ರಾಜ್ಯ

ಧಾರವಾಡ ನ್ಯಾಯಾಲಯದ ಮಹತ್ವದ ಆದೇಶ : ಭೂಗತ ಪಾತಕಿ ಬಚ್ಚಾಖಾನ್ ಗೆ ಎರಡು ವರ್ಷ ಸಜೆ

ಧಾರವಾಡ prajakiran.com : ಧಾರವಾಡ ಕೇಂದ್ರ ಕಾರಾಗೃಹದಲ್ಲಿ 2010ರ ಮೇ 23 ರಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬಚ್ಚಾಖಾನ್ ಗೆ ಎರಡು ವರ್ಷ ಸಜೆ ವಿಧಿಸಿ ಧಾರವಾಡ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಧಾರವಾಡ 2ನೇ‌  ಅಧಿಕ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ಗೌ. ನ್ಯಾಯಾಧೀಶೆಯರಾದ ಶ್ರೀಮತಿ ಪಂಚಾಕ್ಷರಿ.ಎಮ್ ಅವರು ಈ ಮಹತ್ವದ ಆದೇಶ ಹೊರಡಿಸಿದ್ದಾರೆ.   

ಆರೋಪಿ ಎ 1) ಬಚ್ಚಾಖಾನ @ಯೂಸೂಪ ತಂದೆ ಸುಲೇಮಾನ ಖಾದ್ರಿ ಗೆ ಎರಡು ವರ್ಷ ಸಜೆ ಹಾಗೂ ಒಂದು ಸಾವಿರ ರೂಪಾಯಿ ದಂಡ, ಎ 2) ಶಂಕರಗೌಡ @ ಬೆತ್ತನಗೇರಿ ಶಂಕ್ರಾ ತಂದೆ ಗೋಪಾಲಗೌಡಗೆ ಒಂದು ವರ್ಷ ಸಜೆ ಹಾಗೂ ಒಂದು ಸಾವಿರ ರೂಪಾಯಿ ದಂಡ,

ಮತ್ತುಆರೋಪಿ ನಂ 3) ಮುನಿರಾಜು ತಂದೆ ಹನಮಂತರಾಯಪ್ಪ ಹಾಗೂ ಎ 5 ನೇ ಆರೋಪಿ ಜಾವೇದ ತಂದೆ ಶಮಶಾದಲಿ @ ಶಾಮೀದಅಲಿ ಡಲಾಯತ ಗೆ ತಲಾ ಆರು ತಿಂಗಳ ಸಜೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.  

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ‌ ಅಭಿಯೋಜಕೀಯರಾದ ಸರೋಜಾ ಹೊಸಮನಿ ವಾದ ಮಂಡಿಸಿದ್ದರು.

ಪ್ರಕರಣದ ವಿವರ :

ಸಜಾ ಬಂಧಿಯಾದ 1 ನೇ ಆರೋಪಿ ಮುಂಬೈ ಮೂಲದ ಬಚ್ಚಾಖಾನ @ಯೂಸೂಪ ತಂದೆ ಸುಲೇಮಾನ ಖಾದ್ರಿ (38), ವಿಚಾರಣಾ ಬಂಧಿಗಳಾದ ಆರೋಪಿ ನಂ.2 ಬೆತ್ತನಗೇರಿ ಮೂಲದ ಶಂಕರಗೌಡ @ ಬೆತ್ತನಗೇರಿ ಶಂಕ್ರಾ ತಂದೆ ಗೋಪಾಲಗೌಡ (28 ), ಆರೋಪಿ ನಂ 3  ಮುನಿರಾಜು ತಂದೆ ಹನಮಂತರಾಯಪ್ಪ (24 ) ಆರೋಪಿತರು ತಮ್ಮ ಕೊಠಡಿಗಳನ್ನು ಶೋಧನೆ ಮಾಡಲು ಹೋದ ಪೊಲೀಸರಿಗೆ ನೀವ್ಯಾರು ಅಂತ ಕೂಗಾಡಿದ್ದರು.

ಅಲ್ಲದೆ, ಆರೋಪಿ ನಂ. 4 ಬೆಳಗಾವಿಯ ಇಕ್ಬಾಲಖಾನ ತಂದೆ ಅಮೀರಖಾನ ಪಠಾಣ (42), ಮತ್ತು ಧಾರವಾಡದ 5 ನೇ ಆರೋಪಿತನಾದ ಜಾವೇದ ತಂದೆ ಶಮಶಾದಲಿ @ ಶಾಮೀದಅಲಿ ಡಲಾಯತ (18) ಹಾಗೂ 10-15 ಜನ ಅಪರಿಚಿತ ಖೈದಿಗಳಿಗೆ ಕೂಗಿ ಕರೆದು, ಅವರಿಗೆ ಪ್ರೋತ್ಸಾಹಿಸಿ, ಪೊಲೀಸರ ಖಲಾಸ ಮಾಡಿರಿ, ಜೀವಸಹಿತ ಉಳಿಸಬೇಡರಿ ಎಂದುಇತರ ಖೈದಿಗಳಿಗೆ ಪ್ರಚೋದನೆ ನೀಡಿದ್ದರು.

ಸರಕಾರಿ ಕರ್ತವ್ಯಕ್ಕೆ ಅಡತಡೆ ಮಾಡಿ, ಹಲ್ಲೆ, ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕೆ ಸಂಬಂಧಿಸಿದಂತೆ ಕಲಂ 143, 147, 148, 114, 323, 324, 307, 353, 341, 506 ಸಹ ಕಲಂ 149 ಐಪಿಸಿ.‌ನೇದರ ಅಡಿಯಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆ ಪಿ ಎಸ್ ಐ   ಮುರುಗೇಶ ಚನ್ನಣ್ಣವರ (ತನಿಖಾಧಿಕಾರಿ) ಹಾಗೂ‌ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ (ಭಾಗಶಃ ತನಿಖಾಧಿಕಾರಿ) ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *