ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಕರೋನಾ ಸೇನಾನಿಗಳನ್ನು ಬೆಂಬಿಡದೆ ಕಾಡುತ್ತಿದೆ ಎಂದರೆ ತಪ್ಪಾಗಲಾರದು.
ಈಗಾಗಲೇ ಹುಬ್ಬಳ್ಳಿ-ಧಾರವಾಡಅವಳಿ ನಗರದ 50ಕ್ಕೂಹೆಚ್ಚು ಕರೋನಾ ಸೇನಾನಿಗಳನ್ನು ಬಳಲಿ ಬೆಂಡಾಗುವಂತೆ ಮಾಡಿದ್ದ ಕರೋನಾ ಇದೀಗ ಧಾರವಾಡ ಟೌನ್ ಮಹಿಳಾ ಪಿ ಎಸ್ ಐ ಗೆ ತಗುಲಿದೆ.
ಇದರಿಂದಾಗಿ ಧಾರವಾಡ ಟೌನ್ ಪೊಲೀಸ್ ಠಾಣೆಯ ಹಲವು ಸಿಬ್ಬಂದಿ ಮತ್ತೇ ಆತಂಕಗೊಂಡಿದ್ದು, ಬೆಚ್ಚಿ ಬಿದ್ದಿದ್ದಾರೆ.
ಹೀಗಾಗಿ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ತಪಾಸಣೆಗೆ ಮುಂದಾಗಿದ್ದಾರೆ.
ಅಲ್ಲದೆ, ಕೆಲವರು ಸ್ವಯಂ ಪ್ರೇರಿತವಾಗಿ ಕ್ವಾರಂಟಿನ್ ಗೆ ಒಳಗಾಗಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಕೂಡ ಧಾರವಾಡ ಟೌನ್ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಒಬ್ಬರಿಗೆ ಕರೋನಾ ವಕ್ಕರಿಸಿತ್ತು.
ಅವರು ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದ ಬೆನ್ನಲ್ಲೇ ಮಹಿಳಾ ಪಿ ಎಸ್ ಐ ಗೆ ಕರೋನಾ ವ್ಯಾಪಿಸಿರುವುದು ಮತ್ತೇ ಕಳವಳ ಮೂಡಿಸಿರುವುದು ಸುಳ್ಳಲ್ಲ.