಪಟ್ಟಣದಲ್ಲಿರುವ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.

ಸಂಶಯಾತ್ಮಕ ಜೈವಿಕ ಉತ್ಪನ್ನಗಳಲ್ಲಿರುವ ಅಂಶಗಳನ್ನು ತಿಳಿಯಲು ಕೆಲವು ಉತ್ಪನ್ನಗಳ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಿದರು.

ಶ್ರೀಸಾಯಿರಾಮ ಅಗ್ರೋ ಕೇಂದ್ರ ಮತ್ತು ಶ್ರೀಬಸವೇಶ್ವರ ಫರ್ಟಿಲೈರ್ಸ್ ಮಾರಾಟ ಮಳಿಗೆಗಳಲ್ಲಿ ಕೀಟನಾಶಕದ ಕಾಯ್ದೆಯ ಉಲ್ಲಂಘನೆ ಸಂಬಂಧ ನೋಟೀಸ್ ಜಾರಿ ಮಾಡಿದರು.

ಮಾರಾಟ ಮಳಿಗೆಗಳು ನ್ಯೂನ್ಯತೆಗಳನ್ನು ಸರಿಪಡಿಸಕೊಳ್ಳಬೇಕು ಎಂದು ಸೂಚಿಸಿದರು.

ಅಲ್ಲದೇ, ಜಿಲ್ಲೆಯ ಎಲ್ಲ ಕೃಷಿ ಪರಿಕರ ಮಾರಾಟಗಾರರು ಜೈವಿಕ ಹೆಸರಿನಡಿ ಕೀಟನಾಶಕ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಅಥವಾ ವಿಶ್ಲೇಷಣೆಗೆ ಒಳಪಡಿಸಿ, ವಿಶ್ಲೇಷಣಾ ವರದಿಯಲ್ಲಿ ಪೀಡೆನಾಶಕ ಅಂಶಗಳು ಕಂಡುಬಂದಲ್ಲಿ ನಿಯಮಾನುಸಾರ ಕೀಟನಾಶಕ ಕಾಯ್ದೆ ಮತ್ತು ಕೀಟನಾಶಕ ನಿಯಮದಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಂತೋಷ ಪಟ್ಟದಕಲ್ ಎಂದು ತಿಳಿಸಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *