ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಏಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಬ್ಬರು ಸೇರಿ ಒಟ್ಟು ಎಂಟು ಜನ ಕಳೆದ ಆರು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಿಳಿಸಿದೆ.
ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಿವಾಸಿ ಪಿ-64647 ( 74,ಮಹಿಳೆ),
ಹುಬ್ಬಳ್ಳಿಯ ಕಮಡೊಳ್ಳಿ ಗಲ್ಲಿ ನಿವಾಸಿ ಪಿ-82942 (64,ಮಹಿಳೆ),
ಹುಬ್ಬಳ್ಳಿ ಆಜಾದ್ ರಸ್ತೆಯ ನಿವಾಸಿ ಪಿ-73492 (71,ಪುರುಷ),
ಹುಬ್ಬಳ್ಳಿ ಮಂಗಳಾ ಓಣಿ ನಿವಾಸಿ ಪಿ-60017 (84, ಮಹಿಳೆ),
ಹಳೇ ಹುಬ್ಬಳ್ಳಿ ವಿಶಾಲ ನಗರ ನಿವಾಸಿ ಪಿ-112306 (80,ಮಹಿಳೆ),
ಹುಬ್ಬಳ್ಳಿ ಉಣಕಲ್ ಸಾಯಿನಗರ ನಿವಾಸಿ ಪಿ-59338 (72, ಮಹಿಳೆ),
ಧಾರವಾಡ ಸಾಧನಕೇರಿ ಎಂಪವರ್ ಕಾಲೇಜು ಹತ್ತಿರದ ನಿವಾಸಿ ಪಿ-106138 ( 82,ಪುರುಷ),
ಹುಬ್ಬಳ್ಳಿ ಮಂಟೂರ ರಸ್ತೆಯ ನಿವಾಸಿ ಪಿ-93797 ( 68,ಪುರುಷ)
ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು. ಕೋವಿಡ್ ನಿಯಮಾನುಸಾರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ