ಅಪರಾಧ

ಧಾರವಾಡದಲ್ಲಿ ಮೊಬೈಲ್ ಅಂಗಡಿ, ಮನೆಗಳ್ಳತನ ಮಾಡಿದ ಮೂವರ ಬಂಧನ

ಧಾರವಾಡ prajakiran.com : ನಗರದ ಅಕ್ಕಿಪೇಟೆಯಲ್ಲಿನ ಬಾಬತ್ ಜ್ಯೋತಿಬಾ ಹೆಸರಿನ ಮೊಬೈಲ್ ಅಂಗಡಿ ಕಳ್ಳತನ ಮಾಡಿ, ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಕೃಷ್ಣಾ ಕೇದಾರಪ್ಪ ಜಾಧವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಬೆಲೆಬಾಳುವ ಮೊಬೈಲ್ ಕದ್ದು ಪರಾರಿಯಾದವರನ್ನ ಬಂಧನ ಮಾಡಿದಾಗ, ವಿದ್ಯಾಗಿರಿಯಲ್ಲಿ ನಡೆದ ಮನೆಗಳ್ಳತನದ ಪ್ರಕರಣವೂ ಬಯಲಿಗೆ ಬಂದಿದೆ. , ಬಂಧಿತರನ್ನ ಧಾರವಾಡ ಹೊಸಯಲ್ಲಾಪುರ ಮಿಣಜಗಿ ಚಾಳದ ವಿನೋದ ದುಂಡಪ್ಪ ಕಿರ್ಗಿ, ಕಲಘಟಗಿ ತಾಲೂಕಿನ […]

ರಾಜ್ಯ

ಧಾರವಾಡ ಟೌನ್ ಪೊಲೀಸ್ ಠಾಣೆಯ ಮಹಿಳಾ ಪಿ ಎಸ್ ಐ ಗೆ ಕರೋನಾ ….!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಕರೋನಾ ಸೇನಾನಿಗಳನ್ನು ಬೆಂಬಿಡದೆ ಕಾಡುತ್ತಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಹುಬ್ಬಳ್ಳಿ-ಧಾರವಾಡಅವಳಿ ನಗರದ 50ಕ್ಕೂಹೆಚ್ಚು ಕರೋನಾ ಸೇನಾನಿಗಳನ್ನು ಬಳಲಿ ಬೆಂಡಾಗುವಂತೆ ಮಾಡಿದ್ದ ಕರೋನಾ ಇದೀಗ ಧಾರವಾಡ ಟೌನ್ ಮಹಿಳಾ ಪಿ ಎಸ್ ಐ ಗೆ ತಗುಲಿದೆ. ಇದರಿಂದಾಗಿ ಧಾರವಾಡ ಟೌನ್ ಪೊಲೀಸ್ ಠಾಣೆಯ ಹಲವು ಸಿಬ್ಬಂದಿ ಮತ್ತೇ ಆತಂಕಗೊಂಡಿದ್ದು, ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ತಪಾಸಣೆಗೆ ಮುಂದಾಗಿದ್ದಾರೆ. […]

ಅಪರಾಧ

ಧಾರವಾಡದ ನಡು ರಸ್ತೆಯಲ್ಲಿ ಮಟ ಮಟ ಮಧ್ಯಾಹ್ನ ‘ಚಾಕು’ ನಿಂದ ದಾಳಿ…!

ಧಾರವಾಡ prajakiran.com : ಮಟ ಮಟ ಮಧ್ಯಾಹ್ನ ಇಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ ಘಟನೆ ಶುಕ್ರವಾರ ಧಾರವಾಡದ ನಡು ರಸ್ತೆಯಲ್ಲಿ ನಡೆದಿದೆ. ಧಾರವಾಡದ ಹಣ್ಣಿನ ಮಾರುಕಟ್ಟೆ ಯಲ್ಲಿ ಈ ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ. ಗೌಸ್ ಎಂಬಾತನ ಉಪಟಳ ‌ತಾಳದೇ ಸುಭಾನ್ ಅಲಿಯಾಸ್ ಚಾಕು ಎಂಬಾತ ಗೌಸನ ತಲೆಗೆ ಕಲ್ಲಿನಿಂದ ಬಲವಾಗಿ ಹೊಡೆದಿದ್ದರಿಂದ ಗೌಸ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಇದನ್ನು ಕಂಡ ಮಾರುಕಟ್ಟೆಯಲ್ಲಿನ ಕೆಲ ಅಂಗಡಿಕಾರರು ತಮ್ಮ ಅಂಗಡಿಗಳಿಗೆ ಬೀಗ ಹಾಕಿಕೊಂಡು […]

ರಾಜ್ಯ

ಧಾರವಾಡದಲ್ಲಿ ಕರೊನಾ ಗೆದ್ದ ಮಹಿಳಾ ಹೆಡ್ ಕಾನ್ಸಟೇಬಲ್ ಗೆ ಅದ್ದೂರಿ ಸ್ವಾಗತ

ಧಾರವಾಡ prajakiran.com  :  ಹುಬ್ಭಳ್ಳಿ-ಧಾರವಾಡದ ಕೋರೋನಾ ಫ್ರೆಂಟ್ ಲೈನ್ ವಾರಿಯರ್ಸ್ ಗಳಾದ ಪೊಲೀಸರಿಗೂ ಕೋರೋನಾ ಕರಿ ಛಾಯೆ ಬಿದ್ದಿದ್ದು, ಮತ್ತೆ ಅದನ್ನ ಜಯಿಸಿ ಮರಳಿ ಕರ್ತವ್ಯಕ್ಕೆ ಬಂದವರಿಗೆ ಸನ್ಮಾನ ಮಾಡಲಾಗುತ್ತಿದೆ. ಅದರಲ್ಲೂ ಧಾರವಾಡದ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಕೂಡಾ ಒಬ್ಬರು. ಕರ್ತವ್ಯದ ಮಧ್ಯದಲ್ಲೇ ಕರೊನಾ‌ ಸೋಂಕು ತಗುಲಿದ್ದ ಮುಲ್ಲಾ ಬೇಗಂ ಸದ್ಯ ‌ಗುಣಮುಖರಾಗಿ ಸೇವೆಗೆ ಹಾಜರಾಗಿದ್ದಾರೆ. ಹೀಗಾಗಿ ಅವರಿಗೆ ಧಾರವಾಡದ ಎಸಿಪಿ‌ ಅನುಷಾಅವರ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಧಾರವಾಡ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಈ ಅಪರೂಪದ ಘಟನೆಗೆ ಸಾಕ್ಷಿಯಾದರು. […]