ರಾಜ್ಯ

ರೈಲ್ವೆ ಹಳಿ ಮೇಲೆ ಕೆಟ್ಟು ನಿಂತ ಬಸ್ : ತಪ್ಪಿದ ಭಾರಿ ಅನಾಹುತ

ಧಾರವಾಡ prajakiran.com : ಬಸ್ಸವೊಂದು ರೈಲ್ವೆ ಹಳಿ ಮೇಲೆ ಕೆಟ್ಟು ನಿಂತ ಪರಿಣಾಮ ಭಾರಿ ಅನಾಹುತವೊಂದು ತಪ್ಪಿದ ಘಟನೆ ಧಾರವಾಡದಲ್ಲಿ ಭಾನುವಾರ ನಡೆದಿದೆ. ನಗರದ ಹಳಿಯಾಳ ರಸ್ತೆಯಲ್ಲಿರುವ ಗಣೇಶ ನಗರದ ಬಳಿ ರೈಲ್ವೆ ಗೇಟ್ ಈ ಘಟನೆ ನಡೆದಿದೆ. ಧಾರವಾಡದಿಂದ ದಾಂಡೇಲಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಏಕಾಏಕಿ ಕೆಟ್ಟು ನಿಂತಿತ್ತು. ಈ ಸಮಯದಲ್ಲಿ ಯಾವುದೇ ಟ್ರೈನ್ ಇಲ್ಲದಿರುವುದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.   ತಕ್ಷಣ ಎಚ್ಚೆತ್ತುಕೊಂಡ ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಬಸ್ ಅನ್ನು ರೈಲ್ವೆ […]

ರಾಜ್ಯ

ಧಾರವಾಡದಲ್ಲಿ ಚಲಿಸುತ್ತಿದ್ದ ಕಾರ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ

ಧಾರವಾಡ prajakiran.com : ರಸ್ತೆಯಲ್ಲಿ ಚಲಿಸುತ್ತಿದ್ದ ಕಾರ್ ನಲ್ಲಿ ಏಕಾಎಕಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಸುವರ್ಣ ಪೆಟ್ರೋಲ್ ಬಂಕ್ ಬಳಿ ತಡರಾತ್ರಿ ನಡೆದ ಘಟನೆ ಇದಾಗಿದ್ದು, ಹಠಾತ್ ಬೆಂಕಿ ಕಾಣಿಸಿಕೊಂಡು ಕಾರು ಹೋತ್ತಿ ಉರಿದ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಆತಂಕ ಉಂಟಾಗಿತ್ತು. ನವನಗರದಿಂದ ಧಾರವಾಡ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಸ್ಥಳಿಯರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇದರಿಂದಾಗಿ […]

ರಾಜ್ಯ

ಧಾರವಾಡ ಟೌನ್ ಪೊಲೀಸ್ ಠಾಣೆಯ ಮಹಿಳಾ ಪಿ ಎಸ್ ಐ ಗೆ ಕರೋನಾ ….!

ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಕರೋನಾ ಸೇನಾನಿಗಳನ್ನು ಬೆಂಬಿಡದೆ ಕಾಡುತ್ತಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಹುಬ್ಬಳ್ಳಿ-ಧಾರವಾಡಅವಳಿ ನಗರದ 50ಕ್ಕೂಹೆಚ್ಚು ಕರೋನಾ ಸೇನಾನಿಗಳನ್ನು ಬಳಲಿ ಬೆಂಡಾಗುವಂತೆ ಮಾಡಿದ್ದ ಕರೋನಾ ಇದೀಗ ಧಾರವಾಡ ಟೌನ್ ಮಹಿಳಾ ಪಿ ಎಸ್ ಐ ಗೆ ತಗುಲಿದೆ. ಇದರಿಂದಾಗಿ ಧಾರವಾಡ ಟೌನ್ ಪೊಲೀಸ್ ಠಾಣೆಯ ಹಲವು ಸಿಬ್ಬಂದಿ ಮತ್ತೇ ಆತಂಕಗೊಂಡಿದ್ದು, ಬೆಚ್ಚಿ ಬಿದ್ದಿದ್ದಾರೆ. ಹೀಗಾಗಿ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ತಪಾಸಣೆಗೆ ಮುಂದಾಗಿದ್ದಾರೆ. […]

ಅಪರಾಧ

ಧಾರವಾಡದ ನಡು ರಸ್ತೆಯಲ್ಲಿ ಮಟ ಮಟ ಮಧ್ಯಾಹ್ನ ‘ಚಾಕು’ ನಿಂದ ದಾಳಿ…!

ಧಾರವಾಡ prajakiran.com : ಮಟ ಮಟ ಮಧ್ಯಾಹ್ನ ಇಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ ಘಟನೆ ಶುಕ್ರವಾರ ಧಾರವಾಡದ ನಡು ರಸ್ತೆಯಲ್ಲಿ ನಡೆದಿದೆ. ಧಾರವಾಡದ ಹಣ್ಣಿನ ಮಾರುಕಟ್ಟೆ ಯಲ್ಲಿ ಈ ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ. ಗೌಸ್ ಎಂಬಾತನ ಉಪಟಳ ‌ತಾಳದೇ ಸುಭಾನ್ ಅಲಿಯಾಸ್ ಚಾಕು ಎಂಬಾತ ಗೌಸನ ತಲೆಗೆ ಕಲ್ಲಿನಿಂದ ಬಲವಾಗಿ ಹೊಡೆದಿದ್ದರಿಂದ ಗೌಸ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಇದನ್ನು ಕಂಡ ಮಾರುಕಟ್ಟೆಯಲ್ಲಿನ ಕೆಲ ಅಂಗಡಿಕಾರರು ತಮ್ಮ ಅಂಗಡಿಗಳಿಗೆ ಬೀಗ ಹಾಕಿಕೊಂಡು […]

ರಾಜ್ಯ

ಧಾರವಾಡ ಜಿಲ್ಲೆಯ ಅಣ್ಣಿಗೇರಿ, ನವಲಗುಂದ, ಕುಂದಗೋಳ, ಕಲಘಟಗಿಯಲ್ಲೂ ಕರೋನಾ ಅಟ್ಟಹಾಸ

ಧಾರವಾಡ ಕೋವಿಡ್ 4087 ಕ್ಕೇರಿದ ಪ್ರಕರಣಗಳು 1871 ಜನ ಗುಣಮುಖ ಬಿಡುಗಡೆ* ಧಾರವಾಡ prajakiran.com :  ಜಿಲ್ಲೆಯಲ್ಲಿ ಶುಕ್ರವಾರ 180 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4087 ಕ್ಕೆ ಏರಿದೆ. ಇದುವರೆಗೆ 1871 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2085 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 131 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. *ಶುಕ್ರವಾರ ಪತ್ತೆಯಾದ ಪ್ರಕರಣಗಳ ಸ್ಥಳಗಳು:* *ಧಾರವಾಡ ತಾಲೂಕು:* ಮದಿಹಾಳ, ಉಪಕಾರಾಗೃಹ […]

ಆಧ್ಯಾತ್ಮ

ಧಾರವಾಡದ ಮೃತ್ಯುಂಜಯ ನಗರ, ನಾರಾಯಣಪುರ ನಿವಾಸಿ ಸೇರಿ ಜಿಲ್ಲೆಯ 7 ಜನ ಸಾವು

ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಏಳು  ಜನ ಕಳೆದ ಐದು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. ಆ ಮೂಲಕ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 3728 ಕ್ಕೆ ಏರಿದೆ. ಇದುವರೆಗೆ 1654 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ. 1958 ಪ್ರಕರಣಗಳು ಸಕ್ರಿಯವಾಗಿವೆ. 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 116ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ.  ಮೃತ ಸೋಂಕಿತರನ್ನು ಹುಬ್ಬಳ್ಳಿ ನೇಕಾರ ನಗರ ನಿವಾಸಿ ಪಿ-94157 (56,ಪುರುಷ),   ಧಾರವಾಡ  ಮೃತ್ಯುಂಜಯ ನಗರ ನಿವಾಸಿ ಪಿ-94633 (60,ಪುರುಷ),  […]

ಆಧ್ಯಾತ್ಮ ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಬುಧವಾರ 7 ಸಾವು, 175 ಜನರಿಗೆ ಕರೋನಾ

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಬುಧವಾರ ಸಂಜೆ ಮತ್ತೆ ಹೊಸದಾಗಿ   175 ಜನರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 3731 ಕ್ಕೆ ಏರಿಕೆಯಾದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೇಟಿನ್ ತಿಳಿಸಿದೆ.  ಧಾರವಾಡ ಜಿಲ್ಲೆಯಲ್ಲಿ ಬುಧವಾರವು  7 ಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಆ ಮೂಲಕ, ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದವರಸಂಖ್ಯೆ  116 ಕ್ಕೆ ಏರಿದಂತಾಗಿದೆ.   ಬುಧವಾರ […]