ರಾಜ್ಯ

ಧಾರವಾಡದಲ್ಲಿ 17 ಅಂಗಡಿಗಳ ಸೀಲ್ ಡೌನ್ …!

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಕೊರೊನಾ ಪರೀಕ್ಷೆಯನ್ನು ಶುಕ್ರವಾರವೂ ಮುಂದುವರೆಸಲಾಗಿದ್ದು, ಈ ವೇಳೆ ಪಾಸಿಟಿವ್ ಕಂಡು ಬಂದ 17ಅಂಗಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ಒಟ್ಟು ಮೂರು ತಂಡಗಳು ಕಾರ್ಯಾಚರಣೆ ನಡೆಸಿದ ಪರಿಣಾಮ ಧಾರವಾಡ ನಗರದ ಪ್ರಮುಖ   ಮಾರುಕಟ್ಟೆ ಪ್ರದೇಶಗಳಲ್ಲಿ ನೂರಾರು ಜನರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇದರಿಂದಾಗಿ ಕೆಲವು ಪ್ರದೇಶಗಳಲ್ಲಿ ಅಂಗಡಿ, ವಾಣಿಜ್ಯ ಸಂಕೀರ್ಣ ಮತ್ತು ಬೀದಿಬದಿಯ ವ್ಯಾಪಾರಿಗಳು ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟಗೆ ಸ್ವಯಂ ಪ್ರೇರಿತವಾಗಿ ಒಳಪಟ್ಟರೆ ಕೆಲವರು ಅಸಹಕಾರ ನೀಡಿ ತಮ್ಮ  ಅಂಗಡಿಗಳನ್ನು […]

ಅಪರಾಧ

ವಿದ್ಯಾನಗರಿ ಧಾರವಾಡದಲ್ಲಿ ಹಾಡಹಗಲೇ ಇಬ್ಬರಿಗೆ ಚೂರಿ ಇರಿತ….!

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಗುರುವಾರ ಸಂಜೆ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದಿದೆ. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಾಡಹಗಲೇ ಇಬ್ಬರಿಗೆ ಚೂರಿ ಇರಿದು ಆರೋಪಿಗಳು ಪರಾರಿಯಾದ ಘಟನೆ ನಡೆದಿದೆ. ಇದರಿಂದಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ‌. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರು ಮೊರ್ಚೆ ಹೋಗಿದ್ದರೆ, ಇನ್ನೊಬ್ಬರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ತಿಳಿದುಬಂದಿದೆ. ಚಾಕು ಇರಿತ ಮಾಹಿತಿ ತಿಳಿದು ಧಾರವಾಡದ ಸಪ್ತಾಪುರ ಸರರ್ಕಲ್ ನಲ್ಲಿ ಕೆಲ […]

ರಾಜ್ಯ

ಧಾರವಾಡದಲ್ಲಿ ಕರೊನಾ ಟೆಸ್ಟ್ ಗೆ ಹೆದರಿ ಅಂಗಡಿ ಬಂದ್ ಮಾಡಿದ ವ್ಯಾಪಾರಸ್ಥರು…!

ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಕರೊನಾ ಟೆಸ್ಟ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗುರುವಾರ ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ಹಾಗೂ ಧಾರವಾಡದ ಸುಭಾಸ ರಸ್ತೆಯಲ್ಲಿ ನೂರಾರು ವ್ಯಾಪಾರಸ್ಥರನ್ನು ಕರೊನಾ ಟೆಸ್ಟ್ ಗೆ ಒಳಪಡಿಸಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮುಂದೆ ನಿಂತು ವ್ಯಾಪಾರಿಗಳನ್ನು ಕರೆಸಿ ಸಂಚಾರ ವಾಹನದಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಕರೊನಾ ಟೆಸ್ಟ್ ಮಾಡಿಸಿದ್ದಾರೆ. ಇದರಿಂದಾಗಿ ದುರ್ಗದ ಬೈಲ್‌ನಲ್ಲಿ 100ಕ್ಕೂ ಹೆಚ್ಚು ವ್ಯಾಪಾರಿಗಳ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ […]

ರಾಜ್ಯ

ಶಿಕ್ಷಕರಿಗೆ ಕೋವಿಡ್ ವಿಮೆ ಪರಿಹಾರ ನೀಡಲು ಒತ್ತಾಯ

ಬೆಂಗಳೂರು prajakiran.com :  ಕೋವಿಡ್-19 ಕರ್ತವ್ಯ ನಿರತ ಅವಶ್ಯಕ ಇಲಾಖೆಯ ಅಧಿಕಾರಿ/ ನೌಕರರು ಮೃತರಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ  ಆರೋಗ್ಯ, ನಗರಾಭಿವೃದ್ಧಿ ಹಾಗೂ ಪೊಲೀಸ್ ಇಲಾಖೆಗೆ ಮಾತ್ರ ವಿಮಾ ಪರಿಹಾರ  ಮೊತ್ತವನ್ನು ನೀಡಲಾಗುತ್ತಿದೆ. ಆದರೆ ಹಲವಾರು ಇಲಾಖೆಯ ಅಧಿಕಾರಿ/ ನೌಕರರನ್ನು ಕೋವಿಡ್ -19 ರ ಕರ್ತವ್ಯದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಶಿಕ್ಷಕರು ಇತ್ತೀಚೆಗೆ ಕೋವಿಡ್  ಸಮೀಕ್ಷೆ ವೇಳೆ ಮರಣ ಹೊಂದಿದ್ದು  ಅವರ ಕುಟುಂಬದವರಿಗೆ ವಿಮೆ/ ಪರಿಹಾರವನ್ನು ನೀಡಲು ರಾಜ್ಯ ಸರಕಾರಿ ನೌಕರರ ಸಂಘದಅಧ್ಯಕ್ಷ ಷಡಕ್ಷರಿ ಒತ್ತಾಯಿಸಿದ್ದಾರೆ. […]

ರಾಜ್ಯ

ಧಾರವಾಡದ ಹೇಮಾಮಾಲಿನಿ ಇನ್ನು ನೆನಪು ಮಾತ್ರ….!

ಕೊಪ್ಪಳ Prajakiran.com : ಕಳೆದ ಹಲವು ದಶಕಗಳಿಂದ ಧಾರವಾಡದ ಸಹಸ್ರಾರು ಜನರ ಪ್ರೀತಿ ಗೌರವಕ್ಕೆ ಪಾತ್ರವಾದ ಇಂದುಬಾಯಿ ವಾಜಪೇಯಿ ಅಲಿಯಾಸ್ ಧಾರವಾಡದ ಹೇಮಾಮಾಲಿನಿ ನಿನ್ನೆ ಮಧ್ಯರಾತ್ರಿ ಕೊಪ್ಪಳದ ಆಶ್ರಮದಲ್ಲಿ ವಿಧಿವಶರಾಗಿದ್ದಾರೆ. ಕಳೆದ ಹಲವು ದಿನಗಳಿಂದಅಲ್ಲಿಯೇ ಆಶ್ರಯ ಪಡೆದಿದ್ದಅವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. ಅವರು ಇದಕ್ಕೂ ಮೊದಲು ರಾಯಾಪುರದ ನಿರ್ಗತಿಕರ ಕೇಂದ್ರದಲ್ಲಿ ರಕ್ಷಣೆ ಪಡೆದಿದ್ದರು. ಇದಕ್ಕೂ ಮೊದಲು ಅವರು ನೂರಾರು ಜನರಿಗೆ ಭಿಕ್ಷೆ ಬೇಡದೆ ಸ್ವಾಭಿಮಾನದಿಂದ ಬದುಕುವ ಪಾಠ ಹೇಳಿ ಮಾದರಿಯಾಗಿದ್ದರು. ಧಾರವಾಡದ ಪ್ರತಿ ಬೀದಿ ಆಳಿದ-ಅಲೆದ ಇಂದುಬಾಯಿ […]

ರಾಜ್ಯ

ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕು ಕೋವಿಡ್ ಪಾಸಿಟಿವ್

ಧಾರವಾಡ prajakiran.com : ಜಿಲ್ಲೆಯಲ್ಲಿ ಗುರುವಾರ 180 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3908 ಕ್ಕೆ ಏರಿದೆ. ಆ ಮೂಲಕ ಇದುವರೆಗೆ 1807 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1977 ಪ್ರಕರಣಗಳು ಸಕ್ರಿಯವಾಗಿವೆ.  39 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 124 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಗುರುವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು: ಧಾರವಾಡ ತಾಲೂಕು: ಮದಿಹಾಳ, ಜನ್ನತ್ ನಗರ,ಲಕಮಾಪುರ ಗ್ರಾಮ, ಲಕ್ಷ್ಮೀ ನಗರ ವಿದ್ಯಾಗಿರಿ, ರಸಾಲಪುರ ಓಣಿ, […]

ರಾಜ್ಯ

ಧಾರವಾಡದ ಸಾಧನಕೇರಿ, ದಾಂಡೇಲಿ ನಿವಾಸಿ ಸೇರಿ ಎಂಟು ಜನ ಸಾವು

ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಏಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಎಂಟು ಜನ ಕಳೆದ ಆರು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ. ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ  ನಿವಾಸಿ ಪಿ-64647 ( 74,ಮಹಿಳೆ), ಹುಬ್ಬಳ್ಳಿಯ ಕಮಡೊಳ್ಳಿ ಗಲ್ಲಿ  ನಿವಾಸಿ  ಪಿ-82942 (64,ಮಹಿಳೆ), ಹುಬ್ಬಳ್ಳಿ ಆಜಾದ್ ರಸ್ತೆಯ ನಿವಾಸಿ ಪಿ-73492 (71,ಪುರುಷ), ಹುಬ್ಬಳ್ಳಿ ಮಂಗಳಾ ಓಣಿ  ನಿವಾಸಿ ಪಿ-60017 (84, […]

ರಾಜ್ಯ

ರಾಜ್ಯದಲ್ಲಿ ಗುರುವಾರ ಸೋಂಕಿಗೆ ಬರೋಬ್ಬರಿ 83 ಸಾವು, 6128 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಗುರುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 83 ಜನ ಸಾವನ್ನಪ್ಪಿದ್ದಾರೆ. ಮತ್ತೆ ಹೊಸದಾಗಿ 6128 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,18,632 ಕ್ಕೆ ಏರಿಕೆಯಾಗಿದೆ.  ಇಂದು ರಾಜ್ಯದಲ್ಲಿ 3793 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  46,694 ಜನ ಗುಣಮುಖರಾಗಿದ್ದು, 69,700 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 620 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ […]

ರಾಜ್ಯ

ಧಾರವಾಡ ನ್ಯಾಯಾಲಯದ ಮಹತ್ವದ ಆದೇಶ : ಭೂಗತ ಪಾತಕಿ ಬಚ್ಚಾಖಾನ್ ಗೆ ಎರಡು ವರ್ಷ ಸಜೆ

ಧಾರವಾಡ prajakiran.com : ಧಾರವಾಡ ಕೇಂದ್ರ ಕಾರಾಗೃಹದಲ್ಲಿ 2010ರ ಮೇ 23 ರಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬಚ್ಚಾಖಾನ್ ಗೆ ಎರಡು ವರ್ಷ ಸಜೆ ವಿಧಿಸಿ ಧಾರವಾಡ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಧಾರವಾಡ 2ನೇ‌  ಅಧಿಕ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ಗೌ. ನ್ಯಾಯಾಧೀಶೆಯರಾದ ಶ್ರೀಮತಿ ಪಂಚಾಕ್ಷರಿ.ಎಮ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.    ಆರೋಪಿ ಎ 1) ಬಚ್ಚಾಖಾನ @ಯೂಸೂಪ ತಂದೆ […]

ರಾಜ್ಯ

ಧಾರವಾಡದ ಸುಭಾಷ ರಸ್ತೆ, ಟಿಕಾರೆ ರಸ್ತೆ ಸೇರಿ ಹಲವು ಸ್ಥಳಗಳಲ್ಲಿ ಇಂದಿನಿಂದ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಅವಳಿ ನಗರದ ಹೆಚ್ಚು ಜನಸಂದಣಿ ಇರುವ ಮಾರುಕಟ್ಟೆಗಳಲ್ಲಿ ಜು.೩೦ರಂದು ಗುರುವಾರದಿಂದ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಅನ್ನು ಮಿಷನ್ ಮೋಡ್‌ದಲ್ಲಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಅವರು ಕೋವಿಡ್-೧೯ ನ್ನು ನಿಗ್ರಹಿಸುವುದಕ್ಕಾಗಿ ಜಿಲ್ಲಾಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷತಾ ಕ್ರಮಗಳ ಅನುಷ್ಠಾನ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೊನಾ ನಿಯಂತ್ರಣಕ್ಕಾಗಿ […]